ಜನಪ್ರಿಯ ದ್ವಿಚಕ್ರ ಹಾಗೂ ತ್ರಿಚಕ್ರ ವಾಹನ ತಯಾರಿಕಾ ಕಂಪನಿಯಾದ ಬಜಾಜ್ ಆಟೋ ಲಿಮಿಟೆಡ್ (Bajaj Auto Limited), ನಿಂದ ಹೊಸ ವೈಶಿಷ್ಟ್ಯಗಳೊಂದಿಗೆ ಪಲ್ಸರ್ (New Models Pulsar NS160)ನ ಹೊಸ ಲುಕ್ ನಲ್ಲಿ ಮಾರುಕಟ್ಟೆಗೆ ಪರಿಚಯಿಸುತ್ತದೆ. ಯುವಕರ ನೆಚ್ಚಿನ ದ್ವಿಚಕ್ರ ವಾಹನ ಕಂಪನಿಯು ಇದೀಗ NsS 160 ಹೊಸ ಬೈಕ್ ಜೊತೆಗೆ ಪಲ್ಸರ್ 125, 150 ಮತ್ತು 220F ಮಾಡಲ್‌ಗಳನ್ನು ಹೊಸ ಮತ್ತು ಪ್ರೀಮಿಯಂ ಬೈಕ್ ಗಳು ಮಾರುಕಟ್ಟೆಗೆ ಪಾದಾರ್ಪಣೆ ಮಾಡಲಿವೆ.
New Models Pulsar NS160 ವೈಶಿಷ್ಟ್ಯಗಳ (New Features):
NS ಮಾದರಿಗಳು ಹೊಸ ವೇರಿಯೆಂಟ್ ಈಗ ವರ್ಧಿತ ಬ್ಲೂಟೂತ್-ಸಕ್ರಿಯ ಸಂಪರ್ಕವನ್ನು ಹೊಂದಿವೆ. ಪಲ್ಸರ್ N160 Bs7 ಬ್ಲೂಟೂತ್-ಸಕ್ರಿಯಗೊಳಿಸಿದ ಇನ್‌ಸ್ಟ್ರೂಮೆಂಟ್ ಕನ್ಸೋಲ್‌ಗೆ ಸಂಯೋಜಿತವಾಗಿ ಟರ್ನ್ ಟು ಟರ್ನ್ ನ್ಯಾವಿಗೇಷನ್ ಜೊತೆಗೆ ಬರಲಿದ್ದು, ಈ ಬೈಕ್ ಸಂಪೂರ್ಣ ಕನೆಕ್ಟಿವಿಟಿ ಹೊಂದಿದೆ.
Pulsar NS160 ಹೊಸ ಲುಕ್ (new look):
ಹೊಸ ಪಲ್ಸರ್ NS160 ನೋಡಲು ಸ್ಟೈಲಿಶ್, ಸ್ಪೋರ್ಟಿ ಬೈಕ್ ಹೊಸ ಡಿಸೈನ್‌ನೊಂದಿಗೆ ಎಲ್ಲರನ್ನು ತನ್ನತ್ತ ಸೆಳೆಯುತ್ತದೆ. ಹೊಸ ಲುಕ್ ನಲ್ಲಿ ಪಲ್ಸರ್ N160 ಶಾಂಪೇನ್ ಗೋಲ್ಡ್ 33mm USD ಫೋರ್ಕ್‌ಗಳನ್ನು ಹೊಂದಿದ್ದು.
NS160 ಮೋಡ್‌ಗಳು (Rain Road/Off-Road ride mode):
ಈ ವಾಹನದಲ್ಲಿ ಸವಾರರಿಗೆ ನಿಖರ ಮತ್ತು ನಿಯಂತ್ರಣಕ್ಕಾಗಿ ರೈನ್, ರೋಡ್ ಮತ್ತು ಆಫ್ – ರೋಡ್ ರೈಡ್ ಮೋಡ್‌ಗಳನ್ನು ಅಳವಡಿಸಲಾಗಿದೆ. ವಿವಿಧ ರೀತಿಯ ರಸ್ತೆ ಪರಿಸ್ಥಿತಿಗೆ ತಕ್ಕಂತೆ ಸವಾರನ ಗರಿಷ್ಠ ನಿಯಂತ್ರಣವನ್ನು ನೀಡಲು ಪ್ರತಿ ರೈಡ್ ಮೋಡ್‌ನಲ್ಲಿ ಎಬಿಎಸ್ (ABS) ಮಟ್ಟವನ್ನು ಅಳವಡಿಸಿದೆ.
ಈ ಬೈಕ್ ನಲ್ಲಿ ಮೂರು ರೀತಿಯ ವಿವಿಧ ರೋಡ್ ಮೋಡ್ ಗಳನ್ನು ಪ್ರಮಾಣಿತವಾಗಿ ಹೊಂದಿಸಲಾಗಿದ್ದು, ಇದರಲ್ಲಿ ನಗರ ಮತ್ತು ಹೆದ್ದಾರಿಯಲ್ಲಿ ನಿಯಮಿತ ಸವಾರಿ ಮಾಡಲು ರೋಡ್ ಮೋಡ್ ಸೂಕ್ತವಾಗಿರುತ್ತದೆ. ಮಳೆ ಅಥವಾ ನೀರಿರುವ ರಸ್ತೆಗಳಿಗೆ ರೈನ್ ಮೋಡ್ ಸೂಕ್ತವಾಗಿದ್ದು, ಜಾರು ಗುಡ್ಡಗಾಡು ಪ್ರದೇಶಗಳಲ್ಲಿ ಹೆಚ್ಚು ಆತ್ಮವಿಶ್ವಾಸ ಮತ್ತು ಸ್ಥಿರವಾದ ಬ್ರೇಕಿಂಗ್ ಗಳಿಂದ ನಿಯಂತ್ರಿಸುತ್ತದೆ. ಆಫ್ ರೋಡ್ ಮೋಡ್ ಭೂಪ್ರದೇಶ ಮತ್ತು ರಸ್ತೆ ಪರಿಸ್ಥಿತಿಗಳಿಗೆ ಸೂಕ್ತವಾಗಿದ್ದು, ಒಟ್ಟಾರೆ ನಿರ್ವಹಣೆ ಅನುಭವಕ್ಕೆ ಉತ್ತಮ ಬೈಕ್ ಆಗಿದೆ.
ಪಲ್ಸರ್ NS160 ಬೆಲೆ:
ಬಜಾಜ್ ಕಂಪನಿಯ ಹೊಸ ಪಲ್ಸರ್ (New Models Pulsar NS160) ವೇರಿಯಂಟ್ 1,39,693 ರೂ. ಎಕ್ಸ್ ಶೋರೂಂ ಬೆಲೆಗೆ ಖರೀದಿಸಬಹುದು.
NS160 ಎಂಜಿನ್ ಕ್ಷಮತೆ:
ಇದು 164.82cc ಆಯಿಲ್ ಕೂಲ್ಡ್ ಎಂಜಿನ್‌ನಿಂದ ಚಾಲಿತವಾಗಿದ್ದು, 11.7 kW(16PS, 8750rpm ವರೆಗೆ ಪವರ್ ನೀಡಲು ಟ್ಯೂನ್ ಮಾಡಲಾಗಿದೆ. ಬೈಕ್ ನ ಬ್ರೇಕಿಂಗ್ ವಿಷಯಕ್ಕೆ ಬಂದರೆ ಎರಡೂ ಚಕ್ರಗಳಿಗೆ ಡಿಸ್ಕ್ ಬ್ರೇಕ್ ಜೊತೆಗೆ ಡ್ಯುಯಲ್-ಚಾನೆಲ್ ಎಬಿಎಸ್ (ABS) ಅಳವಡಿಸಲಾಗಿದೆ.
ಬಜಾಜ್ ಪಲ್ಸರ್ ನ ವಿವಿಧ 125, 150 ಮತ್ತು 220F ಮಾಡಲ್‌ಗಳ ಅಪ್‌ಡೇಟ್:
ಇದೇ ರೀತಿ ಪಲ್ಸರ್ NS125ರ ಕಾರ್ಬನ್ ಫೈಬರ್ ಸಿಂಗಲ್ ಮತ್ತು ಸ್ಪ್ಲಿಟ್ ಸೀಟ್ ರೂಪಾಂತರವು ಸಂಪೂರ್ಣ ಡಿಜಿಟಲ್ ಬ್ಲೂಟೂತ್ ಕನ್ಸೋಲ್, ಯುಎಸ್‌ಬಿ ಚಾರ್ಜರ್ ಮತ್ತು ಹೊಸ ಗ್ರಾಫಿಕ್ಸ್ ಗಳನ್ನು ಹೊಂದಿದೆ. NS ನ ಇನ್ನೊಂದು ರೂಪಾಂತರ ಪಲ್ಸರ್ NS150 ಯು ಲಭ್ಯವಿದ್ದು. ಹೊಸ ವೈಶಿಷ್ಟ್ಯತೆಗಳನ್ನು ಮತ್ತು ರಿಫ್ರೆಶ್ ಮಾಡಿದ ಸ್ಟೈಲಿಂಗ್ 220F ಗೆ ಸಮನಾಗಿದೆ.
ಪಲ್ಸರ್ ನ ಮೂರು ಬೈಕ್ ಗಳು ಬೆಲೆಗಳು (Pulsar NS Bike Price)
ಪಲ್ಸರ್ 125 ಕಾರ್ಬನ್ ಫೈಬರ್ ಸಿಂಗಲ್ ಸೀಟ್ ಎಕ್ಸ್ ಶೂರೂಂ ಬೆಲೆ 92,883 ರೂ.
ಪಲ್ಸರ್ 150 ಸಿಂಗಲ್ ಡಿಸ್ಕ್ ಎಕ್ಸ್ ಶೂರೂಂ ಬೆಲೆ 1,13,696 ರೂ.,
ಹೊಸ ಪಲ್ಸರ್ 220 ಎಕ್ಸ್ ಶೂರೂಂ ಬೆಲೆ 1,41,024 ರೂ.
ಇತರೆ ಹೊಸ ಬೈಕ್ ಗಳ ಅಪ್‌ಡೇಟ್