Infosys Foundation Scholarship: ನಮಸ್ಕಾರ ವಿದ್ಯಾರ್ಥಿ ಮಿತ್ರರೇ ಮತ್ತೊಂದು ಹೊಸ ಲೇಖನಕ್ಕೆ ಸ್ವಾಗತ ಇಂದಿನ ಈ ಲೇಖನದ ಮೂಲಕ ತಮ್ಮಲ್ಲರಿಗೂ ತಿಳಿಸುವುದೇಂದರೆ ಇನ್ಫೋಸಿಸ್ ಫೌಂಡೇಶನ್ ವತಿಯಿಂದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡಲಾಗುತ್ತಿದೆ.
ವಿದ್ಯಾರ್ಥಿಗಳ ಉನ್ನತ ಶಿಕ್ಷಣವನ್ನು ಪ್ರೋತ್ಸಾಹಿಸಲು ಪ್ರತಿ ವರ್ಷವೂ ಕೂಡ ವಿದ್ಯಾರ್ಥಿವೇತನವನ್ನು ಒದಗಿಸಿಕೊಡುತ್ತಿದೆ. ಎಲ್ಲಾ ವಿದ್ಯಾರ್ಥಿಗಳು ಈ ಸ್ಕಾಲರ್ಶಿಪ್ ನ ಲಾಭವನ್ನು ಪಡೆದುಕೊಳ್ಳಬೇಕು. ಹಾಗೆಯೇ ಈ ವಿದ್ಯಾರ್ಥಿವೇತನಕ್ಕೆ ಅರ್ಜಿ ಪ್ರಕ್ರಿಯೆ ಆರಂಭವಾಗಿದ್ದು, ಅರ್ಜಿ ಸಲ್ಲಿಸುವ ಸಂಪೂರ್ಣ ಮಾಹಿತಿಯನ್ನು ಕೆಳಗೆ ಲೇಖನದಲ್ಲಿ ವಿವರಿಸಲಾಗಿದೆ.
Infosys Foundation Scholarship ವಿದ್ಯಾರ್ಥಿವೇತನ ವಿವರ:
ಇನ್ಫೋಸಿಸ್ ಫೌಂಡೇಶನ್ ವತಿಯಿಂದ ಇನ್ಫೋಸಿಸ್ ಫೌಂಡೇಶನ್ STEM ಸ್ಟಾರ್ಸ್ ಸ್ಕಾಲರ್‌ಶಿಪ್ 2024-25 ನೇ ಸಾಲಿನ ವಿದ್ಯಾರ್ಥಿವೇತನ (ವಿಜ್ಞಾನ, ತಂತ್ರಜ್ಞಾನ, ಇಂಜಿನಿಯರಿಂಗ್, ಗಣಿತ) ವಿಷಯಗಳಲ್ಲಿ ಪದವಿಪೂರ್ವ ಪದವಿಗಳನ್ನು ಮೊದಲ ವರ್ಷದ ಓದುತ್ತಿರುವ ಭಾರತದ ಎಲ್ಲಾ ವಿದ್ಯಾರ್ಥಿನಿಯರ ಶಿಕ್ಷಣವನ್ನು ಬೆಂಬಲಿಸುವ ಗುರಿ ಹೊಂದಿದೆ.
ಯಾರು ಅರ್ಹರು:
ಈ ವಿದ್ಯಾರ್ಥಿವೇತನವನ್ನು 4-ವರ್ಷದ ಪದವಿ ಕೋರ್ಸ್‌ಗಳನ್ನು ಓದುತ್ತಿರುವ ಮಹಿಳಾ ವಿದ್ಯಾರ್ಥಿಗಳು ಅರ್ಹರು, ವಾರ್ಷಿಕ ₹1 ಲಕ್ಷದವರೆಗೆ ಸಮಗ್ರ ಆರ್ಥಿಕ ಸಹಾಯಧನವನ್ನು ಒದಗಿಸುತ್ತದೆ.
ಅರ್ಹತೆಯ ಮಾನದಂಡ:
- ಭಾರತೀಯ ಪ್ರಜೆಯಾಗಿರಬೇಕು
- ಹೆಣ್ಣು ಮಕ್ಕಳು ಮಾತ್ರ ಅರ್ಜಿ ಸಲ್ಲಿಸಲು ಅರ್ಹರು
- ವಿದ್ಯಾರ್ಥಿಗಳು ಎಂಜಿನಿಯರಿಂಗ್, ವೈದ್ಯಕೀಯ (MBBS) ಮತ್ತು ಇತರ ಸಂಬಂಧಿತ STEM ಕ್ಷೇತ್ರಗಳಲ್ಲಿ ಪ್ರತಿಷ್ಠಿತ ಸಂಸ್ಥೆಗಳಲ್ಲಿ (NIRF ಮಾನ್ಯತೆ ಪಡೆದ) ಮೊದಲ ವರ್ಷ ಪದವಿ ಓದುತ್ತಿರಬೇಕು.
- ಕುಟುಂಬದ ವಾರ್ಷಿಕ ಆದಾಯವು 8 ಲಕ್ಷ ಮೀರಿರಬಾರದು.
- ವಿದ್ಯಾರ್ಥಿಗಳು ಸಂಸ್ಥೆಯಿಂದ ಗುರುತಿಸಲ್ಪಟ್ಟ ಕಾಲೇಜುಗಳಿಗೆ ಪ್ರವೇಶವನ್ನು ಪಡೆದಿರಬೇಕು ಮತ್ತು 12ನೇ ತರಗತಿಯಲ್ಲಿ ತೇರ್ಗಡೆಯಾಗಿರಬೇಕು.
- ಕೋರ್ಸ್ ಪೂರ್ಣಗೊಳ್ಳುವವರೆಗೆ ಎಂಜಿನಿಯರಿಂಗ್ ಮತ್ತು ಸಂಬಂಧಿತ ಕೋರ್ಸ್‌ಗಳಲ್ಲಿ ಕನಿಷ್ಠ 7 CGPA.
- ಕೋರ್ಸ್ ಪೂರ್ಣಗೊಳ್ಳುವವರೆಗೆ ನಿರಂತರ ದಾಖಲಾತಿಗಾಗಿ MBBS ನಲ್ಲಿ ವರ್ಷಕ್ಕೆ ಎಲ್ಲಾ ವಿಷಯಗಳಲ್ಲಿ ಉತ್ತೀರ್ಣರಾಗಿಬೇಕು.
ಪ್ರಮುಖ ದಾಖಲೆಗಳು:
- ಇತ್ತೀಚಿನ ಪಾಸ್‌ಪೋರ್ಟ್ ಸೈಜ್ ಪೋಟೋ.
- 12 ನೇ ತರಗತಿಯ ಅಂಕಪಟ್ಟಿ ಮತ್ತು JEE/CET/NEET ಅಂಕಪಟ್ಟಿಯೊಂದಿಗೆ ಉತ್ತೀರ್ಣ ಪ್ರಮಾಣಪತ್ರಗಳು.
- ಆಧಾರ್ ಕಾರ್ಡ್/ವೋಟರ್ ಐಡಿ ಕಾರ್ಡ್/ಪ್ಯಾನ್ ಕಾರ್ಡ್
- ಕಾಲೇಜು ಪ್ರವೇಶ ಪುರಾವೆ (ಶುಲ್ಕ ರಶೀದಿ/ಪ್ರವೇಶ ಪತ್ರ/ಸಂಸ್ಥೆಯ ಗುರುತಿನ ಚೀಟಿ/ಬನಫೈಡ್ ಪ್ರಮಾಣಪತ್ರ).
- ಕುಟುಂಬದ ಆದಾಯ ಪ್ರಮಾಣಪತ್ರ.
- ಬಿಪಿಎಲ್ ಅಥವಾ ಅಂತಹುದೇ ಕಾರ್ಡ್ ಅಥವಾ ಆಯುಷ್ಮಾನ್ ಭಾರತ್ ಕಾರ್ಡ್ ಹೊಂದಿದರೆ.
- ಬ್ಯಾಂಕ್ ಪಾಸ್‌ಬುಕ್
ಪ್ರಮುಖ ದಿನಾಂಕ ಮತ್ತು ಲಿಂಕ್‌ಗಳು:
ಅರ್ಜಿ ಸಲ್ಲಿಸಲು: ಇಲ್ಲಿ ಕ್ಲಿಕ್ ಮಾಡಿ
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 15-ಸೆಪ್ಟೆಂಬರ್-2024