Labour Board Application : ರಾಜ್ಯದ ಕಾರ್ಮಿಕರಿಗೆ ಲೇಬರ್ ಕಾರ್ಡ್‌ ಪಡೆಯಲು ಅರ್ಜಿ ಆಹ್ವಾನ

WhatsApp Group Join Now
Telegram Group Join Now

Labour Board Application: ಕರ್ನಾಟಕ ರಾಜ್ಯ ನೋಂದಾಯಿತ ಕಾರ್ಮಿಕರಾಗಲು ಕಾರ್ಮಿಕ ಮಂಡಳಿಯು ಅರ್ಜಿಯನ್ನು ಆಹ್ವಾನಿಸಲಾಗಿದೆ. ಆಸಕ್ತರು ಮತ್ತು ಅರ್ಹತೆ ಹೊಂದಿರುವ ಕಾರ್ಮಿಕರು ಮಂಡಳಿಯು ಸೂಚಿಸಿರುವ ಅಧಿಕೃತ ದಾಖಲೆಗಳನ್ನು ನೀಡಿ ಲೇಬರ್ ಕಾರ್ಡ್‌ ಗೆ ಅರ್ಜಿ ಸಲ್ಲಿಸಬಹುದು.

ಕಾರ್ಮಿಕ ಇಲಾಖೆಯಿಂದ ಕಾರ್ಮಿಕರಿಗಾಗಿ ಜಾರಿಯಲ್ಲಿರುವ ವಿವಿಧ ಯೋಜನೆಗಳ ಪ್ರಯೋಜನ ಪಡೆದುಕೊಳ್ಳಲು ಕಾರ್ಮಿಕ ಕಾರ್ಡ (Labor Card) ಅನ್ನು ಹೊಂದಿರುವುದು ಕಡ್ದಾಯವಾಗಿದ್ದು, ಹಾಗೂ ಈಗಾಗಲೇ ಕಾರ್ಮಿಕ ಕಾರ್ಡ್‌ ಹೊಂದಿರುವವರು ಕಾಲ ಕಾಲಕ್ಕೆ ಕಾರ್ಮಿಕ ಕಾರ್ಡ ಅನ್ನು ನವೀಕರಣ ಮಾಡಿಕೊಳ್ಳುವುದು ಅಷ್ಟೇ ಮುಖ್ಯವಾಗಿದೆ. ಹಾಗೆಯೇ ಹೊಸದಾಗಿ ಕಾರ್ಮಿಕರಾಗಲು ಕೂಡ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಹತೆಗಳನ್ನು ಹೊಂದಿರುವ ಕಾರ್ಮಿಕರು ಸೂಕ್ತ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಿ ನೋಂದಾಯಿತ ಕಾರ್ಮಿಕರಾಗಿ ಮಂಡಳಿಯು ನೀಡುವ ಸೌಲಭ್ಯಗಳ ಲಾಭವನ್ನು ಪಡೆದುಕೊಳ್ಳಬಹುದು.

Labour Board Application ನೋಂದಾಯಿತ ಕಾರ್ಮಿಕರಾಗಲು ಅರ್ಹತೆಗಳು?

18 ರಿಂದ 60 ವರ್ಷದೊಳಗಿನ ಕಾರ್ಮಿಕರು ಅರ್ಜಿ ಸಲ್ಲಿಸಬಹುದು.
ನೋಂದಣಿ ಪೂರ್ವದ ಒಂದು ವರ್ಷದಲ್ಲಿ ಕಟ್ಟಡ ಮತ್ತು ಇತರೆ ನಿರ್ಮಾಣ ಕಾಮಗಾರಿಗಳಲ್ಲಿ ಕನಿಷ್ಠ 90 ದಿನಗಳು ಕೆಲಸ ನಿರ್ವಹಿಸಿರಬೇಕು.

ಕಾರ್ಮಿಕ ಮಂಡಳಿ ಪ್ರಯೋಜನಗಳು:

  • ಮದುವೆ ಸಹಾಯಧನ ಪಡೆಯಬಹುದು
  • ವೈದ್ಯಕೀಯ ವೆಚ್ಚಕ್ಕೆ ನೆರವು
  • ಮಾಸಿಕ ಪಿಂಚಣಿ ಸೌಲಭ್ಯ
  • ಶ್ರಮಸಾಮರ್ಥ್ಯ ಟೂಲ್ ಕಿಟ್
  • ಉಚಿತ ಸಾರಿಗೆ ಬಸ್ ಪಾಸ್ ವಿತರಣೆ
  • ಅಂತ್ಯಕ್ರಿಯೆ ವೆಚ್ಚ ನೆರವು
  • ಶೈಕ್ಷಣಿಕ ಸಹಾಯಧನ ಯೋಜನೆ
  • ಹೆರಿಗೆ ವೆಚ್ಚಕ್ಕೆ ಸಹಾಯಧನ ಸೌಲಭ್ಯ
  • ತಾಯಿ ಮಗು ಸಹಾಯಹಸ್ತಾ ಯೋಜನೆ
  • ಅಪಘಾತ ಪರಿಹಾರ ಸೌಲಭ್ಯ
  • ದುರ್ಬಲತೆ ಪಿಂಚಣಿ ನೆರವು
    ಇತ್ಯಾದಿ ಪ್ರಯೋಜನಗಳನ್ನು ಪಡೆಯಬಹುದು.

ಅರ್ಜಿ ಸಲ್ಲಿಸಬೇಕಾದ ದಾಖಲೆಗಳು:

  • ಉದ್ಯೋಗ ದೃಢೀಕರಣ ಪತ್ರ
  • ಅರ್ಜಿದಾರ ಹಾಗೂ ಅವಲಂಬಿತರ ಆಧಾರ್ ಕಾರ್ಡ್
  • ಬ್ಯಾಂಕ್ ಪಾಸ್ ಬುಕ್ ಪ್ರತಿ
  • ಅರ್ಜಿದಾರರ ಆಧಾರ್ ಕಾರ್ಡ್ ಗೆ ಲಿಂಕ್ ಆಗಿರುವ ದೂರವಾಣಿ ಸಂಖ್ಯೆ.
  • ರೇಷನ ಕಾರ್ಡ್‌ (non Mandatory)
  • ವಯಸ್ಸಿನ ದೃಢೀಕರಣ ಪತ್ರ (ಯಾವುದಾದರೊಂದು ಆಧಾರ್ ಕಾರ್ಡ್ ,ಗುರುತಿನಚೀಟಿ)

ಅರ್ಜಿಯನ್ನು ಎಲ್ಲಿ ಸಲ್ಲಿಸಬೇಕು?:
ಅರ್ಹ ಕಾರ್ಮಿಕರು ಮೇಲೆ ತಿಳಿಸಿರುವ ಎಲ್ಲಾ ಅಗತ್ಯ ದಾಖಲೆಗಳನ್ನು ಸಿದ್ದಪಡಿಸಿಕೊಂಡು ನಿಮ್ಮ ಹತ್ತಿರದ ಗ್ರಾಮ ಒನ್/ಕರ್ನಾಟಕ ಒನ್/ಬೆಂಗಳೂರು ಒನ್/ ಸೈಬರ್ ಸೆಂಟರ್ ಅನ್ನು ಭೇಟಿ ಮಾಡಿ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

ಹೆಚ್ಚಿನ ಮಾಹಿತಿಗಾಗಿ:
ಕಾರ್ಮಿಕ ಸಹಾಯವಾಣಿ 155214

SSLC ಮತ್ತು ದ್ವೀತಿಯ ಪಿಯುಸಿ ಪರೀಕ್ಷೆ ತಾತ್ಕಾಲಿಕ ವೇಳಾಪಟ್ಟಿ ಪ್ರಕಟ ಯಾವಾಗ ಯಾವ ಪರೀಕ್ಷೆ!

Leave a Comment

WhatsApp

Join Now Latest UpDates

Join Now Latest Job And Scheme UpDates News Belagavi

Powered by Webpresshub.net