KPTCL ನಿಂದ ಕಿರಿಯ ಪವರ್‌ಮ್ಯಾನ್ ಹಾಗೂ ಕಿರಿಯ ಸ್ಟೇಷನ್ ಪರಿಚಾರಕ ನೇಮಕಾತಿ SSLC, PUC ವಿದ್ಯಾರ್ಹತೆ | KPTCL Recruitment 2024

WhatsApp Group Join Now
Telegram Group Join Now

ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ (ಕೆಪಿಟಿಸಿಎಲ್) ಹಾಗೂ ವಿವಿಧ ವಿದ್ಯುತ್ ಸರಬರಾಜು ಕಂಪನಿಗಳಲ್ಲಿ ಖಾಲಿ‌ ಇರುವ ಕಿರಿಯ ಸ್ಟೇಷನ್ ಪರಿಚಾರಕ ಮತ್ತು ಕಿರಿಯ ಪವರ್ ಮ್ಯಾನ್ (Junior Station Attendant & Junior Powerman) ಹುದ್ದೆಗಳನ್ನು ಅರ್ಹ ಅಭ್ಯರ್ಥಿಗಳಿಂ ಭರ್ತಿ ಮಾಡಲು ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ (Karnataka Power Transmission Corporation Limited) ಈ ಹುದ್ದೆಗೆ ಅರ್ಜಿ ಸಲ್ಲಿಸಲು ಅರ್ಹ ಮತ್ತು ಆಸಕ್ತಿ ಇರುವ ಅಭ್ಯರ್ಥಿಗಳು ನೇಮಕಾತಿಗೆ ಸಂಬಂಧಿಸಿದಂತೆ ಅರ್ಹತೆಗಳು, ಒಟ್ಟು ಹುದ್ದೆಗಳ ವಿವರ, ಅರ್ಜಿ ಸಲ್ಲಿಸುವ ಪ್ರಕ್ರಿಯೆ, ಪ್ರಮುಖ ದಿನಾಂಕಗಳು, ಅರ್ಜಿ ಸಲ್ಲಿಸಲು ಡೈರೆಕ್ಟ್ ಲಿಂಕ್‌ಗಳು ಸೇರಿದಂತೆ ಸಂಪೂರ್ಣ ಮಾಹಿತಿಯನ್ನು ಕೆಳಗೆ ನೀಡಲಾಗಿದೆ.

KPTCL Recruitment 2024

ಒಟ್ಟು ಹುದ್ದೆಗಳ ಸಂಖ್ಯೆ: 2975

ಹುದ್ದೆ ಹೆಸರು: ಕಿರಿಯ ಸ್ಟೇಷನ್ ಪರಿಚಾರಕ ಮತ್ತು ಕಿರಿಯ ಪವರ್ ಮ್ಯಾನ್

ಉದ್ಯೋಗದ ಸ್ಥಳ: ಕರ್ನಾಟಕ

ಹುದ್ದೆಗಳ ಸಂಖ್ಯೆ:
ಕಿರಿಯ ಸ್ಟೇಷನ್‌ ಪರಿಚಾರಕ: 433
ಕಿರಿಯ ಪವರ್‌ ಮ್ಯಾನ್‌: 2542

ವಿದ್ಯಾರ್ಹತೆ:
ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಎಸ್.ಎಸ್.ಎಲ್.ಸಿ., 12ನೇ ತರಗತಿ ಪಾಸಾಗಿರಬೇಕು. ಡಿಪ್ಲೋಮಾ, ಬಿ.ಇ ಅಥವಾ ಬಿ.ಟೆಕ್ ಉತ್ತೀರ್ಣರಾಗಿರಬೇಕು. ಅರ್ಜಿ

ವಯೋಮಿತಿ:
ಕರ್ನಾಟಕ ಪವರ್ ಟ್ರಾನ್ಸ್‌ಮಿಷನ್ ಕಾರ್ಪೊರೇಶನ್ ಲಿಮಿಟೆಡ್ (KPTCL Recruitment 2024) ಅಧಿಸೂಚನೆಯ ಪ್ರಕಾರ 2024 ನವೆಂಬರ್ 20 ರಂತೆ ಅಭ್ಯರ್ಥಿಗಳ ಕನಿಷ್ಠ ವಯಸ್ಸು 18 ವರ್ಷ ಪೂರೈಸಿರಬೇಕು ಮತ್ತು ಗರಿಷ್ಠ ವಯಸ್ಸು 35 ವರ್ಷದ ಒಳಗಿರಬೇಕು.

ವಯೋಮಿತಿ ಸಡಿಲಿಕೆ:
ಎಸ್‌ಸಿ/ಎಸ್‌ಟಿ/ಕ್ಯಾಟ್-I ಅಭ್ಯರ್ಥಿಗಳಿಗೆ: 05 ವರ್ಷ
ಪ್ರವರ್ಗ -2ಎ/2ಬಿ/3ಎ & 3ಬಿ ಅಭ್ಯರ್ಥಿಗಳಿಗೆ: 03 ವರ್ಷ

KPTCL Recruitment 2024 ವೇತನ ಶ್ರೇಣಿ:
1ನೇ ವರ್ಷ: ರೂ. 17,000/-
2ನೇ ವರ್ಷ: ರೂ. 19,000/-
3ನೇ ವರ್ಷ: ರೂ. 21,000/-
ಮೂರು ವರ್ಷದ ತರಬೇತಿಯನ್ನು ಪೂರೈಸಿದ ನಂತರ ಅಭ್ಯರ್ಥಿಗಳಿಗೆ ಪ್ರತಿ ತಿಂಗಳು ರೂ. 28,550 ರಿಂದ ರೂ. 63,000 ರವರೆಗೆ ವೇತನ ನೀಡಲಾಗುತ್ತದೆ.

ಅರ್ಜಿ ಶುಲ್ಕ:
ಅಂಗವಿಕಲ ಅಭ್ಯರ್ಥಿಗಳು: ಇರುವುದಿಲ್ಲ.
ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳು: ರೂ. 378/-
ಸಾಮಾನ್ಯ/ಪ್ರವರ್ಗ -2ಎ/2ಬಿ/3ಎ & 3ಬಿ ಅಭ್ಯರ್ಥಿಗಳು: ರೂ. 614/-
ಶುಲ್ಕ ಪಾವತಿಸುವ ವಿಧಾನ : ಅಂಚೆ ಕಚೇರಿಗಳ ಮುಖಾಂತರ ಅರ್ಜಿ ಶುಲ್ಕ ಪಾವತಿಸಬೇಕು.

ಆಯ್ಕೆಯ ವಿಧಾನ:
‘ಸಹನ ಶಕ್ತಿ ಪರೀಕ್ಷೆ’ಯ ಕನಿಷ್ಠ ಮೂರು ಸ್ಪರ್ಧೆಗಳಲ್ಲಿ ಅರ್ಹತೆ ಹೊಂದಿರುವಂತಹ ಅಭ್ಯರ್ಥಿಗಳನ್ನು, ಎಸ್.ಎಸ್.ಎಲ್.ಸಿ ಅಥವಾ 10ನೇ ತರಗತಿಯ ಪರೀಕ್ಷೆಯ ವಿದ್ಯಾರ್ಹತೆಯಲ್ಲಿ ಪಡೆದಿರುವ ಅಂಕಗಳ ಆಧಾರದ ಮೇಲೆ ಆಯ್ಕೆ ಮಾಡಲಾಗುವುದು.

ಸಹನ ಶಕ್ತಿ ಪರೀಕ್ಷೆ :

  1. ವಿದ್ಯುತ್ ಕಂಬ ಹತ್ತುವುದು 8 ಮೀಟರ್ ಎತ್ತರ (ಕಡ್ಡಾಯ)
  2. 100 ಮೀಟರ್ ಓಟ 14 ಸೆಕೆಂಡ್‌ಗಳಲ್ಲಿ
  3. ಸ್ಕಿಪ್ಪಿಂಗ್ ಒಂದು ನಿಮಿಷಕ್ಕೆ 50 ಬಾರಿ
  4. ಶಾಟ್‌ಫುಟ್ (12 ಪೌಂಡ್‌ಗಳು) 8 ಮೀಟ‌ರ್ ಎಸೆತ (3 ಅವಕಾಶಗಳು)
  5. 800 ಮೀಟರ್ ಓಟ 3 ನಿಮಿಷಗಳಲ್ಲಿ

ಪ್ರಮುಖ ದಿನಾಂಕಗಳು:
ಅರ್ಜಿ ಸ್ವೀಕರಿಸಲು ಪ್ರಾರಂಭದ ದಿನಾಂಕ: 21 ಅಕ್ಟೋಬರ್, 2024
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 20 ನವೆಂಬರ್, 2024
ಶುಲ್ಕ ಪಾವತಿಸಲು ಕೊನೆಯ ದಿನಾಂಕ : ನವೆಂಬರ್ 25, 2024

KPTCL Recruitment 2024 ಪ್ರಮುಖ ಲಿಂಕ್‌ಗಳು:
ಅಧಿಸೂಚನೆ ನೋಡಲು: ಇಲ್ಲಿ ಕ್ಲಿಕ್ ಮಾಡಿ
HK ಅಧಿಸೂಚನೆ ನೋಡಲು: ಇಲ್ಲಿ ಕ್ಲಿಕ್ ಮಾಡಿ
NHK ಅಧಿಸೂಚನೆ ನೋಡಲು: ಇಲ್ಲಿ ಕ್ಲಿಕ್ ಮಾಡಿ
ಆನ್‌ಲೈನ್ ಅರ್ಜಿ ಸಲ್ಲಿಸಲು: ಇಲ್ಲಿ ಕ್ಲಿಕ್ ಮಾಡಿ
ವೆಬ್‌ಸೈಟ್ ವಿಳಾಸಗಳು:kptcl.karnataka.gov.in

1170 ಅಂಗನವಾಡಿ ಟೀಚರ್ ಹುದ್ದೆಗಳ ನೇಮಕಾತಿ SSLC, PUC ವಿದ್ಯಾರ್ಹತೆ

ನೈಋತ್ಯ ರೈಲ್ವೆ ಹುಬ್ಬಳ್ಳಿಯಲ್ಲಿ ಉದ್ಯೋಗ 10ನೇ, 12ನೇ ತರಗತಿ ಪಾಸಾದವರು ಅರ್ಜಿ ಸಲ್ಲಿಸಿ 

ಭಾರತೀಯ ವಾಯುಯಾನ ಸೇವೆ ನೇಮಕಾತಿ 3508 ಹುದ್ದೆಗಳು

Leave a Comment