ಭಾರತ ಮತ್ತು ಶ್ರೀಲಂಕಾ ನಡುವಿನ ODI ಸರಣಿ ವೇಳಾಪಟ್ಟಿ, ಉಭಯ ತಂಡಗಳ ಪಟ್ಟಿ | India vs Sri Lanka ODI Time Table

WhatsApp Group Join Now
Telegram Group Join Now

India vs Sri Lanka: ಭಾರತ ಮತ್ತು ಶ್ರೀಲಂಕಾ ನಡುವಿನ ಓಡಿಐ ಸರಣಿ ಆಗಸ್ಟ್ 2 ರಿಂದ ಪ್ರಾರಂಭವಾಗಲಿದೆ. ಈ ಸರಣಿಯಲ್ಲಿ ಉಭಯ ತಂಡಗಳ ನಡುವೆ ಮೂರು ಪಂದ್ಯಗಳು ನಡೆಯಲಿವೆ, ಈ ಸರಣಿಯನ್ನು ಶ್ರೀಲಂಕಾದ ಕೊಲಂಬೊದ ಆರ್​ ಪ್ರೇಮದಾಸ ಕ್ರೀಡಾಂಗಣ ಆತಿಥ್ಯವಹಿಸಲಿದೆ. ಈ ಸರಣಿ ಮೂಲಕ ಟೀಮ್ ಇಂಡಿಯಾದ ದಿಗ್ಗಜರು ಮರು ಆಗಮನ ಆಗಲಿದೆ.

ಈಗಷ್ಟೇ ಭಾರತ ಮತ್ತು ಶ್ರೀಲಂಕಾ ನಡುವಿನ T20 ಸರಣಿ ಮುಕ್ತಾಯವಾಗಿದೆ. ಸೂರ್ಯಕುಮಾರ್ ನಾಯಕತ್ವ ಭಾರತದ ತಂಡವು ಮೂರು ಪಂದ್ಯಗಳಲ್ಲಿ 3-0 ಅಂತರದಿಂದ ಗೆಲುವು ತನ್ನದಾಗಿಸಿಕೊಂಡಿತು . ಮೊದಲನೇ ಪಂದ್ಯದಲ್ಲಿ 43 ರನ್​ಗಳ ಗೆಲುವು ಸಾಧಿಸಿತು, ಎರಡನೇ ಪಂದ್ಯದಲ್ಲಿ 7 ವಿಕೆಟ್​ಗಳ ಅಂತರದ ಗೆಲುವು ಸಾಧಿಸಿತು. ಮತ್ತೆ 3ನೇ ಪಂದ್ಯವು ಕೊನೆಯ ಓವರ್ ವರಗೆ ತಲುಪಿ ಸೂಪರ್​ ಓವರ್​ನಲ್ಲಿ ಗೆಲುವನ್ನು ತನ್ನದಾಗಿಸಿಕೊಂಡಿತು ಭಾರತ ತಂಡ ಈ ಸರಣಿಯಲ್ಲಿ ಯಶಸ್ವಿಯಾಗಿದೆ.

ಭಾರತ ಮತ್ತು ಶ್ರೀಲಂಕಾ ತಂಡಗಳ ನಡುವೆ ಆಗಸ್ಟ್ 2 ರಿಂದ ಪ್ರಾರಂಭವಾಗಲಿರುವ ODI ಸರಣಿಗೆ ಟೀಮ್ ಇಂಡಿಯಾ ಶ್ರೀಲಂಕಾ ಗೆ ತೆರಳಿದೆ. ಈ ಸರಣಿಯಲ್ಲಿ ದಿಗ್ವಿಜರಾದ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಕಂಬ್ಯಾಕ್ ಮಾಡಲಿದ್ದಾರೆ. ಈ ಇಬ್ಬರೂ T20 ವಿಶ್ವಕಪ್​ ಬಳಿಕ ಭಾರತದ ಪರವಾಗಿ ಯಾವುದೇ ಪಂದ್ಯವಾಡಿಲ್ಲ.

ಕಳೆದ ODI ವಿಶ್ವಕಪ್​ 2023ರ ಬಳಿಕ ಭಾರತ ತಂಡದಿಂದ ಹೊರಗುಳಿದ ಕೆಎಲ್ ರಾಹುಲ್ ಮತ್ತು ಶ್ರೇಯಸ್ ಅಯ್ಯರ್ ಕೂಡ ಈ ಸರಣಿಯ ಮೂಲಕ ಪುನರಾಗಮನ ಮಾಡುತ್ತಿದ್ದಾರೆ.

India vs Sri Lanka ODI Time Table

ಭಾರತ – ಶ್ರೀಲಂಕಾ ಏಕದಿನ ಸರಣಿ ಸಂಪೂರ್ಣ ವೇಳಾಪಟ್ಟಿ:
ಮೊದಲ ಏಕದಿನ ಸರಣಿ: ಆಗಸ್ಟ್ 2, 2024 (ಕೊಲಂಬೊ) ವೇಳೆ 2:30 PM IST
ಎರಡನೇ ಏಕದಿನ ಸರಣಿ: ಆಗಸ್ಟ್ 4, 2024 (ಕೊಲಂಬೊ) ಮಧ್ಯಾಹ್ನ 2.30 PM IST
ಮೂರನೇ ಏಕದಿನ ಸರಣಿ: ಆಗಸ್ಟ್ 7, 2024 (ಕೊಲಂಬೊ) ಮಧ್ಯಾಹ್ನ 2.30 PM IST

ಭಾರತದ ತಂಡಗ ಹೀಗಿವೆ:
ರೋಹಿತ್ ಶರ್ಮಾ (ನಾಯಕ), ಶುಭ್​ಮನ್ ಗಿಲ್ (ಉಪನಾಯಕ), ವಿರಾಟ್ ಕೊಹ್ಲಿ, ರಿಷಬ್ ಪಂತ್ (ವಿಕೆಟ್ ಕೀಪರ್), ಕೆಎಲ್ ರಾಹುಲ್ (ವಿಕೆಟ್ ಕೀಪರ್), ಶ್ರೇಯಸ್ ಅಯ್ಯರ್, ಕುಲ್ದೀಪ್ ಯಾದವ್, ಮೊಹಮ್ಮದ್ ಸಿರಾಜ್, ವಾಷಿಂಗ್ಟನ್ ಸುಂದರ್, ಹರ್ಷಿತ್ ರಾಣಾ, ಶಿವಂ ದುಬೆ,ಅರ್ಶ್ದೀಪ್ ಸಿಂಗ್, ರಿಯಾನ್ ಪರಾಗ್, ಅಕ್ಷರ್ ಪಟೇಲ್ , ಖಲೀಲ್ ಅಹ್ಮದ್.

ಶ್ರೀಲಂಕಾ ತಂಡ:
ಚರಿತ್ ಅಸಲಂಕಾ (ನಾಯಕ), ಪಾತುಮ್ ನಿಸ್ಸಾಂಕ, ಅವಿಷ್ಕ ಫೆರ್ನಾಂಡೋ, ಕುಸಾಲ್ ಮೆಂಡಿಸ್, ವನಿಂದು ಹಸರಂಗ, ದುನಿತ್ ವೆಲ್ಲಲಗೆ, ಸದಿರ ಸಮರವಿಕ್ರಮ, ಕಮಿಂದು ಮೆಂಡಿಸ್, ಅಸಿತ ಫೆರ್ನಾಂಡೋ, ಜೆನಿತ್ ಲಿಯಾಂಗೆ, ನಿಶಾನ್ ಮಧುಶಂಕ, ಚಾಮಿಕ ಕರುಣಾರತ್ನ, ಮಹೀಶ್ ತೀಕ್ಷಣ, ಅಕಿಲ ದನಂಜಯ, ದಿಲ್ಶಾನ್ ಮಧುಶಂಕ, ಮಥೀಶ ಪತಿರಾನ.

Leave a Comment

WhatsApp

Join Now Latest UpDates

Join Now Latest Job And Scheme UpDates News Belagavi

Powered by Webpresshub.net