krishi sakhi manage: ನಮಸ್ಕಾರ ಸ್ನೇಹಿತರೆ ಇವತ್ತಿನ ಈ ಲೇಖನದಲ್ಲಿ ತಿಳಿಸುವುದೇನೆಂದರೆ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರದಿಂದ ಕೃಷಿಕರಿಗೆ ಸಂಬಂಧಿಸಿದಂತೆ ಹಲವು ಯೋಜನೆಗಳನ್ನು ಜಾರಿಗೆ ತರುತ್ತವೆ. ಆದರೆ ಮತ್ತೊಂದು ಹೊಸ ಯೋಜನೆ ಮೂಲಕ ಮಹಿಳೆಯರಿಗೆ ಸ್ವ- ಉದ್ಯೋಗ ಸೃಷ್ಟಿಸುವ ದೃಷ್ಟಿಯಿಂದ ಸರ್ಕಾರವು ಮಹಿಳೆಯರಿಗಾಗಿ ಉಪಯುಕ್ತವಾಗಲಿ ಎಂದು ಈ ಒಂದು ಹೊಸ ಯೋಜನೆಯನ್ನು ಜಾರಿಗೆ ತರಲಾಗುತ್ತಿದೆ.
ಏನಿದು ಕೃಷಿ ಸಖೀ ಯೋಜನೆ?:
ಕೃಷಿ ಉದ್ಯೋಗ ಸಖಿ ಯಡಿಯಲ್ಲಿ ಮಣ್ಣಿನ ಆರೋಗ್ಯ, ಮಣ್ಣು ಸಂರಕ್ಷಣೆ ಕ್ರಮಗಳು, ಸಮಗ್ರ ಕೃಷಿ ವ್ಯವಸ್ಥೆ, ಪಶುಸಂಗೋಪನೆ ನಿರ್ವಹಣೆ ಸೇರಿದಂತೆ ಕೃಷಿಗೆ ಸಂಬಂಧಿಸಿದ ವಿವಿಧ ಸಂಗತಿಗಳು ಕುರಿತು ಆಯ್ದ ಸ್ವ-ಸಹಾಯ ಗುಂಪುಗಳ ಮಹಿಳೆಯರಿಗೆ ಕೇಂದ್ರ ಸರಕಾರವು 56 ದಿನಗಳ ಕಾಲ ತರಬೇತಿ ನೀಡುತ್ತದೆ.
Krishi Sakhi Yojane Details
ಯೋಜನೆ ಪ್ರಯೋಜನಗಳು:
56 ತರಬೇತಿ ನಂತರ ಮಹಿಳೆಯರಿಗೆ ಕೃಷಿ ಸಖೀ (Krishi Sakhi) ಪ್ರಮಾಣ ಪತ್ರಗಳನ್ನು ನೀಡಲಾಗುತ್ತದೆ. ಈ ತರಬೇತಿ ಪಡೆದ ಮಹಿಳೆಯರು ಕೇಂದ್ರ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಸಚಿವಾಲಯದಡಿ ನಿರ್ದಿಷ್ಟ ಶುಲ್ಕಕ್ಕೆ ತಮ್ಮ ಸೇವೆಯನ್ನು ಒದಗಿಸಬೇಕಾಗುತ್ತದೆ. ಇದ ರಿಂದಾಗಿ ಕೃಷಿ ಸಖೀ ಪ್ರಮಾಣಪತ್ರ ಪಡೆದ ಮಹಿಳೆಯರು ವರ್ಷಕ್ಕೆ 60,000 ರೂ.ನಿಂದ 80, 000 ರೂ.ವರೆಗೂ ಆದಾಯ ಗಳಿಸಬಹುದು. ಈ ಯೋಜನೆಯ ಉದ್ದೇಶ, ಕೇಂದ್ರ ಸರಕಾರದ 3 ಕೋಟಿ ಲಕಪತಿ ದೀದಿ ನಿರ್ಮಾಣದ ಗುರಿಯೂ ಈಡೇರಲಿದೆ. ಸದ್ಯ ಕೃಷಿ ಸಖಿ ಯೋಜನೆಯು ಕರ್ನಾಟಕ ಸೇರಿದಂತೆ 12 ರಾಜ್ಯಗಳಲ್ಲಿ ಜಾರಿಯಲ್ಲಿದೆ.
Krishi Sakhi Yojane ಯೋಜನೆಯಡಿ ಯಾವೆಲ್ಲ ತರಬೇತಿ ನೀಡಲಾಗುತ್ತದೆ:
- ಕೃಷಿ ಕೆಲಸಗಳಿಗಾಗಿ ಮಹಿಳೆಯರಿಗೆ ಮಣ್ಣು ಹದ ಮಾಡುವ ತರಬೇತು ನೀಡಿ ಅವರಿಗೆ ಬಿತ್ತನೆ ಕಾರ್ಯಕ್ಕೆ ಮುಂಚೆ ಉಳುಮೆ ಮಾಡುವ ಅಥವಾ ಮಣ್ಣು ಹದ ಮಾಡುವ ಬಗ್ಗೆ ತರಬೇತಿ ನೀಡಲಾಗುತ್ತದೆ.
- ಹೂವು, ಬತ್ತ ಬೆಳೆಯುವುದು, ತರಕಾರಿ ಬೆಳೆಯುವುದು, ತೋಟಗಾರಿಕೆ, ಹೈನುಗಾರಿಕೆ ಅನೇಕ ಕೃಷಿ ಚಟುವಟಿಕೆಗಳಲ್ಲಿ ತೊಡಗಲು ಬೇಕಾದ ಹಲವು ತರಬೇತಿ ನೀಡಲಾಗುತ್ತದೆ.
- ಈ ಯೋಜನೆಯ ಮುಖ್ಯ ಉದ್ದೇಶ ಕೃಷಿ ಕ್ಷೇತ್ರದಲ್ಲಿ ಮಹಿಳೆಯರಿಗೆ ಆತ್ಮವಿಶ್ವಾಸ ತುಂಬಿ ಕೃಷಿಯಲ್ಲಿ ಪರಿಣಿತರನ್ನಾಗಿ ಮಾಡುವುದಾಗಿದೆ.
ಅರ್ಜಿ ಹಾಗೂ ತರಬೇತಿ ಪಡೆಯಲು ವೆಬ್‌ಸೈಟ್ ವಿಳಾಸ: ಇಲ್ಲಿ ಕ್ಲಿಕ್ ಮಾಡಿ
ಇತರೆ ಮಾಹಿತಿ:
- PUC, ಪದವಿ, ಡಿಪ್ಲೊಮಾ, ಓದುತ್ತಿರುವ ವಿದ್ಯಾರ್ಥಿಗಳಿಗೆ 12,000 ರೂ.
- PUC ಪಾಸಾದವರಿಗೆ ಆದಾಯ ತೆರಿಗೆ ಇಲಾಖೆಯಲ್ಲಿ ಉದ್ಯೋಗ
- BCM ಹಾಸ್ಟೆಲ್ ಅರ್ಜಿ ಪ್ರಾರಂಭ