ವಿವಾಹವಾದ ದಂಪತಿಗಳಿಗೆ ಗುಡ್ ನ್ಯೂಸ್ ಮೊದಲ ವಿವಾಹ ಪ್ರಮಾಣಪತ್ರವನ್ನು ಪಡೆಯಲು, ವಧು-ವರರು ಉಪ ನೋಂದಣಾಧಿಕಾರಿಗಳ (registration office) ಕಚೇರಿಯಲ್ಲಿ ಮಾತ್ರ ವಿವಾಹ ನೋಂದಣಿಯನ್ನು ಕೈಗೊಳ್ಳಲಾಗುತ್ತಿತ್ತು. ಆದರೆ, ರಾಜ್ಯ ಸರ್ಕಾರ ಈ ಪ್ರಕ್ರಿಯೆಯನ್ನು ಇನ್ನಷ್ಟು ಸುಗಮಗೊಳಿಸಿದೆ. ಉಪ ನೋಂದಣಾಧಿಕಾರಿಗಳ ಕಚೇರಿಗೆ ಅಲೆದಾಟ ತಪ್ಪಿಸಲು ಈ ಕ್ರಮ ಕೈಗೊಂಡಿದೆ.
ವಿವಾಹ ಪ್ರಮಾಣಪತ್ರ (marriage certificate) ಅರ್ಜಿ ಸಲ್ಲಿಸುವುದು ಹೇಗೆ:
ವಿವಾಹ ನೋಂದಣಿಯನ್ನು ಜನಸ್ನೇಹಿಯಾಗಿಸಲು ಕಾವೇರಿ 2.0 ತಂತ್ರಾಂಶದಲ್ಲಿ ಆನ್ಲೈನ್ ಮೂಲಕ ನೋಂದಣಿ ಮಾಡಲು ಮತ್ತು ಗ್ರಾಮ ಪಂಚಾಯಿತಿಗಳಲ್ಲಿನ ಬಾಪೂಜಿ ಸೇವಾ ಕೇಂದ್ರ ಹಾಗೂ ಗ್ರಾಮ-1 ಕೇಂದ್ರಗಳಲ್ಲಿಯೂ ಸಹ ಅರ್ಜಿ ಸಲ್ಲಿಸಲು ಸರ್ಕಾರ ಅವಕಾಶ ಕಲ್ಪಿಸಿದೆ.
ರಾಜ್ಯ ಸರ್ಕಾರವು ವಿವಾಹ ನೋಂದಣಿ ಪ್ರಮಾಣ ಪತ್ರ (Marriage registration certificate) ಪಡೆಯಲು “ಕಾವೇರಿ 2.0 ಆನ್‌ಲೈನ್ ಸೇವೆಗಳು” ಎಂಬ ಆನ್‌ಲೈನ್ kaveri.karnataka.gov.in ಅನ್ನು ಪ್ರಾರಂಭಿಸಿದೆ. ಪೋರ್ಟಲ್ ಗೆ ಭೇಟಿ ನೀಡಿ ಮತ್ತು ಅರ್ಜಿದಾರರ ಖಾತೆ ಸೃಜಿಸಿ ಕಾವೇರಿ ಪೋರ್ಟಲ್ಗೆ ಲಾಗಿನ್ ಮಾಡಿ, ವಿವಾಹ ನೋಂದಣಿ ಸೇವೆ ಆಯ್ಕೆಮಾಡಿ ಮತ್ತು ವಿವರ ನಮೂದಿಸಿ ಅರ್ಜಿ ಸಲ್ಲಿಸಬಹುದು.
ಅರ್ಜಿ ಸಲ್ಲಿಸಲು ಅರ್ಹತಾ ಮಾನದಂಡಗಳು:
ಮದುವೆಗೆ ನೋಂದಾಯಿಸಲು ಬಯಸುವ ವರನ ವಯಸ್ಸು 21 ವರ್ಷ ಪೂರೈಸಿರಬೇಕು.
ವಧುವಿನ ವಯಸ್ಸು 18 ವರ್ಷ ಪೂರ್ಣಗೊಂಡಿರಬೇಕು.
ದಂಪತಿಗಳು ಕರ್ನಾಟಕದ ಪ್ರಜೆಗಳಾಗಿರಬೇಕು.
ನೋಂದಣಿಗೆ ಬೇಕಾದ ದಾಖಲೆಗಳು:
- ವಧು-ವರರಿಂದ ಸಹಿ ಮಾಡಲಾದ ಅರ್ಜಿ ನಮೂನೆ
- ಮದುವೆಯ ಕಾರ್ಡ್ (ಮೂಲ ಕಾರ್ಡ್) ವೋಟರ್ ಐಡಿ
- ವಧು ಮತ್ತು ವರನ ವಿಳಾಸ ಪುರಾವೆಗಳು.
- ವರ ಮತ್ತು ವಧು ವಯಸ್ಸಿನ ಪುರಾವೆ (10 ನೇ ತರಗತಿಯ ಅಂಕಪಟ್ಟಿ)
- ವಧು ಮತ್ತು ವರನ ಎರಡು ಪಾಸ್‌ಪೋರ್ಟ್ ಅಳತೆಯ ಫೋಟೋ.
- ಜೋಡಿ ID ಪುರಾವೆ
- ವಧು ಮತ್ತು ವರನ ಆಧಾರ್ ಕಾರ್ಡ್

ಅರ್ಜಿ ಸಲ್ಲಿಸುವ ವಿಧಾನ:
1) ಮೊದಲುkaveri.karnataka.gov.in ಭೇಟಿ ನೀಡಿ ಮತ್ತು ಬಳಕೆದಾರರ ಖಾತೆ ಸೃಜಿಸಿ
2) ಕಾವೇರಿ ಪೋರ್ಟಲ್ಗೆ ಲಾಗಿನ್ ಆಗಿ, ವಿವಾಹ ನೋಂದಣಿ ಸೇವೆ ಆಯ್ಕೆಮಾಡಿ ಮತ್ತು ನಿಮ್ಮ ವಿವರ ನಮೂದಿಸಿ ಅರ್ಜಿ ಸಲ್ಲಿಸಿ.
3) ಗಂಡ, ಹೆಂಡತಿ ಮತ್ತು ಮೂರು ಸಾಕ್ಷಿದಾರರ ಆಧಾರ್ ದೃಢೀಕರಣ ಪ್ರಕ್ರಿಯೆ ಪೂರ್ಣಗೊಳಿಸಿ.
4) ನೋಂದಣಾಧಿಕಾರಿಯಿಂದ ಅರ್ಜಿ ಪರಿಶೀಲನೆ, ಆನ್ಲೈನ್ ಮೂಲಕ ಶುಲ್ಕ ಸಂದಾಯಕ್ಕೆ ಅವಕಾಶ.
5) ಕಾವೇರಿ ಪೋರ್ಟಲ್ನಲ್ಲಿ ಪ್ರಮಾಣಪತ್ರವನ್ನು ಡೌನ್ಲೋಡ್ ಮಾಡಿಕೊಳ್ಳಬಹುದು.
ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 080 68265316 ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.
ಸರ್ಕಾರದಿಂದ ವಿವಿಧ ಯೋಜನೆಯಡಿ ಸಾಲ ಸೌಲಭ್ಯ ಅರ್ಜಿ ಆಹ್ವಾನ