ಭಾರತೀಯ ಅಂಚೆ ಇಲಾಖೆಯಿಂದ ಕರ್ನಾಟಕ ಅಂಚೆ ವೃತ್ತ (Karnataka Post Office Recruitment 2025) ದಲ್ಲಿ ಖಾಲಿಯಿರುವ ಗ್ರಾಮೀಣ ಡಾಕ್ ಸೇವಕ್ ಹುದ್ದೆಗಳನ್ನು ಭರ್ತಿ ಮಾಡಲು ಆನ್ಲೈನ್ ಅಜಿ೯ ಆಹ್ವಾನಿಸಲಾಗಿದೆ. ಅರ್ಹತೆ ಹೊಂದಿರುವ ಆಸಕ್ತ ಅಭ್ಯರ್ಥಿಗಳು ಅಗತ್ಯ ದಾಖಲೆಗಳೊಂದಿಗೆ ಆನ್ಲೈನ್ ಅರ್ಜಿಯನ್ನು ಸಲ್ಲಿಸಬಹುದು. ಭಾರತೀಯ ಅಂಚೆ ಇಲಾಖೆಯಿಂದ ಒಟ್ಟು 21,413 ಡಾಕ್ ಸೇವಕ್ ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಲಾಗಿದೆ. ಅದರಲ್ಲಿ ಕರ್ನಾಟಕ ಅಂಚೆ ವೃತ್ತದಲ್ಲಿ 1135 ಹುದ್ದೆಗಳು ಖಾಲಿ ಇದೆ.
ಭಾರತೀಯ ಅಂಚೆ ಇಲಾಖೆಯಿಂದ ಕರ್ನಾಟಕ ಅಂಚೆ ವೃತ್ತದಲ್ಲಿ (KARNATAKA POSTAL CIRCLE RECRUITMENT) ಗ್ರಾಮೀಣ ಡಾಕ್ ಸೇವಕ್ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಅಗತ್ಯವಿರುವ ವಿದ್ಯಾರ್ಹತೆ,(Qualification) ವೇತನ ಶ್ರೇಣಿ, (Salary) ವಯೋಮಿತಿ, (Age Limit) ಅರ್ಜಿ ಶುಲ್ಕ,( Application Fees ) ಹುದ್ದೆಗಳ ವಿವರ, ಇತರೆ ಎಲ್ಲಾ ಮಾಹಿತಿ ಕೆಳಗೆ ವಿವರಿಸಲಾಗಿದೆ, ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮುನ್ನ ಅಧಿಸೂಚನೆ (Notification) ಓದಿ ನಂತರ ಅರ್ಜಿ ಸಲ್ಲಿಸಿ.
Karnataka Post Office Recruitment 2025
ಹುದ್ದೆಗಳ ಹೆಸರು: ಗ್ರಾಮೀಣ ಡಾಕ್ ಸೇವಕ್ (ಬ್ರಾಂಚ್ ಪೋಸ್ಟ್ ಮಾಸ್ಟರ್ (ಬಿಪಿಎಂ), ಅಸಿಸ್ಟೆಂಟ್ ಬ್ರಾಂಚ್ ಪೋಸ್ಟ್ ಮಾಸ್ಟರ್ (ಎಬಿಪಿಎಂ)
ಉದ್ಯೋಗದ ಸ್ಥಳ: ಕರ್ನಾಟಕ
ಕರ್ನಾಟಕದಲ್ಲಿನ ಹುದ್ದೆ ಮಾಹಿತಿ: ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಒಟ್ಟು 1135 ಗ್ರಾಮೀಣ ಡಾಕ್ ಸೇವಕ್ ಉದ್ಯೋಗ ನೇಮಕಾತಿಗೆ ಅಧಿಸೂಚನೆ ಹೊರಡಿಸಲಾಗಿದೆ.
ಯಾವ ಜಿಲ್ಲೆಯಲ್ಲಿ ಎಷ್ಟು ಹುದ್ದೆಗಳು?:
ಜಿಲ್ಲೆಗಳ ಹೆಸರು | ಹುದ್ದೆಗಳ ಸಂಖ್ಯೆ |
ಬಾಗಲಕೋಟೆ | 24 |
ಬಳ್ಳಾರಿ | 41 |
ಬೆಂಗಳೂರು ಜಿಪಿಒ | 04 |
ಚನ್ನಪಟ್ಟಣ | 30 |
ಬೀದರ್ | 24 |
ಬೆಂಗಳೂರು ದಕ್ಷಿಣ | 13 |
ಬೆಂಗಳೂರು ಪೂರ್ವ | 54 |
ಬೆಳಗಾವಿ | 27 |
ಚಿಕ್ಕಮಗಳೂರು | 37 |
ಹಾಸನ | 50 |
ಗೋಕಕ್ | 03 |
ಗದಗ | 09 |
ಧಾರವಾಡ | 29 |
ದಾವಣಗೆರೆ ಕಚೇರಿ | 34 |
ಚಿತ್ರದುರ್ಗ | 35 |
ಚಿಕ್ಕೋಡಿ | 18 |
ಹಾವೇರಿ | 20 |
ಮೈಸೂರು | 45 |
ಮಂಗಳೂರು | 23 |
ಮಂಡ್ಯ | 43 |
ಕೊಪ್ಪಳ | 22 |
ಕೋಲಾರ | 50 |
ಕೊಡಗು | 33 |
ಕರವಾರ | 32 |
ಕಲಬುರ್ಗಿ | 27 |
ಪುತ್ತೂರು | 50 |
ನಂಜನಗೂಡು | 35 |
ರಾಯಚೂರು | 13 |
ಆರ್ಎಂಎಸ್ ಕ್ಯೂ | 02 |
ಆರ್ಎಂಎಸ್ ಹೆಚ್ಬಿ | 02 |
ಆರ್ಎಂಎಸ್ ಬಿಜಿ | 24 |
ಶಿವಮೊಗ್ಗ | 36 |
ಶಿರಸಿ | 33 |
ವಿಜಯಪುರ | 26 |
ಯಾದಗಿರಿ | 18 |
ಉಡುಪಿ | 56 |
ತುಮಕೂರು | 64 |
ವಿದ್ಯಾರ್ಹತೆ:
ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಯಾವುದೇ ವಿದ್ಯಾಸಂಸ್ಥೆಯಿಂದ 10ನೇ ತರಗತಿಯನ್ನು (SSLC) ಪೂರ್ಣಗೊಳಿಸಿರಬೇಕು. ಜೊತೆಗೆ ಕಂಪ್ಯೂಟರ್ ಜ್ಞಾನದ ಮತ್ತು ಸೈಕಲ್ ಓಡಿಸಲು ಬರಬೇಕು.
ವಯೋಮಿತಿ:
ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ವಯಸ್ಸು ಕನಿಷ್ಠ 18 ವರ್ಷಆಗಿರಬೇಕು. ಹಾಗೂ ಗರಿಷ್ಠ 40 ವರ್ಷಗಳಾಗಿರಬೇಕು.
ವಯೋಮಿತಿ ಸಡಿಲಿಕೆ:
ಒಬಿಸಿ ಅಭ್ಯರ್ಥಿಗಳಿಗೆ: 3 ವರ್ಷ
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಅಭ್ಯರ್ಥಿಗಳಿಗೆ: 5 ವರ್ಷ
ವಿಶೇಷಚೇತನ ಅಭ್ಯರ್ಥಿಗಳಿಗೆ: 10 ವರ್ಷ ವಯೋಮಿತಿ ಸಡಿಲಿಕೆ ಇರುತ್ತದೆ.
ಅರ್ಜಿ ಶುಲ್ಕ:
ಇತರೆ ಎಲ್ಲಾ ವಗ೯ದ ಅಭ್ಯರ್ಥಿಗಳಿಗೆ: 100 ರೂ.
ಮಹಿಳೆಯರು, SC/ST, ವಿಕಲಚೇತನ ಅಭ್ಯಾಥಿ೯ಗಳಿಗೆ: ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ.
Karnataka Post Office Recruitment 2025 ವೇತನ ಶ್ರೇಣಿ:
ಗ್ರಾಮೀಣ ಡಾಕ್ ಸೇವಕ್ ಬ್ರಾಂಚ್ ಪೋಸ್ಟ್ ಮಾಸ್ಟರ್ (ಬಿಪಿಎಂ) ಹುದ್ದೆಗೆ: 10,000 – 29,380ರೂ.
ಗ್ರಾಮೀಣ ಡಾಕ್ ಸೇವಕ್ ಅಸಿಸ್ಟೆಂಟ್ ಬ್ರಾಂಚ್ ಪೋಸ್ಟ್ ಮಾಸ್ಟರ್ (ಎಬಿಪಿಎಂ) ಹುದ್ದಗೆ: 10000 – 24470ರೂ.
ಆಯ್ಕೆ ಪ್ರಕ್ರಿಯೆ:
ಈ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ವಿದ್ಯಾಹ೯ತೆಯಲ್ಲಿ ಪಡೆದಿರುವ ಅಂಕಗಳ ಆಧಾರದ ಮೇಲೆ ಮೆರಿಟ್ ಪಟ್ಟಿ, ದಾಖಲಾತಿ ಪರಿಶೀಲನೆ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು.
ಪ್ರಮುಖ ದಿನಾಂಕಗಳು:
ಅರ್ಜಿ ಸ್ವೀಕರಿಸಲು ಪ್ರಾರಂಭದ ದಿನಾಂಕ : ಫೆಬ್ರುವರಿ 10, 2025
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : ಮಾರ್ಚ್ 03, 2025
ಅರ್ಜಿ ತಿದ್ದುಪಡಿ ಮಾಡಲು: ಮಾರ್ಚ್ 6 ರಿಂದ 8ರ ವರೆಗೆ ಅವಕಾಶ ನೀಡಲಾಗಿದೆ.
10ನೇ ತರಗತಿ ಪಾಸಾದವರಿಗೆ ಭರ್ಜರಿ ಗುಡ್ ನ್ಯೂಸ್ ಅಂಚೆ ಇಲಾಖೆಯಲ್ಲಿ 21 ಸಾವಿರಕ್ಕೂ ಅಧಿಕ ಹುದ್ದೆಗಳ ನೇಮಕಾತಿ!
ಪ್ರಮುಖ ಲಿಂಕ್ ಗಳು:
ಅಧಿಸೂಚನೆ ನೋಡಲು: ಇಲ್ಲಿ ಕ್ಲಿಕ್ ಮಾಡಿ
CIRCLE WISE VACANCY ಅಧಿಸೂಚನೆ: ಇಲ್ಲಿ ಕ್ಲಿಕ್ ಮಾಡಿ
ಆನ್ಲೈನ್ ಅಜಿ೯ ಸಲ್ಲಿಸಲು: ಇಲ್ಲಿ ಕ್ಲಿಕ್ ಮಾಡಿ
ಅಧಿಕೃತ ವೆಬ್ ಸೈಟ್ ವಿಳಾಸ: karnatakapost.gov.in
ಈ ಸುದ್ದಿಯನ್ನೂ ಓದಿ: ಫೀಲ್ಡ್ ಆಫೀಸರ್ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ