ಕರ್ನಾಟಕ ಲೋಕಸೇವಾ ಆಯೋಗ (KPSC) ಖಾಲಿ ಇರುವ ಗೆಜೆಟೆಡ್ ಪ್ರೊಬೇಶನರಿ ಗ್ರೂಪ್ ಎ ಮತ್ತು ಬಿ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಆನ್‌ಲೈನ್ ಮೂಲಕ ಅಧಿಸೂಚನೆ ಹೊರಡಿಸಿದೆ.
ಕರ್ನಾಟಕ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಗೆಜೆಟೆಡ್ ಪ್ರೊಬೇಶನರಿ ಹುದ್ದೆಗಳನ್ನು ಭರ್ತಿ ಮಾಡುವ ಸಲುವಾಗಿ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಿದೆ. ಅರ್ಜಿ ಸಲ್ಲಿಸಲು ಆಸಕ್ತಿ ಇರುವ ಅಭ್ಯರ್ಥಿಗಳು ನೇಮಕಾತಿಗೆ ಸಂಭವಿಸಿದ ಪ್ರಮುಖ ವಿವರಗಳು ಹುದ್ದೆಗಳ ವಿವರ, ವಿದ್ಯಾರ್ಹತೆ, ವೇತನ ಶ್ರೇಣಿ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ & ಅರ್ಜಿ ಸಲ್ಲಿಸುವ ವಿಧಾನ, ಅಧಿಕೃತ ಅಧಿಸೂಚನೆ, ಅರ್ಜಿ ಸಲ್ಲಿಸುವ ಲಿಂಕ್‌ಗಳು ಮುಂತಾದ ವಿವರಗಳನ್ನು ಕೆಳಗೆ ನೀಡಲಾಗಿದೆ ಖಚಿತ ಪಡೆಸಿಕೊಂಡು ಅರ್ಜಿ ಸಲ್ಲಿಸಿ.
KPSC KAS Recruitment 2024 ಸಂಕ್ಷಿಪ್ತ ವಿವರ:
ಒಟ್ಟು ಹುದ್ದೆಗಳ ಸಂಖ್ಯೆ: 384
ಹುದ್ದೆಗಳ ಹೆಸರು: ಗೆಜೆಟೆಡ್ ಪ್ರೊಬೇಶನರಿ ಗ್ರೂಪ್ ಎ& ಬಿ
ಹುದ್ದೆಗಳ ಮಾಹಿತಿ:
ಗ್ರೂಪ್ ಎ ಹುದ್ದೆಗಳ ಸಂಖ್ಯೆ: 159
ಗ್ರೂಪ್ ಬಿ ಹುದ್ದೆಗಳ ಸಂಖ್ಯೆ: 255
ಶೈಕ್ಷಣಿಕ ಅರ್ಹತೆ:
KPSC ನೇಮಕಾತಿ ಪ್ರಕಾರ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಅಥವಾ ಸಂಸ್ಥೆಯಿಂದ ಯಾವುದೇ ವಿಷಯದಲ್ಲಿ ಪದವಿ ಪೂರ್ಣಗೊಳಿಸರಬೇಕು. ಅಥವಾ ಪದವಿ ಕೊನೆಯ ವರ್ಷದಲ್ಲಿ ಓದುತ್ತಿರುವ ಅಭ್ಯರ್ಥಿಗಳು ಸಹ ಅರ್ಜಿ ಸಲ್ಲಿಸಬಹುದು.
ವಯೋಮಿತಿ:
ಕರ್ನಾಟಕ ಲೋಕ ಸೇವಾ ಆಯೋಗದ ಪ್ರಕಾರ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯೋಮಿತಿ ಕನಿಷ್ಟ 18 ವರ್ಷ ಪೂರೈಸಿರಬೇಕು ಹಾಗೂ 38 ವರ್ಷ ಮೀರಿರಬಾರದು.
ಗರಿಷ್ಠ ಸಡಿಲಿಕೆ:
SC ಮತ್ತು ST ವರ್ಗದ ಅಭ್ಯರ್ಥಿಗಳಿಗೆ: 05 ವರ್ಷ
ಹಿಂದೂಳಿದ (OBC) ವರ್ಗದ ಅಭ್ಯರ್ಥಿಗಳಿಗೆ : 03 ವರ್ಷ
ಅಂಗವಿಕಲ (PWD) ಅಭ್ಯರ್ಥಿಗಳಿಗೆ: 10 ವರ್ಷ
ವೇತನ ಶ್ರೇಣಿ:
ಕರ್ನಾಟಕ ಲೋಕ ಸೇವಾ ಆಯೋಗ ನಿಯಮಾವಳಿಗಳ ಪ್ರಕಾರ ವೇತನ ಪಡೆಯುತ್ತಾರೆ.
ಯಾವ ಅಭ್ಯರ್ಥಿಗಳು ಎಷ್ಟು ಬಾರಿ ಪರೀಕ್ಷೆಯ ಬರೆಯಬಹುದು?
ಸಾಮಾನ್ಯ ಅರ್ಹತಾ ಅಭ್ಯರ್ಥಿಗಳು: 05 ಬಾರಿ
ಪ್ರವರ್ಗ 1, 2ಎ, 2ಬಿ, 3ಎ & 3ಬಿ ಅಭ್ಯರ್ಥಿಗಳು: 07 ಬಾರಿ
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಭ್ಯರ್ಥಿಗಳು: 40 ವರ್ಷದ ವಯೋಮಿತಿಯಲ್ಲಿ ಎಷ್ಟು ಬಾರಿ ಯಾದರೂ ಬರೆಯಬಹುದು.
ಅರ್ಜಿ ಶುಲ್ಕ:
ಸಾಮಾನ್ಯ ವರ್ಗದ ಅಭ್ಯರ್ಥಿಗಳು: 600 ರೂ.
ಪ್ರವರ್ಗ 2ಎ, 2ಬಿ,3ಎ, 3ಬಿ ಅಭ್ಯರ್ಥಿಗಳು: 300 ರೂ.
ಪ್ರವರ್ಗ- 1, SC/ ST ಮತ್ತು ಅಂಗವಿಕಲ ಅಭ್ಯರ್ಥಿಗಳು : ಅರ್ಜಿ ಶುಲ್ಕ ಇರುವುದಿಲ್ಲ.
ಮಾಜಿ ಸೈನಿಕ ಅಭ್ಯರ್ಥಿಗಳು: 50 ರೂ.
ಅರ್ಜಿ ಶುಲ್ಕ ಪಾವತಿಸುವ ವಿಧಾನ: ಆನ್ ಲೈನ್ ಮೂಲಕ ಪಾವತಿಸಬಹುದು.
ಆಯ್ಕೆ ಪ್ರಕ್ರಿಯೆ:
ಪ್ರಿಲಿಮ್ಸ್ ಲಿಖಿತ ಪರೀಕ್ಷೆ
ಮುಖ್ಯ ಪರೀಕ್ಷೆ
ಸಂದರ್ಶನ
ಪ್ರಮುಖ ದಿನಾಂಕಗಳು:
ಅರ್ಜಿ ಸ್ವೀಕರಿಸಲು ಪ್ರಾರಂಭದ ದಿನಾಂಕ: 04/03/2024
ಅರ್ಜಿ ಸ್ವೀಕರಿಸಲು ಕೊನೆಯ ದಿನಾಂಕ: 21/07/2024
KPSC KAS Recruitment 2024 ಪ್ರಮುಖ ಲಿಂಕ್‌ಗಳು:
ಹೊಸ ಅಧಿಸೂಚನೆ ನೋಡಲು: ಇಲ್ಲಿ ಕ್ಲಿಕ್ ಮಾಡಿ
ಹಳೆಯ ಅಧಿಸೂಚನೆ ನೋಡಲು: ಇಲ್ಲಿ ಕ್ಲಿಕ್ ಮಾಡಿ
ಆನ್‌ಲೈನ್ ಅರ್ಜಿ ಸಲ್ಲಿಸಲು: ಇಲ್ಲಿ ಕ್ಲಿಕ್ ಮಾಡಿ
ವೆಬ್‌ಸೈಟ್ ವಿಳಾಸ: kpsc.kar.nic.in
ಇತರೆ ಉದ್ಯೋಗ ಮಾಹಿತಿ:
- ಇಂಡೊ ಟಿಬೆಟನ್ ಬಾರ್ಡರ್ ಪೊಲೀಸ್ ಫೋರ್ಸ್ ನೇಮಕಾತಿ 2024
- ಪಿಯುಸಿ ಪಾಸಾದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ
- 2000 ಲೈನ್ಮೆನ್ಗಳ ನೇಮಕ SSLC ಪಾಸಾದವರು ಅರ್ಜಿ ಸಲ್ಲಿಸಬಹುದು