2024-25 ನೇ ಸಾಲಿಗೆ ಹಮ್ಮಿಕೊಂಡಿರುವ ಕರ್ನಾಟಕ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಬೆಂಗಳೂರು ನಗರ ಜಿಲ್ಲಾ ಕಚೇರಿಯಲ್ಲಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳಿಗೆ ಸೇರಿದ ಅಭ್ಯರ್ಥಿಗಳಿಗೆ ಪತ್ರಿಕೋದ್ಯಮ ಪದವೀಧರರ ಅಪ್ರೆಂಟಿಸ್ ತರಬೇತಿಗೆ ಅರ್ಜಿ ಆಹ್ವಾನಿಸಲಾಗಿದೆ.
Karnataka Journalist Apprentice: ಪ್ರಸಕ್ತ ಸಾಲಿನಲ್ಲಿ ಪತ್ರಿಕೋದ್ಯಮ ಪದವಿ / ಸ್ನಾತಕೋತ್ತರ ಪದವಿ ಪಾಸಾಗಿ ಉದ್ಯೋಗ ಹುಡುಕಾಟದಲ್ಲಿದರೆ, ಕರ್ನಾಟಕ ಸರ್ಕಾರದ ವತಿಯಿಂದ ಪರಿಶಿಷ್ಟ ಜಾತಿಯ ಹಾಗೂ ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ ಪತ್ರಿಕೋದ್ಯಮ ಅಪ್ರೆಂಟಿಸ್ ತರಬೇತಿ ನೀಡಲು ಅರ್ಜಿಯನ್ನು ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ನವೆಂಬರ್ 25 ಕೊನೆಯ ದಿನ ಆಗಿರುತ್ತದೆ.
Karnataka Journalist Apprentice ತರಬೇತಿಯ ವಿಷೇಶತೆಗಳು:
ಇಲಾಖೆಯ ಕ್ಷೇತ್ರ ಪ್ರಚಾರ ಕಾರ್ಯಗಳಲ್ಲಿ, ಸುದ್ದಿ ಸಂಗ್ರಹ, ರಚನೆ ಹಾಗೂ ವಿಶೇಷ ಲೇಖನ ರಚನೆಗಳಲ್ಲಿ ತರಬೇತಿ ನೀಡಲಾಗುವುದು.
ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಒಟ್ಟು 12 ತಿಂಗಳುಗಳ ಅಪರಂಟಿಸ್ ತರಬೇತಿ ಇದಾಗಿದ್ದು.
ಪ್ರತಿ ಅಪ್ರೆಂಟಿಸ್ ತರಬೇತಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ತರಬೇತಿ ದೊಂದಿಗೆ ಪ್ರತಿ ತಿಂಗಳು ರೂ 15,000 ಗಳ ಸ್ಟೈಪೆಂಡ್ ನೀಡಲಾಗುವುದು.
ಅರ್ಹತೆಗಳು:
ಅರ್ಜಿದಾರರು ಪತ್ರಿಕೋದ್ಯಮದಲ್ಲಿ ಪದವಿ / ಸ್ನಾತಕೋತ್ತರ ಪದವಿ ಪಡೆದಿರಬೇಕು ಜೊತೆಗೆ ಕಂಪ್ಯೂಟರ್ ಜ್ಞಾನ ಹೊಂದಿರಬೇಕು.
ಕನ್ನಡ ಭಾಷಾ ಬಳಕೆಯಲ್ಲಿ ಪ್ರಬುದ್ಧತೆ ಇರಬೇಕು.
ಅರ್ಜಿ ಸಲ್ಲಿಸಲು ನಿಗದಿ ಪಡಿಸಿದ ದಿನಾಂಕದಂದು ಅಭ್ಯರ್ಥಿಗಳ ವಯಸ್ಸು 35 ವರ್ಷದೊಳಗಿರಬೇಕು.
ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳು:
ಅರ್ಜಿಯೊಂದಿಗೆ ಎಸ್‌ಎಸ್‌ಎಲ್‌ಸಿ ಅಂಕಪಟ್ಟಿ,
ಪದವಿ ಹಾಗೂ ಸ್ನಾತಕೋತ್ತರ ಪ್ರಮಾಣ ಪತ್ರಗಳು
ಜಾತಿ ಪ್ರಮಾಣ ಪತ್ರ,
ಪಾಸ್ ಪೋರ್ಟ್ ಅಳತೆಯ ಎರಡು ಭಾವಚಿತ್ರ
ಕಂಪ್ಯೂಟರ್ ತರಬೇತಿ ಪ್ರಮಾಣ ಪತ್ರ
ಇನ್ನಿತರೆ ಪೂರಕ ದಾಖಲೆಗಳ ಜೆರಾಕ್ಸ್ ಪ್ರತಿ ಲಗತ್ತಿಸಿ ಅಂಚೆ ಮೂಲಕ ಕಳುಹಿಸಬೇಕು.
ಅರ್ಜಿಯನ್ನು ಸಲ್ಲಿಸಲು ಕೊನೆಯ ದಿನಾಂಕ 25 ನವೆಂಬರ್, 2024 ರೊಳಗಾಗಿ ಈ ಕೆಳಗಿನ ವಿಳಾಸಕ್ಕೆ ತಲುಪಿಸಬೇಕು.
ಅರ್ಜಿ ಸಲ್ಲಿಸುವ ವಿಳಾಸ:
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಬೆಂಗಳೂರು ನಗರ ಜಿಲ್ಲೆ, ವಾರ್ತಾ ಸೌಧ, 2ನೇ ಮಹಡಿ, ನಂ.17, ಭಗವಾನ್ ಮಹಾವೀರ್ ರಸ್ತೆ, ಬೆಂಗಳೂರು- 560001.
ಸೂಚನೆ:
ಅಭ್ಯರ್ಥಿಗಳು ಅರ್ಜಿ ಲಕೋಟೆಯ ಮೇಲೆ ಕಡ್ಡಾಯವಾಗಿ “ವಿಶೇಷ ಘಟಕ ಯೋಜನೆಯಡಿ ಹಾಗೂ ಗಿರಿಜನ ಉಪಯೋಜನೆಯಡಿ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ ನೀಡುವ ಅಪ್ರೆಂಟಿಸ್ ತರಬೇತಿಗಾಗಿ ಅರ್ಜಿ” ಎಂದು ನಮೂದಿಸಬೇಕು.
ಆಸಕ್ತ ಅರ್ಹ ಅಭ್ಯರ್ಥಿಗಳು ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ: 080-22028059
ಇ-ಮೇಲ್ – urbaninformation2016@gmail.com ಮೊಬೈಲ್ ಸಂಖ್ಯೆ: 9480841219 ಗೆ ಕಚೇರಿ ಸಮಯದಲ್ಲಿ ಸಂರ್ಪಕಿಸಬಹುದು ಎಂದು ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಹಾಗೂ ಇತರೆ ಜಿಲ್ಲೆಯ ಅಭ್ಯರ್ಥಿಗಳು ಆಯಾ ಜಿಲ್ಲೆಯ ವಾರ್ತಾಧಿಕಾರಿಗಳನ್ನು ಸಂಪರ್ಕಿಸಬಹುದು.
ಕೆಸೆಟ್ 2024 ಹಾಲ್ ಟಿಕೆಟ್ ಪ್ರಕಟ ಡೌನ್‌ಲೋಡ್ ಮಾಡಲು ಡೈರೆಕ್ಟ್ ಲಿಂಕ್