PUC ವಿದ್ಯಾರ್ಥಿಗಳಿಗೆ ಪ್ರತಿ ತಿಂಗಳು 3,500 ರೂ. ವಿದ್ಯಾರ್ಥಿ ವೇತನ | Kotak Junior Scholarship 2024

WhatsApp Group Join Now
Telegram Group Join Now

Kotak Junior Scholarship 2024: ನಮಸ್ಕಾರ ಸ್ನೇಹಿತರೆ ಇವತ್ತಿನ ಈ ಲೇಖನದಲ್ಲಿ ವಿದ್ಯಾರ್ಥಿಗಳ ಶಿಕ್ಷಣದ ಜೊತೆಗೆ ವಿವಿಧ ಸಂಸ್ಥೆಗಳು ನೀಡುವ ವಿದ್ಯಾರ್ಥಿ ವೇತನ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಒದಗಿಸಲಾಗುತ್ತದೆ. ಇವತ್ತಿನ ಈ ವಿದ್ಯಾರ್ಥಿ ವೇತನವು 10 ನೇ ತರಗತಿ ಪಾಸಾಗಿ ಮುಂದಿನ ಶಿಕ್ಷಣ ಪ್ರಥಮ ಪಿಯುಸಿ ಮತ್ತು ದ್ವೀತಿಯ ಪಿಯುಸಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಕೋಟಕ್ ಮಹೀಂದ್ರಾ ಗ್ರೂಪ್ ನಿಂದ ಕೋಟಕ್ ಜೂನಿಯರ್ ಸ್ಕಾಲರ್‌ ಶಿಪ್ ನೀಡುತ್ತಿದ್ದು, ಈ ಸ್ಕಾಲರ್ಶಿಪ್ ಗೆ ಯಾರು ಅರ್ಹರು ಅರ್ಜಿ ಸಲ್ಲಿಸುವುದು ಹೇಗೆ? , ದಾಖಲೆಗಳನ್ನು ಬೇಕು ಎಂಬ ಸಂಪೂರ್ಣ ಮಾಹಿತಿ ಈ ಕೆಳಗೆ ನೀಡಲಾಗಿದೆ.

ಕೋಟಕ್ ಮಹೀಂದ್ರಾ ಗ್ರೂಪ್ ನ ಅನುಷ್ಠಾನ ಸಂಸ್ಥೆಯಾದ ಕೋಟಕ್ ಎಜುಕೇಶನ್ ಫೌಂಡೇಷನ್ (KEF) ನಿಂದ ಶಿಕ್ಷಣ ಮತ್ತು ಜೀವನೋಪಾಯದ ಕುರಿತು ಸಿಎಸ್‌ಆರ್ ಉಪಕ್ರಮದ ಅಡಿಯಲ್ಲಿ, 10ನೇ ತರಗತಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಕೋಟಕ್ ಜೂನಿಯರ್ ಸ್ಕಾಲರ್‌ ಶಿಪ್ ನೀಡಲಾಗುತ್ತಿದೆ.

Kotak Junior Scholarship 2024 ಪ್ರಯೋಜನಗಳು:

ಈ ವಿದ್ಯಾರ್ಥಿ ವೇತನ ಆಯ್ಕೆಯಾಗುವ ವಿದ್ಯಾರ್ಥಿಗಳಿಗೆ ಪ್ರತಿ ತಿಂಗಳು 3,500 ರೂ. ವಿದ್ಯಾರ್ಥಿ ವೇತನ ನೀಡಲಾಗುತ್ತದೆ. ಸ್ಕಾಲರ್ಶಿಪ್ ನ ಒಟ್ಟು ಮೊತ್ತವು 21 ತಿಂಗಳಿಗೆ 73,500 ರೂ. ಆಗಿರುತ್ತದೆ.

ಅರ್ಜಿ ಸಲ್ಲಿಸಲು ಯಾರು ಅರ್ಹರು:

  • ಅರ್ಜಿದಾರರು 2024 ರಲ್ಲಿ 10 ನೇ ತರಗತಿ (SSLC/ CBSE/ICSE) ಪರೀಕ್ಷೆಯಲ್ಲಿ 85% ಅಂಕ ಪಡೆದಿರಬೇಕು.
  • 2024-25 ನೇ ಸಾಲಿನಲ್ಲಿ ಕಲೆ, ವಿಜ್ಞಾನ, ವಾಣಿಜ್ಯ ವಿಭಾಗದಲ್ಲಿ 1st PUC ಓದುತ್ತಿರಬೇಕು.
  • ವಿದ್ಯಾರ್ಥಿ ಕುಟುಂಬದ ವಾರ್ಷಿಕ ಆದಾಯ 3,20,000 ರೂ. ಮೀರಿರಬಾರದು.
  • ಕೋಟಕ್ ಎಜುಕೇಶನ್ ಫೌಂಡೇಷನ್ ಉದ್ಯೋಗಿಗಳ ಮಕ್ಕಳ ಅರ್ಜಿ ಸಲ್ಲಿಸಲು ಅರ್ಹರಲ್ಲ.

Kotak Junior Scholarship Program ಪ್ರಮುಖ ದಾಖಲೆಗಳು:

  • ಅರ್ಜಿದಾರರ ಇತ್ತೀಚಿನ ಪಾಸ್‌ಪೋರ್ಟ್ ಗಾತ್ರದ ಭಾವಚಿತ್ರ
  • ಪೋಷಕರ ಪ್ಯಾನ್ ಕಾರ್ಡ್
  • ವಿದ್ಯಾರ್ಥಿಯ ಬ್ಯಾಂಕ್ ಖಾತೆ
  • ಶಾಲೆ ಯಿಂದ ನೀಡುವ ಪ್ರಮಾಣಪತ್ರ
  • ಪೋಷಕರು ಮತ್ತು ವಿದ್ಯಾರ್ಥಿಗಳಿಬ್ಬರ ಆಧಾರ್ ಕಾರ್ಡ್
  • SSC/ICSE/CBSE ಮಾರ್ಕ್‌ಶೀಟ್ ನಕಲು ಕಡ್ಡಾಯ.
  • ವಿದ್ಯಾರ್ಥಿಗಳ ಕುಟುಂಬದ BPL/ APL ಪಡಿತರ ಚೀಟಿ
  • ಭಾರತ ಸರ್ಕಾರದಿಂದ ನೀಡಲಾದ ಆದಾಯ ಪ್ರಮಾಣಪತ್ರ

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 05-08-2024

ಆನ್‌ಲೈನ್ ಅರ್ಜಿ ಸಲ್ಲಿಸಲು: ಇಲ್ಲಿ ಕ್ಲಿಕ್ ಮಾಡಿ

ಇತರೆ ಸ್ಕಾಲರ್‌ಶಿಪ್ ಮಾಹಿತಿ:‌

Leave a Comment

WhatsApp

Join Now Latest UpDates

Join Now Latest Job And Scheme UpDates News Belagavi

Powered by Webpresshub.net