Kotak Kanya Scholarship 2024: 12ನೇ ತರಗತಿ ಪಾಸಾಗಿ ನಂತರ ವೃತ್ತಿಪರ ಉನ್ನತ ಶಿಕ್ಷಣ ಪಡೆಯಲು ಬಯಸುವ ವಿದ್ಯಾರ್ಥಿಗಳಿಗೆ ಕೋಟಕ್ ಕನ್ಯಾ ಸ್ಕಾಲರ್‌ಶಿಪ್ 2024-25 ರ ಅರ್ಹ ವಿದ್ಯಾರ್ಥಿಗಳಿಂದ ವಿದ್ಯಾರ್ಥಿವೇತನಕ್ಕೆ ಆನ್‌ಲೈನ್ ಅರ್ಜಿ ಆಹ್ವಾನಿಸಲಾಗಿದೆ.
ಈ ವಿದ್ಯಾರ್ಥಿವೇತನವನ್ನು ಆರ್ಥಿಕವಾಗಿ ಹಿಂದುಳಿದ ಮತ್ತು ಅರ್ಹ ಪ್ರತಿಭಾವಂತ ವಿದ್ಯಾರ್ಥಿನಿಯರಿಗೆ PUC ನಂತರದ ವೃತ್ತಿಪರ ಕೋರ್ಸ್‌ಗಳಲ್ಲಿ ಉನ್ನತ ಶಿಕ್ಷಣವನ್ನು ಪಡೆಯಲು ಆರ್ಥಿಕ ಸಹಾಯಧನ ಒದಗಿಸುತ್ತದೆ. ಅರ್ಜಿ ಸಲ್ಲಿಸುವ ವಿದ್ಯಾರ್ಥಿನಿಯರು ಭಾರತದ ಯಾವುದೇ ರಾಜ್ಯದವರಾದು ಈ ಆರ್ಥಿಕ ನೆರವು ಪಡೆಯಬಹುದು.
Kotak Kanya Scholarship 2024:
ಈ ವಿದ್ಯಾರ್ಥಿವೇತನವು ಕೋಟಕ್ ಮಹೀಂದ್ರಾ ಗ್ರೂಪ್ ಕಂಪನಿಗಳು ಹಾಗೂ ಕೋಟಕ್ ಎಜುಕೇಶನ್ ಫೌಂಡೇಶನ್‌ನ (Kotak Education Foundation) ಸಹಯೋಗದ (CSR) ಯೋಜನೆಯಾಗಿದೆ. ಸಮಾಜದಲ್ಲಿ ಆರ್ಥಿಕವಾಗಿ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳ ಶಿಕ್ಷಣ ಹಾಗೂ ಜೀವನೋಪಾಯವನ್ನು ಉತ್ತೇಜಿಸುವುದು ಈ ಯೋಜನೆಯ ಮುಖ್ಯ ಗುರಿಯಾಗಿದೆ.
ಯಾವ ವೃತ್ತಿಪರ ಕೋರ್ಸ್‌ಗಳಿಗೆ ಸ್ಕಾಲರ್ಶಿಪ್ ಸಿಗಲಿದೆ:
12 ನೇ ತರಗತಿಯಲ್ಲಿ ಉತ್ತಿರ್ಣರಾಗಿ ನಂತರದ ಉನ್ನತ ಶಿಕ್ಷಣಗಳಾದ ಎಂಜಿನಿಯರಿಂಗ್, ಎಂಬಿಬಿಎಸ್, ಬಿಡಿಎಸ್, ಇಂಟಿಗ್ರೇಟೆಡ್ ಎಲ್‌ಎಲ್‌ಬಿ (5 ವರ್ಷಗಳು), ಬಿ.ಫಾರ್ಮಸಿ, ಬಿಎಸ್‌ಸಿ ಮುಂತಾದ ವೃತ್ತಿಪರ ಪದವಿ ಕೋರ್ಸ್’ನ್ನು ಮುಂದುವರಿಸಲು ಬಯಸುವ ಪ್ರತಿಭಾವಂತ ವಿದ್ಯಾರ್ಥಿನಿಯರಿಗೆ ಈ ಸ್ಕಾಲರ್‌ಶಿಪ್ ಸಹಾಯವಾಗಲ್ಲಿದೆ.
ಇವುಗಳನ್ನು ಹೊರತುಪಡಿಸಿ ನರ್ಸಿಂಗ್, ಇಂಟಿಗ್ರೇಟೆಡ್ BS- MS/BS-ರಿಸರ್ಚ್, ISER, IISC (ಬೆಂಗಳೂರು) ಅಥವಾ NAAC/NIRF ಮಾನ್ಯತೆ ಪಡೆದ ಸಂಸ್ಥೆಗಳಲ್ಲಿ ವಿನ್ಯಾಸ, ಆರ್ಕಿಟೆಕ್ಟರ್ ಸೇರಿದಂತೆ ಇತರ ವೃತ್ತಿಪರ ಕೋರ್ಸ್’ನ್ನು ಓದುತ್ತಿರುವ ವಿದ್ಯಾರ್ಥಿನಿಯರಿಗೆ ಈ ವಿದ್ಯಾರ್ಥಿವೇತನ ಒದಗಿಸಲಾಗುತ್ತದೆ.
ಇದನ್ನೂ ಓದಿ: ಅಂಚೆ ಇಲಾಖೆಯಿಂದ 6 ರಿಂದ 9ನೇ ತರಗತಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ
ವಿದ್ಯಾರ್ಥಿವೇತನದ ಮೊತ್ತ:
ಕೋಟಕ್ ಕನ್ಯಾ ಸ್ಕಾಲರ್‌ಶಿಪ್ ಯೋಜನೆಗೆ ಆಯ್ಕೆಯಾಗುವ ವಿದ್ಯಾರ್ಥಿನಿಯರಿಗೆ ವೃತ್ತಿಪರ ಪದವಿ ಕೋರ್ಸ್‌ಗಳನ್ನು ಓದಲು ಪ್ರತೀ ವರ್ಷಕ್ಕೆ 1.5 ಲಕ್ಷ ರೂಪಾಯಿ ಸ್ಕಾಲರ್ಶಿಪ್ ನೀಡಲಾಗುತ್ತದೆ.
ಈ ವಿದ್ಯಾರ್ಥಿವೇತನದ 1.5 ಲಕ್ಷ ರೂ. ಮೊತ್ತವನ್ನು ಬೋಧನಾ ಶುಲ್ಕ ಹಾಸ್ಟೆಲ್ ಶುಲ್ಕ ಇಂಟರ್ನೆಟ್, ಸಾರಿಗೆ, ಲ್ಯಾಪ್‌ಟಾಪ್, ಪುಸ್ತಕ ಮತ್ತು ಇತರೆ ಲೇಖನ ಸಾಮಗ್ರಿಗಳು ಖರೀದಿಸಲು ಈ ವೆಚ್ಚವನ್ನು ಬಳಸಿಕೊಳ್ಳಬಹುದು.
ಅರ್ಜಿ ಸಲ್ಲಿಸಲು ಅರ್ಹತೆಗಳು:
ದ್ವೀತಿಯ ಪಿಯುಸಿ ಬೋರ್ಡ್ ಪರೀಕ್ಷೆಗಳಲ್ಲಿ 75% ಕ್ಕಿಂತ ಹೆಚ್ಚಿನ ಅಂಕಗಳನ್ನು ಗಳಿಸಿರಬೇಕು.
ಭಾರತದ ಯಾವುದೇ ರಾಜ್ಯದ ವಿದ್ಯಾರ್ಥಿನಿಯರು ಅರ್ಜಿ ಸಲ್ಲಿಸಬಹುದಾಗಿದೆ.
,ಅರ್ಜಿದಾರರ ಕುಟುಂಬದ ವಾರ್ಷಿಕ ಆದಾಯವು 6,00,000 ರೂ. ಗಿಂತ ಕಡಿಮೆ ಹೊಂದಿರಬೇಕು.
ಏಕ ಪೋಷಕರು/ ಅನಾಥ ಹಾಗೂ ಅಂಗವಿಕಲ ವಿದ್ಯಾರ್ಥಿನಿಯರಿಗೆ ವಿಶೇಷ ಆದ್ಯತೆ ಇರುತ್ತದೆ.
ಇದನ್ನೂ ಓದಿ: ವರಮಹಾಲಕ್ಷ್ಮಿ ಹಬ್ಬಕ್ಕೆ ಗೃಹ ಲಕ್ಷ್ಮಿ ಫಲಾನುಭವಿಗಳಿಗೆ 2000 ರೂ. ಹಣ ಜಮಾ DBT ರೀತಿ ಚೇಕ್ ಮಾಡಿ
Kotak Kanya Scholarship 2024 ಪ್ರಮುಖ ದಾಖಲೆಗಳೇನು?
- 12ನೇ ತರಗತಿ ಅಂಕಪಟ್ಟಿ ಪ್ರತಿ
- ಪೋಷಕರ ಆದಾಯ ಪ್ರಮಾಣ ಪತ್ರ
- 2024-25 ಶೈಕ್ಷಣಿಕ ವರ್ಷದ ಶುಲ್ಕದ ರಸಿದಿ
- ವಿದ್ಯಾರ್ಥಿನಿ ಉತ್ತಮ ಪ್ರಮಾಣಪತ್ರ ಕಾಲೇಜಿನಿಂದ
- ವಿದ್ಯಾರ್ಥಿನಿಯ ಆಧಾರ್ ಕಾರ್ಡ್
- ಬ್ಯಾಂಕ್ ಪಾಸ್ ಬುಕ್
- ಪಾಸ್ಪೋರ್ಟ್ ಸೈಜ್ ಫೋಟೋ
- ಅಂಗವೈಕಲ್ಯ ಪ್ರಮಾಣಪತ್ರ (ಅನ್ವಯಿಸಿದರೆ)
- ಪೋಷಕರ ಮರಣ ಪ್ರಮಾಣಪತ್ರ (ಏಕ ಪೋಷಕ/ಅನಾಥ ಅಭ್ಯರ್ಥಿಗಳಿಗೆ)
- ಅರ್ಜಿದಾರರ ಮನೆಯ ಫೋಟೋ
ಪ್ರಮುಖ ದಿನಾಂಕ ಮತ್ತು ಅರ್ಜಿ ಸಲ್ಲಿಸುವ ಲಿಂಕ್:
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 30, ಸೆಪ್ಟೆಂಬರ್, 2024
ಆನ್‌ಲೈನ್ ಅರ್ಜಿ ಸಲ್ಲಿಸಲು: ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಬೆಳೆಹಾನಿ ಪರಿಹಾರ ಆಧಾರ್ ಲಿಂಕ್ ಆದ ರೈತರ ಪಟ್ಟಿ ಬಿಡುಗಡೆ ಪಟ್ಟಿಯಲ್ಲಿ ನಿಮ್ಮ ಹೆಸರು ಚೆಕ್ ಮಾಡಿ