ರಾಷ್ಟ್ರೀಯ ಮಾನಸಿಕ ಆರೋಗ್ಯ ಹಾಗೂ ನರ ವಿಜ್ಞಾನ ಸಂಸ್ಥೆ- ಬೆಂಗಳೂರು (National Institute of Mental Health and Neuro Sciences) ಖಾಲಿ ಇರುವ ಜೂನಿಯರ್ ಸೈಕಾಲಜಿಸ್ಟ್ ಹುದ್ದೆಗಳನ್ನು ಅರ್ಹ ಅಭ್ಯರ್ಥಿಗಳಿಂದ ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ.
NIMHANS Recruitment ನೇಮಕಾತಿ ಸಂಬಂಧಿಸಿದಂತೆ ಅಧಿಸೂಚನೆ ಪ್ರಮುಖ ವಿವರಗಳು, ವಿದ್ಯಾರ್ಹತೆ, ವಯೋಮಿತಿ, ವೇತನ ಶ್ರೇಣಿ, ಹುದ್ದೆಗಳು ಮಾಹಿತಿ, ಆಯ್ಕೆ ವಿಧಾನ, ಪಾವತಿ ಶುಲ್ಕ, ಹಾಗೂ ಅರ್ಜಿ ಸಲ್ಲಿಸುವ ವಿಧಾನ, ಪ್ರಮುಖ ದಿನಾಂಕ ಸೇರಿದಂತೆ ಪ್ರಮುಖ ಮಾಹಿತಿಯನ್ನು ಕೆಳಗಿನಂತೆ ನೀಡಲಾಗಿದೆ.
NIMHANS Recruitment Apply Details:
ಹುದ್ದೆ ಹೆಸರು: ಜೂನಿಯರ್ ಸೈಕಾಲಜಿಸ್ಟ್
ಉದ್ಯೋಗದ ಸ್ಥಳ: ಬೆಂಗಳೂರು ಕರ್ನಾಟಕ
ಶೈಕ್ಷಣಿಕ ಅರ್ಹತೆ:
ರಾಷ್ಟ್ರೀಯ ಮಾನಸಿಕ ಆರೋಗ್ಯ ಹಾಗೂ ನರ ವಿಜ್ಞಾನ ಸಂಸ್ಥೆ- ಬೆಂಗಳೂರು ನೇಮಕಾತಿ ಅಧಿಸೂಚನೆ ನಿಯಮಗಳ ಪ್ರಕಾರ, ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಮಂಡಳಿಯಲ್ಲಿ ಸೈಕಾಲಜಿಯಲ್ಲಿ ಎಂ.ಎಸ್ಸಿ ಪೂರ್ಣಗೊಳಿಸಿರಬೇಕು.
ಒಟ್ಟು ಹುದ್ದೆಗಳ ಸಂಖ್ಯೆ: 01
ವಯೋಮಿತಿ:
NIMHANS ಬೆಂಗಳೂರು ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳ ಗರಿಷ್ಠ ವಯೋಮಿತಿ 35 ವರ್ಷ ಮೀರಿರಬಾರದು.
ವೇತನ:
NIMHANS Notification ಅಧಿಸೂಚನೆ ಪ್ರಕಾರ, ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಮಾಸಿಕ 30,000 ರೂ. ವೇತನ ನೀಡಲಾಗುತ್ತದೆ.
ಅನುಭವ:
ಅರ್ಜಿ ಸಲ್ಲಿಸುವ ಹಾಗೂ ಸಂದರ್ಶನಕ್ಕೆ ಹಾಜರಾಗುವ ಅಭ್ಯರ್ಥಿಗಳು ಮಾನಸಿಕ ಆರೋಗ್ಯ ಸಮಸ್ಯೆ ರೋಗಿಗಳನ್ನು ನಿರ್ವಹಿಸುವಲ್ಲಿ 1 ವರ್ಷದ ಕ್ಲಿನಿಕಲ್ ಮತ್ತು ಸಂಶೋಧನಾ ಅನುಭವವನ್ನು ಹೊಂದಿರಬೇಕು.
ಸಂದರ್ಶನ ನಡೆಯುವ ವಿಳಾಸ:
ಉಪನ್ಯಾಸ ಸಭಾಂಗಣ-II
ಮೊದಲ ಮಹಡಿ
ಹಳೆಯ ಆಡಳಿತ ಕಟ್ಟಡ
ನಿಮ್ಹಾನ್ಸ್
ಬೆಂಗಳೂರು-560029 ಕರ್ನಾಟಕ
ಆಯ್ಕೆ ಪ್ರಕ್ರಿಯೆ: ರಾಷ್ಟ್ರೀಯ ಮಾನಸಿಕ ಆರೋಗ್ಯ ಹಾಗೂ ನರ ವಿಜ್ಞಾನ ಸಂಸ್ಥೆ- ಬೆಂಗಳೂರು ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳನ್ನು ಸಂದರ್ಶನದ ಮುಖಾಂತರ ಆಯ್ಕೆ ಮಾಡಲಾಗುತ್ತದೆ.
ಪ್ರಮುಖ ದಿನಾಂಕಗಳು:
ಅಧಿಸೂಚನೆ ಬಿಡುಗಡೆಯಾದ ದಿನಾಂಕ: 15-05-2024
ಸಂದರ್ಶನ ನಡೆಯುವ ದಿನಾಂಕ: ಜೂನ್ 5, 2024 (ಬೆಳಗ್ಗೆ 10 ಗಂಟೆಗೆ)
NIMHANS Recruitment Apply Important Links:
ಅಧಿಸೂಚನೆ ನೋಡಲು | ಇಲ್ಲಿ ಕ್ಲಿಕ್ ಮಾಡಿ |
ವೆಬ್ಸೈಟ್ ವಿಳಾಸ | nimhans.ac.in |