Karnataka KPTCL Lineman Recruitment 2024: ಕರ್ನಾಟಕ ಸರ್ಕಾರವ ಸದ್ಯದಲ್ಲೇ ಇಂಧನ ಇಲಾಖೆಯಲ್ಲಿ ಖಾಲಿ ಇರುವ 2000 ಲೈನ್‌ಮೆನ್ ಹುದ್ದೆಗಳ ಭರ್ತಿಗೆ ಗ್ರೀನ್ ಸಿಗ್ನಲ್ ನೀಡಿದೆ. ಸಂಬಂಧಿತ ಅಧಿಕಾರಿ ಜೊತೆಗೆ ಮಾತನಾಡಿ 15 ದಿನಗಳಲ್ಲಿ ಅಧಿಸೂಚನೆ ಹೊರಡಿಸಲಾಗುವುದು ಎಂದು ಇಂಧನ ಸಚಿವ ಕೆ.ಜೆ. ಜಾರ್ಜ್ ತಿಳಿಸಿದ್ದಾರೆ.
ರಾಯಚೂರಿನಲ್ಲಿ ಮಾಧ್ಯಮ ಮಿತ್ರರೊಂದಿಗೆ ಹಾಗೂ ಜನಪ್ರತಿನಿಧಿಗಳೊಂದಿಗೆ ಮಾತನಾಡಿದ ಇಂಧನ ಸಚಿವರು ಕೆ.ಜೆ. ಜಾರ್ಜ್ ಅವರು ಕರ್ನಾಟಕ ರಾಜ್ಯ ಸರ್ಕಾರ ಈಗಾಗಲೇ ವಿವಿಧ ಇಲಾಖೆಗಳ ನೇಮಕಾತಿ ಬಗ್ಗೆ ಪ್ರಾಧಿಕಾರಗಳಿಗೆ ಮತ್ತು ಆರ್ಥಿಕ ಇಲಾಖೆಗೆ ಹಲವು ಹುದ್ದೆಗಳ ನೇಮಕಾತಿ ಪ್ರಸ್ತಾವನೆ ಸಲ್ಲಿಸಿವೆ. ಅವುಗಳಲ್ಲಿ ಕೃಷಿ ಇಲಾಖೆ, ಪೌರಾಡಳಿತ ನಿರ್ದೇಶನಾಲಯ, ಅಗ್ನಿಶಾಮಕ ದಳ, ಜೊತೆಗೆ ರಾಜ್ಯದಲ್ಲಿ ಬೇಕಾಗಿರುವ 2000 ಲೈನ್‌ಮೆನ್‌ಗಳ ಹುದ್ದೆಗಳ ಬಗ್ಗೆ ಸ್ಪಷ್ಟತೆ ನೀಡಿದ್ದಾರೆ. ಮುಂದಿನ ಸರದಿ ಇಂಧನ ಇಲಾಖೆ ಎಂದಿದ್ದಾರೆ.
ಕರ್ನಾಟಕದ ಯುವ ಜನತೆಗೆ ಉದ್ಯೋಗಾವಕಾಶ ಕಲ್ಪಿಸುವ ಉದೇಶದಿಂದ ಮುಖ್ಯಮಂತ್ರಿ ಸಿದ್ಧರಾಮಯ್ಯ ನೇತೃತ್ವದ ಸರ್ಕಾರ ಈಗಾಗಲೇ 1000 ಸಹಾಯಕ ಇಂಜಿನಿಯರ್‌ಗಳ (AE) ಮತ್ತು ಕಿರಿಯ ಇಂಜಿನಿಯರ್‌ಗಳ (JE) ನೇಮಕಾತಿಗೆ ಕಾರ್ಯಾದೇಶವನ್ನು ನೀಡಿದ್ದೇ. ಹೊಸದಾಗಿ ಆಯ್ಕೆಯಾದ 400 ಸಹಾಯಕ ಇಂಜಿನಿಯರ್‌ಗಳಿಗೆ ಇತ್ತೀಚೆಗೆ ತರಬೇತಿ ನೀಡಲಾಗಿದೆ. ಈಗ ಲೈನ್‌ಮೆನ್‌ಗಳ ಶೀಘ್ರದಲ್ಲೇ ನೇಮಕಾತಿಗಾಗಿ ಕ್ರಮ ವಹಿಸಲಾಗಿದೆ ಎಂದು ಜಾರ್ಜ್ ಹೇಳಿದರು.
ಇದನ್ನೂ ಓದಿ: ಪೌರಾಡಳಿತ ಇಲಾಖೆಯಲ್ಲಿ FDA ಮತ್ತು SDA ಹುದ್ದೆಗೆ ಅರ್ಜಿ ಆಹ್ವಾನ
ಲೈನ್‌ಮೆನ್ ಹುದ್ದೆಗೆ ವಿದ್ಯಾರ್ಹತೆ KPTCL Recruitment:
ಅರ್ಜಿದಾರರು ಕರ್ನಾಟಕ ಪ್ರೌಢಶಿಕ್ಷಣ ಮಂಡಳಿಯಿಂದ ನಡೆಸಲಾಗುವ SSLC ಪಾಸಾದವರು ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಕನ್ನಡ ಭಾಷೆ ಜ್ಞಾನವಿರಬೇಕು, ಕಣ್ಣಿನ ದೃಷ್ಟಿ ಚೆನ್ನಾಗಿರಬೇಕು.
ಕರ್ನಾಟಕ ಲೈನ್‌ಮೆನ್ ವಯೋಮಿತಿ:
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕನಿಷ್ಠ 18 ವರ್ಷ ಪೂರೈಸಿರಬೇಕು.
ಗರಿಷ್ಠ ವಯಸ್ಸಿನ ಅರ್ಹತೆ:
ಮೀಸಲಾತಿಗೆ ಒಳಪಡದ ಅಭ್ಯರ್ಥಿಗಳಿಗೆ: 35 ವರ್ಷ
ಇತರೆ ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ: 38 ವರರ್ಷ,
ಪ ಜಾ, ಪ ಪ ಅಭ್ಯರ್ಥಿಗಳಿಗೆ 40 ವರ್ಷ
ಆಯ್ಕೆ ಪ್ರಕ್ರಿಯೆ:
ಲೈನ್‌ಮೆನ್ ಹುದ್ದೆಗಳ ನೇಮಕಾತಿಗೆ ಪರೀಕ್ಷೆಯಲ್ಲಿ ಪಾಸಾದವರಿಗೆ ರನ್ನಿಂಗ್, ಇಲೆಕ್ಟ್ರಿಕಲ್ ಕಂಬ ಹತ್ತುವುದು, ಮೂಲ ದಾಖಲೆಗಳ ಪರಿಶೀಲನೆ, ವೈದ್ಯಕೀಯ ಪರೀಕ್ಷೆಗಳು ನಂತರ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲಾಗುತ್ತದೆ.
ಇದನ್ನೂ ಓದಿ: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಗ್ರೇಡ್-ಬಿ ಹುದ್ದೆಗಳಿಗೆ ಅರ್ಜಿ ಆಹ್ವಾನ