Next Gen Scholarship: ನಮಸ್ಕಾರ ಸ್ನೇಹಿತರೇ ಇವತ್ತಿನ ಈ ಲೇಖನದಲ್ಲಿ 2024-25 ನೇ ಸಾಲಿನಲ್ಲಿ ಭಾರತದಾದ್ಯಂತ ಸರ್ಕಾರಿ ಹಾಗೂ ಖಾಸಗಿ ಪ್ರಥಮ ಪಿಯುಸಿ ಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳನ್ನು ಬೆಂಬಲಿಸಲು ಇವೈ ಗ್ಲೋಬಲ್ ಡೆಲಿವರಿ ಸರ್ವಿಸಸ್ ವತಿಯಿಂದ ವಿದ್ಯಾರ್ಥಿಗಳಿಗೆ ಮುಂದಿನ ಶಿಕ್ಷಣ ಸುಗಮ ಗೊಳಿಸಲು ನೆಕ್ಸ್ಟ್ ಜೆನ್ ಎಜು ಸ್ಕಾಲರ್ ಶಿಪ್ ಅನ್ನು ನೀಡಲಾಗುತ್ತಿದೆ. ಈ ವಿದ್ಯಾರ್ಥಿವೇತನ ಕುರಿತು ಸಮಗ್ರ ವಿವರಗಳನ್ನು ಕೆಳಗೆ ನೀಡಲಾಗಿದೆ. ಅರ್ಜಿ ಸಲ್ಲಿಸಲು ಯಾರು ಅರ್ಹರು, ಅರ್ಹತಾ ಮಾನದಂಡಗಳು ಎನ್ನು ಅಗತ್ಯ ದಾಖಲೆಗಳು, ದಿನಾಂಕ ಸೇರಿದಂತೆ ಸಂಪೂರ್ಣ ಮಾಹಿತಿ ಇಲ್ಲಿದೆ.
ಇವೈ ಗ್ಲೋಬಲ್ ಡೆಲಿವರಿ ಸರ್ವೀಸಸ್ ಪ್ರಾಯೋಜಕತ್ವದಲ್ಲಿ ನೆಕ್ಸ್ಟ್ ಜೆನ್ ಎಜು ಸ್ಮಾಲರ್ ಶಿಪ್ 2024-25 ನೇ ಸಾಲಿನಲ್ಲಿ 11 ನೇ ತರಗತಿ ಓದುತ್ತಿರುವ ಬಡ ಹಾಗೂ ಮದ್ಯದ ವರ್ಗದ ವಿದ್ಯಾರ್ಥಿಗಳಿಗೆ ತಮ್ಮ ವಿದ್ಯಾಭ್ಯಾಸಕ್ಕಾಗಿ ಆರ್ಥಿಕ ನೆರವನ್ನು ಪಡೆಯಲು ಅರ್ಹರಾಗಿರುತ್ತಾರೆ. ಈ ವಿದ್ಯಾರ್ಥಿವೇತನವು ವಾರ್ಷಿಕ 15,000 ರೂ. ನೀಡಲಾಗುತ್ತದೆ. ಪಿಯುಸಿ ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬಹುದು.
Next Gen Scholarship ವಿದ್ಯಾರ್ಥಿ ವೇತನಕ್ಕೆ ಯಾರು ಅರ್ಹರು:
ವಿದ್ಯಾರ್ಥಿವೇತನ: 15,000 ರೂ. ವಾರ್ಷಿಕ
ವಿದ್ಯಾರ್ಥಿಗಳು 11 ನೇ ತರಗತಿಯಲ್ಲಿ ಓದುತ್ತಿರಬೇಕು.
ವಿದ್ಯಾರ್ಥಿಯು 10 ನೇ ತರಗತಿಯಲ್ಲಿ ಕನಿಷ್ಠ 60% ಅಂಕ ಪಡೆದಿರಬೇಕು.
ಕುಟುಂಬದ ವಾರ್ಷಿಕ ಆದಾಯ INR 3 ಲಕ್ಷದವರೆಗೆ ಹೊಂದಿರಬೇಕು.
Buddy4Study ಮತ್ತು EY ಗ್ಲೋಬಲ್ ಡೆಲಿವರಿ ಸಂಸ್ಥೆ ಉದ್ಯೋಗಿಗಳ ಮಕ್ಕಳು ವಿದ್ಯಾರ್ಥಿವೇತನಕ್ಕೆ ಅರ್ಹರಲ್ಲ.
ಪ್ರಮುಖ ದಾಖಲೆಗಳು:
10 ನೇ ತರಗತಿ ಅಂಕಪಟ್ಟಿ
ವಿದ್ಯಾರ್ಥಿ ಆಧಾರ್ ಕಾರ್ಡ್
ಇತ್ತೀಚಿನ ಭಾವಚಿತ್ರ
ಕುಟುಂಬದ ಆದಾಯ ಪ್ರಮಾಣಪತ್ರ
ವಿದ್ಯಾರ್ಥಿಗಳಿಗೆ ಶಾಲಾ, ಕಾಲೇಜುಗಳಲ್ಲಿ ನೀಡಲಾದ ಗುರುತಿನ ಚೀಟಿ, ಶೈಕ್ಷಣಿಕ ಶುಲ್ಕ ರಶೀದಿ.
ಅರ್ಜಿದಾರರ ಅಥವಾ ಸಂಸ್ಥೆಯ ಬ್ಯಾಂಕ್ ಖಾತೆ
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಜೂನ್ 26, 2024
Next Gen Scholarship ಆನ್‌ಲೈನ್ ಅರ್ಜಿ ಸಲ್ಲಿಸಲು : ಇಲ್ಲಿ ಕ್ಲಿಕ್ ಮಾಡಿ
ಇತರೆ ಸ್ಕಾಲರ್‌ಶಿಪ್ ಮಾಹಿತಿ:
- ಪ್ರೌಢಶಾಲಾ ವಿದ್ಯಾರ್ಥಿಗಳಿಗೆ 10,000 ರೂ. ವಿದ್ಯಾರ್ಥಿ ವೇತನ
- PUC ಯಿಂದ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗೆ ಪ್ರತಿ ತಿಂಗಳು 3200 ಸ್ಕಾಲರ್‌ಶಿಪ್
- SSLC ಪಾಸಾದ ವಿದ್ಯಾರ್ಥಿಗಳಿಗೆ 10,000 ವಿದ್ಯಾರ್ಥಿ ವೇತನ
- ವಿದ್ಯಾರ್ಥಿಗಳ ಖಾತೆಗೆ 50,000 ರೂ. ವಿದ್ಯಾರ್ಥಿ ವೇತನ
- ಆಧಾರ್ ಕೌಶಲ್ ಸಂಸ್ಥೆಯಿಂದ 50, 000 ವಿದ್ಯಾರ್ಥಿವೇತನ