2024-25 ನೇ ಸಾಲಿನ ಸಮಾಜ ಕಲ್ಯಾಣ ಇಲಾಖೆಯಿಂದ ಪರೀಕ್ಷಾ ಪೂರ್ವ ತರಬೇತಿ ಜೊತೆಗೆ ಊಟ, ವಸತಿಯೊಂದಿಗೆ ಉಚಿತ IAS ತರಬೇತಿ ನೀಡಲು ಪದವಿ ಓದುತ್ತಿರುವ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಪಿಯುಸಿ ಪಾಸಾದ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ ವಿದ್ಯಾರ್ಥಿಗಳ ಪಿಯುಸಿ ಪಾಸಾದ ನಂತರ ಪದವಿ ಜೊತೆಗೆ ಪರೀಕ್ಷಾ ಪೂರ್ವ ತರಬೇತಿ ಪಡೆಯಬೇಕು ಎನ್ನುವ ಅಭ್ಯರ್ಥಿಗಳಿಗೆ ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ಉಚಿತ ಯು.ಪಿ.ಎಸ್. ಸಿ ತರಬೇತಿ ನೀಡಲು ಅರ್ಹ ಅಭ್ಯರ್ಥಿಗಳಿಂದ ಆನ್‌ಲೈನ್ ಅರ್ಜಿ ಆಹ್ವಾನಿಸಿದೆ.
IAS Free Coaching Karnataka:
ಪ್ರಯೋಜನಗಳು:
BA/B.Sc /B.Com ಪದವಿ ಓದುತ್ತಿರುವ ವಿದ್ಯಾರ್ಥಿಗಳು ಉಚಿತ ಹಾಸ್ಟೆಲ್ ನೊಂದಿಗೆ UPSC ತಯಾರಿಗೆ Free Coaching ಸಹ ಪಡೆಯಬಹುದು ಉತ್ತಮ ಅವಕಾಶವಿದು.
ಈ ವರ್ಷ ಸರಕಾರವೇ 150 ಅಭ್ಯರ್ಥಿಗಳಿಗೆ ಆಯ್ಕೆ ಮಾಡಿ ಪ್ರತಿವರ್ಷ ಪ್ರತಿ ಅಭ್ಯರ್ಥಿಗೆ 2 ಲಕ್ಷ ದಂತೆ 3 ವರ್ಷದ ಸಂಪೂರ್ಣ ವೆಚ್ಚ ಭರಿಸುತ್ತದೆ.
ಅರ್ಹತಾ ಮಾನದಂಡಗಳು:
ಕರ್ನಾಟಕದ ನಿವಾಸಿ ಆಗಿರಬೇಕು.
ದ್ವೀತಿಯ ಪಿಯುಸಿ ಪಾಸಾಗಿರಬೇಕು.
ಅಂಗವಿಕಲ ಅಭ್ಯರ್ಥಿಗಳು ವಿಕಲಾಂಗ ಪ್ರಮಾಣ ಪತ್ರ
BA/B.Sc /B.Com ಪದವಿ ಓದುತ್ತಿರಬೇಕು.
17 ವರ್ಷ ಪೂರೈಸಿರಬೇಕು.
ಅರ್ಜಿದಾರರ ಕುಟುಂಬದ ವಾರ್ಷಿಕ ಆದಾಯ 5 ಲಕ್ಷ ಮೀರಿರಬಾರದು.
ಆಯ್ಕೆ ವಿಧಾನ:
ಯಾವುದೇ ಪರೀಕ್ಷೆ ಇಲ್ಲದೇ, ನೇರವಾಗಿ PUC ಅಂಕಗಳ ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ.
ಕೋಚಿಂಗ್ ಸೆಂಟರ್:
ಈ ವರ್ಷ ಧಾರವಾಡ ಮತ್ತು ಬೆಂಗಳೂರು ಕೇಂದ್ರಗಳಲ್ಲಿ ಮಾತ್ರ ತರಬೇತಿ ಪಡೆಯಲು ಅವಕಾಶವಿದೆ. ಇತರೆ ಸಂಪೂರ್ಣ ಮಾಹಿತಿಗಾಗಿ ಈ ಅಧಿಸೂಚನೆ ಓದಿ.
ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 31/07/2024
ಪ್ರಮುಖ ಲಿಂಕ್‌ಗಳು:
ಅಧಿಸೂಚನೆ ನೋಡಲು: ಇಲ್ಲಿ ಕ್ಲಿಕ್ ಮಾಡಿ
ಆನ್‌ಲೈನ್ ಅರ್ಜಿ ಸಲ್ಲಿಸಲು: ಇಲ್ಲಿ ಕ್ಲಿಕ್ ಮಾಡಿ
ವೆಬ್‌ಸೈಟ್ ವಿಳಾಸ: swdservices.karnataka.gov.in