ಏಸಿ ಇಂಡಿಯಾ ಮಾಸ್ಟರ್ಸ್ ಸಂಸ್ಥೆಯಿಂದ 1,00,000 ರೂ. ವಿದ್ಯಾರ್ಥಿ ವೇತನ | Masters Scholarships

WhatsApp Group Join Now
Telegram Group Join Now

Masters Scholarships: ಭಾರತದಾದ್ಯಂತ ಯಾವುದೇ ಕಾಲೇಜುಗಳಲ್ಲಿ ವೃತ್ತಿಪರ ಕೋರ್ಸ್ ಹಾಗೂ ಸ್ನಾತಕೋತ್ತರ ಪದವಿ ಶಿಕ್ಷಣವನ್ನು ಪಡೆಯುತ್ತಿರುವ ವಿದ್ಯಾರ್ಥಿಗಳ ಶಿಕ್ಷಣಕ್ಕಾಗಿ ಕಲಿಕಾ ಸಂಪನ್ಮೂಲಗಳನ್ನು ಒದಗಿಸಲು ಏ್ರಸಿ ಇಂಡಿಯಾ ಸಂಸ್ಥೆಯಿಂದ ವಾರ್ಷಿಕ ವಿದ್ಯಾರ್ಥಿ ವೇತನ ನೀಡುತ್ತಿದೆ. ಅರ್ಜಿ ಸಲ್ಲಿಸುವುದು ಹೇಗೆ?, ಅರ್ಹತೆಗಳು ಏನು, ಅರ್ಜಿ ಸಲ್ಲಿಸುವ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ.

ಭಾರತದ ಮಾನ್ಯತೆ ಪಡೆದ ಸಂಸ್ಥೆ ಅಥವಾ ವಿಶ್ವವಿದ್ಯಾಲಯಗಳಲ್ಲಿ ಜಿಯೋಇನ್ ಫಮ್ರ್ಯಾಟಿಕ್ಸ್ ಅಥವಾ ಸಂಬಂಧಿಸಿದ ಕ್ಷೇತ್ರದಲ್ಲಿ ಎರಡನೇ ವರ್ಷದ ಸ್ನಾತಕೋತ್ತರ ಅಧ್ಯಯನದಲ್ಲಿ (M.Tech/MSc) ಓದುತ್ತಿರುವ ವಿದ್ಯಾರ್ಥಿಗಳು ಏಸಿ ಇಂಡಿಯಾ ಮಾಸ್ಟರ್ಸ್ ಸ್ಕಾಲರ್ ಶಿಪ್
ಗೆ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳಿಗೆ ವಾರ್ಷಿಕವಾಗಿ 1,00,000 ರೂ. ಸ್ಕಾಲರ್ಶಿಪ್ ಪಡೆಯಬಹುದು.

Masters Scholarships

ವಿದ್ಯಾರ್ಥಿ ವೇತನದ ಮೊತ್ತ: 1,00,000 ರೂ. ವಾರ್ಷಿಕ.

ಏ್ರಸಿ ಇಂಡಿಯಾ ಮಾಸ್ಟರ್ಸ್ ಸ್ಕಾಲರ್ ಶಿಪ್, ಡಿಜಿಟಲ್ ಇಮೇಜ್ ಪ್ರೊಸೆಸಿಂಗ್ ಮತ್ತು ಸಮಾನ ವಿಷಯಗಳಲ್ಲಿ ಅಧ್ಯಯನವನ್ನು ಒಳಗೊಂಡಿರುವ ಸಂಬಂಧಿತ ಕ್ಷೇತ್ರದಲ್ಲಿ ಸ್ನಾತಕೋತರ (ಎಂ.ಟೆಕ್./ ಎಂ.ಎಸ್‌ಸಿ.) ಎರಡನೇ ವರ್ಷವನ್ನು ಪ್ರಾರಂಭಿಸುವ ವಿದ್ಯಾರ್ಥಿಗಳಿಗೆ ಏಸಿ ಇಂಡಿಯಾ ನೀಡುವ ಅವಕಾಶ ನೀಡುತ್ತದೆ.

ಅರ್ಜಿ ಸಲ್ಲಿಸಲು ಅರ್ಹತೆ?
ಈ ಸ್ಕಾಲರ್ ಶಿಪ್ ಗೆ ಅರ್ಜಿ ಸಲ್ಲಿಸಲು ಕನಿಷ್ಠ 18 ವರ್ಷ ಪೂರೈಸಿರಬೇಕು.
ಅರ್ಜಿದಾರರು ಭಾರತೀಯ ನಾಗರಿಕರು ಆಗಿರಬೇಕು.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 12-07-2024

ಅರ್ಜಿ ಸಲ್ಲಿಕೆ ವಿಳಾಸ:
ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ಇ-ಮೇಲ್ ಮೂಲಕ education@esri.in ಅಗತ್ಯ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬಹುದು.

ಅರ್ಜಿ ಸಲ್ಲಿಸುವುದು ಹೇಗೆ?
ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ಅರ್ಜಿ ಡೌನ್‌ ಲೋಡ್ ಮಾಡಿಕೊಂಡು.
ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳ ಪ್ರತ್ಯೇಕ ಫಾರ್ಮ್ ಅನ್ನು ಭರ್ತಿ ಮಾಡಿ.
ವಿದ್ಯಾರ್ಥಿಗಳು ಸಂಸ್ಥೆ/ವಿಶ್ವವಿದ್ಯಾಲಯದ ಮುಖ್ಯಸ್ಥ/ನಿರ್ದೇಶಕರಿಂದ ಸಹಿ ಮಾಡಿದ ಫಾರ್ಮ್(ಗಳನ್ನು) ಪಡೆದು ಅದರ ಮೇಲೆ ಮುದ್ರೆ ಹಾಕಿಸಿ.
ಸ್ಕ್ಯಾನ್‌ ಮಾಡಿದ ಅರ್ಜಿ ಫಾರ್ಮ್ ಗಳನ್ನು education@esri.in ಮೂಲಕ ಸಲ್ಲಿಸಿ.

Masters Scholarships ಅಗತ್ಯ ದಾಖಲೆಗಳು:
ವಿದ್ಯಾರ್ಥಿಗಳ ವಿಳಾಸ ಪುರಾವೆ (ಆಧಾರ್ ಕಾರ್ಡ್)
ಕಾಲೇಜು ಗುರುತಿನ ಚೀಟಿ ಸ್ಕ್ಯಾನ್ ಮಾಡಿದ ಪ್ರತಿ.
ಮೊದಲ ವರ್ಷದ ಅಂಕ ಪಟ್ಟಿ.
ಹೆಚ್ಚಿನ ಮಾಹಿತಿಗಾಗಿ b4s.in ವೆಬ್ ಸೈಟ್ ಗೆ ಭೇಟಿ ನೀಡಬಹುದು.

Leave a Comment

WhatsApp

Join Now Latest UpDates

Join Now Latest Job And Scheme UpDates News Belagavi

Powered by Webpresshub.net