ನಮಸ್ಕಾರ ಸ್ನೇಹಿತರೇ ನಿವೇನಾದರು ಹೊಸ ರೇಷನ್ ಕಾರ್ಡ್(New Ration Card) ಪಡೆಯುವ ನಿರೀಕ್ಷೆಯಲ್ಲಿ ಇದರೆ ರಾಜ್ಯ ಸರ್ಕಾರವು ಗುಡ್ ನ್ಯೂಸ್ ನೀಡಿದ್ದು, ಹೊಸ ಪಡಿತರ ಚೀಟಿಗೆ ಅರ್ಜಿ ಸಲ್ಲಿಸಲು ಈಗ ಮತ್ತೆ ಅವಕಾಶ ನೀಡಲಾಗಿದೆ. ಯಾರೇಲ ಅರ್ಜಿ ಸಲ್ಲಿಸಬಹುದು, ಅರ್ಜಿ ಸಲ್ಲಿಸುವ ವಿಧಾನ ಹೇಗೆ, ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳೇನ್ನು, ಅರ್ಜಿ ಸಲ್ಲಿಸುವುದು ಹೇಗೆ ಸಂಪೂರ್ಣ ಮಾಹಿತಿ ಈ ಕೆಳಗಿನಂತಿದೆ.
ಯಾರಿಗೆಲ್ಲಾ ಅರ್ಜಿ ಸಲ್ಲಿಸಲು ಅವಕಾಶ:
ಹೊಸ ಪಡಿತರ ಚೀಟಿಗೆ ಅರ್ಜಿ ಸಲ್ಲಿಸಲು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಅರ್ಹ ಇ – ಶ್ರಮ್ (E- Shram Card) ನೋಂದಾಯಿತ ಕಾರ್ಮಿಕರಿಗೆ ಆದ್ಯತಾ ಪಡಿತರ ಚೀಟಿ ವಿತರಣೆ ಕಾರ್ಯ ಆರಂಭಗೊಂಡಿದೆ. ಅರ್ಹ ನೋಂದಾಯಿತ ಕಾರ್ಮಿಕರು ಆದ್ಯತಾ ಪಡಿತರ ಚೀಟಿ ಪಡೆಯಲು ಅರ್ಹರಾಗಿರುತ್ತಾರೆ. ರೇಷನ ಕಾರ್ಡ್ ಪಡೆಯಲು ನಿಮ್ಮ ಹತ್ತಿರದ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯನ್ನು ಸಂಪರ್ಕಿಸಬಹುದು.
New Ration Card ಅರ್ಜಿ ಸಲ್ಲಿಸಲು ಅರ್ಹತೆ?
ಕರ್ನಾಟಕದ ಖಾಯಂ ನಿವಾಸಿಯಾಗಿರಬೇಕು.
ಹೊಸದಾಗಿ ಮದುವೆಯಾದ ದಂಪತಿಗಳು, ಹೊಸ ರೇಷನ ಕಾರ್ಡ್ ಗಾಗಿ ಅರ್ಜಿ ಹಾಕಬಹುದು.
ಕುಟುಂಬದ ಆದಾಯದ ಮಿತಿ ಮೇಲೆ ಪಡಿತರ ಚೀಟಿ ಬಿಪಿಎಲ್, ಎಪಿಎಲ್ ಎಂಬುದು ನಿರ್ಧಾರವಾಗಿರಲಿದೆ.
ಪಡಿತರ ಚೀಟಿ ಅರ್ಜಿ ಸಲ್ಲಿಸಲು ಬೇಕಿರುವ ಅಗತ್ಯ ದಾಖಲೆಗಳು:
- ಎಲ್ಲಾ ಸದಸ್ಯರ ಆಧಾರ್ ಕಾರ್ಡ್
- ಆದಾಯ ಪ್ರಮಾಣ ಪತ್ರ
- ವೋಟರ್ ಐಡಿ
- ವಿಳಾಸದ ಪುರಾವೆ
- ಜನ್ಮ ದಿನಾಂಕ ( ಆರು ವರ್ಷದ ಒಳಗಿನ ಮಕ್ಕಳಿಗೆ ಮಾತ್ರ)
- ಚಾಲ್ತಿಯಲ್ಲಿರುವ ಮೊಬೈಲ್ ಸಂಖ್ಯೆ.
- ಇತ್ತೀಚಿನ ಪಾರ್ಸ್ ಪೋರ್ಟ್ ಅಳತೆಯ ಭಾವಚಿತ್ರ
New Ration Card ಅರ್ಜಿ ಸಲ್ಲಿಸಿದ 15 ದಿನಗಳ ನಂತರ ನಿಮ್ಮ ಪಡಿತರ ಚೀಟಿಯನ್ನು ನೀಡಲಾಗುತ್ತದೆ. ಇದಕ್ಕೆ 100 ರೂ. ಶುಲ್ಕ ಪಾವತಿಸಬೇಕಾಗುತ್ತದೆ.
ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ : 1800 425 9339 ಅಥವಾ ಸಹಾಯವಾಣಿ 1967 ಗೆ ಸಂಪರ್ಕಿಸಬಹುದು.
ಅರ್ಜಿ ಸಲ್ಲಿಸುವ ಎಲ್ಲಿ?
ಅರ್ಹರು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ವೆಬ್ಸೈಟ್ ahara.kar.nic.in ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು, ಅಥವಾ ನಿಮ್ಮ ಮೊಬೈಲ್, ಕಂಪ್ಯೂಟರ್, ಸೇವಾಸಿಂಧು ಪೋರ್ಟಲ್ಗಳಲ್ಲಿ ಹೊಸ ಪಡಿತರ ಚೀಟಿಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ.
ಅರ್ಜಿ ಸಲ್ಲಿಸಲು ಆಹಾರ ಸರಬರಾಜು ಇಲಾಖೆ ವೆಬ್ಸೈಟ್ ವಿಳಾಸ: ahara.kar.nic.in
ಮಹಿಳೆಯರಿಗೆ 3 ಲಕ್ಷ ರೂ. ಬಡ್ಡಿ ರಹಿತ ಸಾಲ ಯೋಜನೆಗೆ ಅರ್ಜಿ ಆಹ್ವಾನ
ಕರ್ನಾಟಕ ಸರ್ಕಾರದಿಂದ ಕಾರು, ಗುಡ್ಸ್ ವಾಹನ ಖರೀದಿಸಲು 3 ಲಕ್ಷ ರೂ. ಆರ್ಥಿಕ ನೇರವು