ಭಾರತ ಸರ್ಕಾರದ ಅಡಿಯಲ್ಲಿ ಉದ್ಯೋಗ ಹುಡುಕುತ್ತಿರುವ ಉದ್ಯೋಗಾಕಾಂಕ್ಷಿಗಳಿಗೆ ಗುಡ್ ನ್ಯೂಸ್ ಇಂಡಿಯನ್ ಮರ್ಚೆಂಟ್ ನೇವಿ (Indian Merchant Navy Recruitment 2025) ಖಾಲಿ ಇರುವ ಕುಕ್, ಮೆಸ್ ಬಾಯ್ ಸೇರಿದಂತೆ ವಿವಿಧ ಪೋಸ್ಟ್ ಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಿದೆ.
ಇಂಡಿಯನ್ ಮರ್ಚೆಂಟ್ ನೇವಿ (Indian Merchant Navy) ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಅಗತ್ಯವಿರುವ ವಿದ್ಯಾರ್ಹತೆ,(Qualification) ವೇತನ ಶ್ರೇಣಿ, (Salary) ವಯೋಮಿತಿ, (Age Limit) ಅರ್ಜಿ ಶುಲ್ಕ,( Application Fees ) ಹುದ್ದೆಗಳ ವಿವರ, ಇತರೆ ಎಲ್ಲಾ ಮಾಹಿತಿ ಕೆಳಗೆ ವಿವರಿಸಲಾಗಿದೆ, ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮುನ್ನ ಅಧಿಸೂಚನೆ (Notification) ಓದಿ ನಂತರ ಅರ್ಜಿ ಸಲ್ಲಿಸಿ.
ಸಂಸ್ಥೆ: ಇಂಡಿಯನ್ ಮರ್ಚೆಂಟ್ ನೇವಿ
ಹುದ್ದೆಗಳ ಹೆಸರು: ಕುಕ್, ಮೆಸ್ ಬಾಯ್
ಒಟ್ಟು ಹುದ್ದೆಗಳು ಸಂಖ್ಯೆ: 1800
ವೇತನ: 60,000- 90,000 ರೂಪಾಯಿ.
Indian Merchant Navy Recruitment 2025 ಹುದ್ದೆಗಳು ಸಂಖ್ಯೆ:
ಡೆಕ್ ರೇಟಿಂಗ್: 399
ಎಂಜಿನ್ ರೇಟಿಂಗ್: 201
ಸೀಮ್ಯಾನ್: 196
ಎಲೆಕ್ಟ್ರಿಷಿಯನ್: 290
ವೆಲ್ಡರ್/ ಹೆಲ್ಪರ್: 60
ಮೆಸ್ ಬಾಯ್: 188
ಕುಕ್: 466
ವಿದ್ಯಾರ್ಹತೆ:
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಹುದ್ದೆಗಳಿಗೆ ಅನುಗುಣವಾಗಿ ಡೆಕ್ ರೇಟಿಂಗ್, ಎಂಜಿನ್ ರೇಟಿಂಗ್ ಹುದ್ದೆಗೆ 10ನೇ ತರಗತಿ ಉತ್ತೀರ್ಣರಾಗಿಬೇಕು. ಸೀಮ್ಯಾನ್ ಹುದ್ದೆಗಳಿಗೆ ದ್ವಿತೀಯ ಪಿಯುಸಿ, ಎಲೆಕ್ಟ್ರಿಷಿಯನ್, ವೆಲ್ಡರ್/ ಹೆಲ್ಪರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು 10ನೇ ತರಗತಿ ಮತ್ತು ಐಟಿಐ ವಿದ್ಯಾರ್ಹತೆ ಹೊಂದಿರಬೇಕು. ಹಾಗೂ ಮೆಸ್ ಬಾಯ್ ಮತ್ತು ಕುಕ್ ಹುದ್ದೆಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಯು ಎಸ್ ಎಸ್ ಎಲ್ ಸಿ ಪೂರ್ಣಗೊಳಿಸಿರಬೇಕು.
ವಯೋಮಿತಿ:
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯೋಮಿತಿ ಕನಿಷ್ಠ 17.5 ವರ್ಷ ಆಗಿರಬೇಕು ಹಾಗೂ, ಗರಿಷ್ಠ 27 ವರ್ಷದ ವಯೋಮಿತಿ ಒಳಗೆ ಇರಬೇಕು.
ಅರ್ಜಿ ಶುಲ್ಕ:
ಎಲ್ಲಾ ವರ್ಗದ ಅಭ್ಯರ್ಥಿಗಳು 100 ರೂ. ಅರ್ಜಿ ಶುಲ್ಕವನ್ನು ಪಾವತಿಸಬೇಕು.
ಆಯ್ಕೆ ಪ್ರಕ್ರಿಯೆ:
ಈ ಹುದ್ದೆಗಳನ್ನು ಭರ್ತಿ ಮಾಡುವ ಅಭ್ಯರ್ಥಿಗಳಿಗೆ ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಅಭ್ಯರ್ಥಿಗಳ ಆಯ್ಕೆ ನಡೆಸಲಾಗುವುದು.
ಈ ಸುದ್ದಿಯನ್ನೂ ಓದಿ: ಭಾರತ್ ಹೆವಿ ಎಲೆಕ್ಟ್ರಿಕಲ್ಸ್ ಲಿಮಿಟೆಡ್‌ನಲ್ಲಿ 400 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ
ವೇತನ ಶ್ರೇಣಿ:
ಡೆಕ್ ರೇಟಿಂಗ್, ವೆಲ್ಡರ್/ ಹೆಲ್ಪರ್: 50,000 – 85,000 ರೂಪಾಯಿ.
ಎಂಜಿನ್ ರೇಟಿಂಗ್: 40,000- 60,000 ರೂಪಾಯಿ.
ಸೀಮ್ಯಾನ್: 38,000- 55,000 ರೂಪಾಯಿ.
ಎಲೆಕ್ಟ್ರಿಷಿಯನ್: 60,000- 90,000 ರೂಪಾಯಿ.
ಮೆಸ್ ಬಾಯ್, ಕುಕ್: 40,000- 60,000 ರೂಪಾಯಿ.
Indian Merchant Navy Recruitment 2025 ಪ್ರಮುಖ ದಿನಾಂಕಗಳು:
ಅರ್ಜಿ ಸ್ವೀಕರಿಸಲು ಪ್ರಾರಂಭದ ದಿನಾಂಕ: ಜನವರಿ 01, 2025
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಫೆಬ್ರವರಿ 10 2025
ಪರೀಕ್ಷಾ ದಿನಾಂಕ: ಮಾರ್ಚ್ 2025
ಪ್ರಮುಖ ಲಿಂಕ್ ಗಳು:
ಅಧಿಕೃತ ಅಧಿಸೂಚನೆ ನೋಡಲು: ಇಲ್ಲಿ ಕ್ಲಿಕ್ ಮಾಡಿ
ಆನ್‌ಲೈನ್ ಅರ್ಜಿ ಸಲ್ಲಿಸಲು: ಇಲ್ಲಿ ಕ್ಲಿಕ್ ಮಾಡಿ
ಅಧಿಕೃತ ವೆಬ್‌ಸೈಟ್ ವಿಳಾಸ: indianmerchantnavy.com
ಈ ಸುದ್ದಿಯನ್ನೂ ಓದಿ: ಹತ್ತನೇ ತರಗತಿ ಪಾಸಾದವರಿಗೆ ಅಂಚೆ ಇಲಾಖೆಯಲ್ಲಿ ಕೆಲಸ