Karnataka Police Recruitment: ಪೋಲಿಸ್ ಇಲಾಖೆ ಉದ್ಯೋಗ ಮಾಡಲು ಆಸಕ್ತಿಯಿಂದ ಕಾಯುತ್ತಿರುವ ಅಭ್ಯರ್ಥಿಗಳಿಗೆ ಸಿಹಿ ಸುದ್ದಿ ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ 4,115 ಪೊಲೀಸ್ ಕಾನ್ಸ್‌ಟೇಬಲ್, PSI ಹುದ್ದೆಗಳ ಭರ್ತಿಗೆ ಆರ್ಥಿಕ ಇಲಾಖೆ ಅನುಮೋದನೆ ನೀಡಿದೆ. ಹಾಗಾದರೆ ಇಲಾಖೆಯಲ್ಲಿ ಯಾವ್ಯಾವ ಹದ್ದೆಗಳು ಖಾಲಿಯಿವೆ ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.
ರಾಜ್ಯ ಪೋಲಿಸ್ ಇಲಾಖೆಯಲ್ಲಿ ಒಟ್ಟು 4,115 ಹುದ್ದೆಗಳ ಪೈಕಿ 3,500 ಪೊಲೀಸ್ ಕಾನ್ಸ್‌ಟೇಬಲ್ (PC) ಹುದ್ದೆಗಳು ಹಾಗೂ 615 ಪೊಲೀಸ್ ಸಬ್‌ಇನ್ಸ್‌ಪೆಕ್ಟರ್ (SI) ಹುದ್ದೆಗಳಿದ್ದು. 2023-24ನೇ ಸಾಲಿನ ಹಾಗೂ 2022-23ನೇ ಸಾಲಿನಲ್ಲಿ ಭರ್ತಿ ಮಾಡಬೇಕಿದ್ದ, ಹುದ್ದೆಗಳ ಪ್ರಸ್ತಾವನೆಯನ್ನು ಸಲ್ಲಿಕೆ ಮಾಡಲಾಗಿರುವ ಹುದ್ದೆಗಳು ಇವಾಗಿವೆ.
ಹುದ್ದೆಗಳ ವಿವರ:
ಸಶಸ್ತ್ರ ಪೊಲೀಸ್ ಕಾನ್ಸ್‌ಟೇಬಲ್ (ಸಿಎಆರ್ / ಡಿಎಆರ್) 2000 ಹುದ್ದೆಗಳು ಬಾಕಿ ಇದ್ದು, 2023-24ನೇ ವರ್ಷದಲ್ಲಿ ಭರ್ತಿ ಮಾಡಬೇಕಿದ್ದ ಹುದ್ದೆಗಳು ಇವು.
ಕರ್ನಾಟಕ ವಿಶೇಷ ಮೀಸಲು ಪೊಲೀಸ್ ಕಾನ್ಸ್‌ಟೇಬಲ್ (KSRP) 150 ಹುದ್ದೆಗಳಿದ್ದು, 2023-24ನೇ ಸಾಲಿನಲ್ಲಿ ಭರ್ತಿ ಮಾಡಬೇಕಿದ್ದ ಹುದ್ದೆಗಳು ಇವಾಗಿವೆ.
ಪೊಲೀಸ್ ಸಬ್‌ಇನ್ಸ್‌ಪೆಕ್ಟರ್ 300 ಹುದ್ದೆಗಳಿವೆ, 2022-23ನೇ ಸಾಲಿನಲ್ಲಿ ಭರ್ತಿ ಮಾಡಬೇಕಿದ್ದ ಹುದ್ದೆಗಳು.
ಪೊಲೀಸ್ ಸಬ್‌ಇನ್ಸ್‌ಪೆಕ್ಟರ್ 300 ಹುದ್ದೆಗಳಿದ್ದು, 2023-24ನೇ ಸಾಲಿನಲ್ಲಿ ಭರ್ತಿ ಮಾಡಬೇಕಿದ್ದ ಹುದ್ದೆಗಳು ಇವಾಗಿವೆ.
ಡೆಪ್ಯೂಟಿ ಸಬ್ ಇನ್ಸ್‌ಪೆಕ್ಟರ್ 15 ಹುದ್ದೆಗಳಿದ್ದು, 2024-25ನೇ ಸಾಲಿನಲ್ಲಿ ಭರ್ತಿ ಮಾಡಬೇಕಿರುವ ಹುದ್ದೆಗಳು ಇವಾಗಿವೆ.
ಪೋಲಿಸ್ ಇಲಾಖೆಯಲ್ಲಿ ಖಾಲಿ ಈ ಎಲ್ಲಾ ಹುದ್ದೆಗಳಿಗೆ ಇದೀಗ ಆರ್ಥಿಕ ಇಲಾಖೆ ಅನುಮೋದನೆ ನೀಡಿದೆ. ಮುಂಬರುವ 3 ತಿಂಗಳೊಳಗಾಗಿ ಅಧಿಸೂಚನೆ ಬಿಡುಗಡೆ ಮಾಡುವ ಸಾಧ್ಯತೆಗಳಿವೆ ಎನ್ನಲಾಗಿದೆ. ಆದರೆ, ನೇಮಕಾತಿ ಜರೂರು ಆದೇಶ ಗೃಹ ಇಲಾಖೆಯಿಂದ ಬಂದಲ್ಲಿ 40 ದಿನಗಳೊಳಗೆ ಸಹ ಅಧಿಸೂಚನೆ ಹೊರಡಿಸುವ ಸಾಧ್ಯತೆಗಳಿವೆ ಎಂದು ವರದಿಯಾಗಿದೆ.
Karnataka Police Recruitment ವಿದ್ಯಾರ್ಹತೆ:
ಸಶಸ್ತ್ರ ಪೊಲೀಸ್ ಕಾನ್ಸ್‌ಟೇಬಲ್ (ಸಿಎಆರ್/ಡಿಎಆರ್) ಹುದ್ದೆಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು 10 ನೇ ತರಗತಿ ಪಾಸಾಗಿರಬೇಕು.
ವಿಶೇಷ ಮೀಸಲು ಪೊಲೀಸ್ ಕಾನ್ಸ್‌ಟೇಬಲ್ (KSRP) ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 10 ನೇ ತರಗತಿ (ಎಸ್‌ಎಸ್‌ಎಲ್‌ಸಿ) ಉತ್ತೀರ್ಣರಾಗಿರಬೇಕು.
ಪೊಲೀಸ್ ಸಬ್‌ಇನ್ಸ್‌ಪೆಕ್ಟರ್ (SI) ಹುದ್ದೆಗೆ ಅರ್ಜಿ ಸಲ್ಲಿಸಬಯಸುವವರು ಯಾವುದೇ ವಿಷಯದಲ್ಲಿ ಪದವಿಯಲ್ಲಿ ಪಾಸಾಗಿರಬೇಕು.
ಪೊಲೀಸ್ ಕಾನ್ಸ್‌ಟೇಬಲ್ (ಸಿವಿಲ್) ಹುದ್ದೆಗೆ ಅರ್ಜಿ ಸಲ್ಲಿಸಬಯಸುವವರು ದ್ವಿತೀಯ ಪಿಯುಸಿ (PUC) ವಿದ್ಯಾರ್ಹತೆ ಹೊಂದಿರಬೇಕು.
ವಯೋಮಿತಿ ವಿವರ
ಸಶಸ್ತ್ರ ಪೊಲೀಸ್ ಕಾನ್ಸ್‌ಟೇಬಲ್/ವಿಶೇಷ ಮೀಸಲು ಪೊಲೀಸ್ ಕಾನ್ಸ್‌ಟೇಬಲ್ ಹುದ್ದೆಗೆ ಅರ್ಜಿ ಸಲ್ಲಿಸು ಅಭ್ಯರ್ಥಿಗಳ ಕನಿಷ್ಠ ವಯಸ್ಸು 18 ವರ್ಷ ಆಗಿರಬೇಕು.
ಗರಿಷ್ಠ ವಯೋಮಿತಿ:
ಸಾಮಾನ್ಯ ಅರ್ಹತೆಯ ಅಭ್ಯರ್ಥಿಗಳಿಗೆ: ಗರಿಷ್ಠ 25 ವರ್ಷ.
SC/ST ಮತ್ತು ಒಬಿಸಿ ಅಭ್ಯರ್ಥಿಗಳಿಗೆ: ಗರಿಷ್ಠ 27 ವರ್ಷ.
ಬುಡಕಟ್ಟು ಅಭ್ಯರ್ಥಿಗಳಿಗೆ: ಗರಿಷ್ಠ 30 ವರ್ಷ.
ಈ ಮೇಲಿನ ಎಲ್ಲಾ ಹುದ್ದೆಗಳ ಆರ್ಥಿಕ ಇಲಾಖೆಯಿಂದ ಅನುಮೋದನೆ ನೀಡಲಾಗಿದೆ. ಅತಿ ಶೀಘ್ರದಲ್ಲಿ ಅಧಿಸೂಚನೆ ಬಿಡುಗಡೆಯಾಗಲಿದೆ.
ಇದನ್ನೂ ಓದಿ: ಅಂಚೆ ಬ್ಯಾಂಕ್ ನೇಮಕಾತಿ 1 ಲಕ್ಷಕ್ಕೂ ಹೆಚ್ಚು ವೇತನ