ನಮಸ್ಕಾರ ಸ್ನೇಹಿತರೆ ಇವತ್ತಿನ ಈ ಲೇಖನದಲ್ಲಿ ತಿಳಿಸುವುದೇನೆಂದರೆ 9 ನೇ ತರಗತಿ ಯಿಂದ 12 ನೇ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಜೆಎಂ ಸೇಥಿಯಾ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಪ್ರತಿ ತಿಂಗಳು 1,000 ರೂ. ವಿದ್ಯಾರ್ಥಿವೇತನ ನೀಡಲಾಗುತ್ತದೆ. ಇದಕ್ಕೆ ಯಾರು ಅರ್ಹರು, ಅರ್ಜಿ ಸಲ್ಲಿಕೆ ಹೇಗೆ? ಅರ್ಹತೆ ಏನಿರಬೇಕು, ಹೇಗೆ ಅರ್ಜಿ ಸಲ್ಲಿಸುವ ಎಂಬುದರ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ.
ಜೆಎಂ ಸೇಥಿಯಾ ಚಾರಿಟೇಬಲ್ ಟ್ರಸ್ಟ್ ವತಿಯಿಂದ 9 ರಿಂದ PUC ಹಾಗೂ ಪದವಿ, ಸ್ನಾತಕೋತ್ತರ ಪದವಿ ಮತ್ತು ವೃತ್ತಿಪರ ಕೋರ್ಸ್‌ಗಳನ್ನು ಓದುತ್ತಿರುವ ವಿದ್ಯಾರ್ಥಿಗಳಿಗೆ ಜೆಎಂ ಸೇಥಿಯಾ ಮೆರಿಟ್ ಸ್ಕಾಲರ್ಶಿಪ್ ನೀಡಲಾಗುತ್ತಿದೆ ಇದರ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಬಹುದು. ವಿದ್ಯಾರ್ಥಿಗಳ ವಿದ್ಯಾಭ್ಯಾಸದ ಶೈಕ್ಷಣಿಕ ಗುರಿಯನ್ನು ಮುಂದುವರಿಸಲು ಬೆಂಬಲ ನೀಡುವುದು ಈ JM Scholarship ಗುರಿಯಾಗಿದೆ.
JM Sethia Merit Scholarship
ಅರ್ಹತಾ ಮಾನದಂಡಗಳು?:
9ನೇ ತರಗತಿಯಿಂದ ಸ್ನಾತಕೋತ್ತರ ಪದವಿ ಮತ್ತು ವೃತ್ತಿಪರ ಕೋರ್ಸ್‌ಗಳನ್ನು ಓದುತ್ತಿರಬೇಕು.
ಅರ್ಜಿದಾರರು ಹಿಂದಿನ ವರ್ಷ ಪರೀಕ್ಷೆಯಲ್ಲಿ 60% ಅಂಕಗಳೊಂದಿಗೆ ಉತ್ತೀರ್ಣರಾಗಿರಬೇಕು.
ಪ್ರಮುಖ ದಾಖಲೆಗಳು:
ಆದಾಯ ಪ್ರಮಾಣ ಪತ್ರ
ಜಾತಿ ಪ್ರಮಾಣ ಪತ್ರ
ಕಳೆದ ವರ್ಷದ ಅಂಕ ಪಟ್ಟಿ
ವಿದ್ಯಾರ್ಥಿ ವೇತನದ ಮೊತ್ತ:
ಪ್ರತಿ ತಿಂಗಳಿಗೆ 1,000 ರೂ. ವರೆಗೆ
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 31-July-2024
ಅರ್ಜಿ ಸಲ್ಲಿಸಲು ಹೆಚ್ಚಿನ ಮಾಹಿತಿಗಾಗಿ: ಇಲ್ಲಿ ಕ್ಲಿಕ್ ಮಾಡಿ
ಅರ್ಜಿ ಸಲ್ಲಿಸುವುದು ಹೇಗೆ?
ಆಸಕ್ತ ಮತ್ತು ಅರ್ಹ ವಿದ್ಯಾರ್ಥಿಗಳು ಅಗತ್ಯ ದಾಖಲೆಯೊಂದಿಗೆ ಈ ಕೆಳಗಿನ ವಿಳಾಸಕ್ಕೆ ಅರ್ಜಿದಾರರು ಅಗತ್ಯ ದಾಖಲೆಗಳನ್ನು ಕಳುಹಿಸುವುದು.
JM Sethia Merit Scholarship ಅಂಚೆಯ ಮೂಲಕ:
ಜೆಎಂ ಸೇಥಿಯಾ ಚಾರಿಟೇಬಲ್ ಟ್ರಸ್ಟ್,
133, ಬಿಪ್ಲಬಿ ರಾಶ್ ಬಿಹಾರಿ ಬಸು ರೋಡ್,
3ನೇ ಫ್ಲೋರ್, ರೂಂ.ನಂ. 15, ಕೋಲ್ಕತ್ತಾ- 700001
ಅಥವಾ
ಗಾಂಧಿ ಹೌಸ್, 5ನೇ ಫ್ಲೋರ್,
16, ಗಣೇಶ್ ಚಂದ್ರ ಅವೆನ್ಯೂ,
ಕೋಲ್ಕತ್ತಾ- 700013
ಇ-ಮೇಲ್ ಐಡಿ: jms_trust@yahoo.in
ಮೊಬೈಲ್ ನಂ: 9339793153