Indian Navy Recruitment 2024: ಭಾರತೀಯ ನೌಕಾಪಡೆ (ಇಂಡಿಯನ್ ನೇವಿ)ಯಲ್ಲಿ ಖಾಲಿ ಇರುವ ಶಾರ್ಟ್ ಸರ್ವೀಸ್ ಕಮಿಷನ್ (ಎಸ್ಎಸ್ಸಿ) ಆಫೀಸರ್ ಹುದ್ದೆಗಳನ್ನು ಅರ್ಹ ಅಭ್ಯರ್ಥಿಗಳಿಂದ ಭರ್ತಿ ಮಾಡಲು ಆನ್ಲೈನ್ ಮೂಲಕ ಅರ್ಜಿಯನ್ನು ಆಹ್ವಾನಿಸಲಾಗಿದೆ.
ಭಾರತೀಯ ನೌಕಾಪಡೆ (Indian Navy) SSC Officers ಹುದ್ದೆಗೆ ಅರ್ಜಿ ಸಲ್ಲಿಸಲು ಆಸಕ್ತಿ ಇರುವ ಅಭ್ಯರ್ಥಿಗಳು ನೇಮಕಾತಿಗೆ ಸಂಬಂಧಿಸಿದಂತೆ ಅರ್ಹತೆಗಳು, ಒಟ್ಟು ಹುದ್ದೆಗಳ ವಿವರ, ಅರ್ಜಿ ಸಲ್ಲಿಸುವ ಪ್ರಕ್ರಿಯೆ, ಪ್ರಮುಖ ದಿನಾಂಕಗಳು, ಅರ್ಜಿ ಸಲ್ಲಿಸಲು ಡೈರೆಕ್ಟ್ ಲಿಂಕ್ಗಳು ಸೇರಿದಂತೆ ಸಂಪೂರ್ಣ ಮಾಹಿತಿಯನ್ನು ಕೆಳಗೆ ನೀಡಲಾಗಿದೆ.
Indian Navy Recruitment 2024
ಹುದ್ದೆ ಹೆಸರು: ಶಾರ್ಟ್ ಸರ್ವೀಸ್ ಕಮಿಷನ್ (SSC)
ಒಟ್ಟು ಹುದ್ದೆಗಳ ಸಂಖ್ಯೆ: 250
ಉದ್ಯೋಗದ ಸ್ಥಳ: ಭಾರತದ್ಯಾಂತ
ಹುದ್ದೆಗಳ ಮಾಹಿತಿ:
ಜನರಲ್ ಸರ್ವೀಸ್ [GS(X)] ಹೈಡ್ರೋ ಕೇಡರ್ (ಎಕ್ಸ್ಕ್ಯುಟಿವ್ ಬ್ರಾಂಚ್): 56
ಪೈಲಟ್ (ಎಕ್ಸ್ಕ್ಯುಟಿವ್ ಬ್ರಾಂಚ್): 24
ನಾವೆಲ್ ಏರ್ ಆಪರೇಷನ್ ಆಫೀಸರ್ (ಎಕ್ಸ್ಕ್ಯುಟಿವ್ ಬ್ರಾಂಚ್): 21
ಏರ್ ಟ್ರಾಫಿಕ್ ಕಂಟ್ರೋಲರ್ (ಎಟಿಸಿ) (ಎಕ್ಸ್ಕ್ಯುಟಿವ್ ಬ್ರಾಂಚ್): 20
ಲಾಜಿಸ್ಟಿಕ್ಸ್ (ಎಕ್ಸ್ಕ್ಯುಟಿವ್ ಬ್ರಾಂಚ್):20
ನಾವೆಲ್ ಆರ್ಮಮೆಂಟ್ ಇನ್ಸ್ಪೆಕ್ಟರ್ ಕೇಡರ್ : 16
ಎಜುಕೇಶನ್ ಬ್ರಾಂಚ್: 15
ಇಂಜಿನಿಯರಿಂಗ್ ಬ್ರಾಂಚ್:36
ಎಲೆಕ್ಟ್ರಿಕಲ್ ಬ್ರಾಂಚ್: 42
ವಿದ್ಯಾರ್ಹತೆ:
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಯು ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯದಿಂದ BE, BSc, B.com, PG ಡಿಪ್ಲೊಮಾ, B.Tech, MSc, MCA ಅಥವಾ MBA ಪದವಿ ಪಾಸಾದ ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
ವಯೋಮಿತಿ:
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯಸ್ಸು ಕನಿಷ್ಠ 18 ವರ್ಷ ಪೂರೈಸಿರಬೇಕು. ಮತ್ತು ಗರಿಷ್ಠ 23 ವರ್ಷದ ಒಳಗಿರಬೇಕು.
ವೇತನ ಶ್ರೇಣಿ:
ಈ ಹುದ್ದೆಗಳಿಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಮಾಸಿಕ 56,100 ರೂ. ವರಗೆ ವೇತನದ ಜೊತೆ ಇತರೆ ಸರ್ಕಾರಿ ಸೌಲಭ್ಯ ಒದಗಿಸಲಾಗುತ್ತದೆ.
ಅರ್ಜಿ ಶುಲ್ಕ:
ಅಭ್ಯರ್ಥಿಗಳಿಗೆ ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ.
ಇದನ್ನೂ ಓದಿ: ಪದವಿ ಪಾಸಾದವರಿಗೆ IIT ಧಾರವಾಡದಲ್ಲಿ ಉದ್ಯೋಗ
ಆಯ್ಕೆ ಪ್ರಕ್ರಿಯೆ :
ಅಭ್ಯರ್ಥಿಗಳ ಅಂಕಗಳ ಆಧಾರದ ಮೇಲೆ ಅಭ್ಯರ್ಥಿಗಳ ಶಾರ್ಟ್ಲಿಸ್ಟ್ ಮಾಡಲಾಗುತ್ತದೆ. ಆಯ್ಕೆಯಾದ ಅಭ್ಯರ್ಥಿಗಳ ಮೆರಿಟ್ ಪಟ್ಟಿಯನ್ನು ತಯಾರಿಸಿ. ಆಯ್ಕೆಯಾದ ಅಭ್ಯರ್ಥಿಗಳನ್ನು ಸಂದರ್ಶನ, ದಾಖಲೆ ಪರಿಶೀಲನೆ ಮತ್ತು ವೈದ್ಯಕೀಯ ಪರೀಕ್ಷೆ ಮೂಲಕ ಆಯ್ಕೆ ಮಾಡಲಾಗುತ್ತದೆ.
ಪ್ರಮುಖ ದಿನಾಂಕಗಳು:
ಆನ್ಲೈನ್ ಅರ್ಜಿ ಸ್ವೀಕರಿಸಲು ಪ್ರಾರಂಭದ ದಿನಾಂಕ: 14 ಸೆಪ್ಟೆಂಬರ್, 2024
ಆನ್ಲೈನ್ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 29 ಸೆಪ್ಟೆಂಬರ್, 2024
ಇದನ್ನೂ ಓದಿ: ಪಂಜಾಬ್ ಮತ್ತು ಸಿಂಧ್ ಬ್ಯಾಂಕ್ ನೇಮಕಾತಿ 2024
Indian Navy Recruitment 2024 ಪ್ರಮುಖ ಲಿಂಕ್ಗಳು:
ಅಧಿಸೂಚನೆ ನೋಡಲು: ಇಲ್ಲಿ ಕ್ಲಿಕ್ ಮಾಡಿ
ಆನ್ಲೈನ್ ಅರ್ಜಿ ಸಲ್ಲಿಸಲು: ಇಲ್ಲಿ ಕ್ಲಿಕ್ ಮಾಡಿ
ವೆಬ್ಸೈಟ್ ವಿಳಾಸ: joinindiannavy.gov.in
ಇದನ್ನೂ ಓದಿ: ಆದಿತ್ಯ ಬಿರ್ಲಾ ಕ್ಯಾಪಿಟಲ್ ಫೌಂಡೇಶನ್ ವತಿಯಿಂದ 60,000 ರೂ. ವಿದ್ಯಾರ್ಥಿವೇತನ