ಭಾರತ ಸರ್ಕಾರದ ನ್ಯಾಷನಲ್ ಸೀಡ್ಸ್ ಕಾರ್ಪೋರೇಷನ್ ಲಿಮಿಟೆಡ್ (National Seeds Corporation Limited)ನಲ್ಲಿ ಖಾಲಿ ಇರುವ ಡೆಪ್ಯುಟಿ ಜನರಲ್ ಮ್ಯಾನೇಜರ್, ಮ್ಯಾನೇಜ್‌ಮೆಂಟ್ ಟ್ರೈನಿ ಸೇರಿದಂತೆ ವಿವಿಧ ಹುದ್ದೆಗಳನ್ನು ಅರ್ಹ ಅಭ್ಯರ್ಥಿಗಳಿಂದ ಭರ್ತಿ ಮಾಡಲು ಆನ್‌ಲೈನ್ ಮೂಲಕ ಅರ್ಜಿ ಅಹ್ವಾನಿಸಲಾಗಿದೆ.
ರಾಷ್ಟ್ರೀಯ ಬೀಜ ನಿಗಮ ನಿಯಮಿತ (ನ್ಯಾಷನಲ್ ಸೀಡ್ಸ್ ಕಾರ್ಪೋರೇಷನ್ ಲಿಮಿಟೆಡ್ NSCL) ಈ ಹುದ್ದೆಗೆ ಅರ್ಜಿ ಸಲ್ಲಿಸಲು ಅರ್ಹ ಮತ್ತು ಆಸಕ್ತಿ ಇರುವ ಅಭ್ಯರ್ಥಿಗಳು ನೇಮಕಾತಿಗೆ ಸಂಬಂಧಿಸಿದಂತೆ ಅರ್ಹತೆಗಳು, ಒಟ್ಟು ಹುದ್ದೆಗಳ ವಿವರ, ಅರ್ಜಿ ಸಲ್ಲಿಸುವ ಪ್ರಕ್ರಿಯೆ, ಪ್ರಮುಖ ದಿನಾಂಕಗಳು, ಅರ್ಜಿ ಸಲ್ಲಿಸಲು ಡೈರೆಕ್ಟ್ ಲಿಂಕ್‌ಗಳು ಸೇರಿದಂತೆ ಸಂಪೂರ್ಣ ಮಾಹಿತಿಯನ್ನು ಕೆಳಗೆ ನೀಡಲಾಗಿದೆ.
NSCL Recruitment 2024
ಒಟ್ಟು ಹುದ್ದೆಗಳ ಸಂಖ್ಯೆ: 188
ಹುದ್ದೆಗಳ ಹೆಸರು: ಟ್ರೈನಿ, ಮ್ಯಾನೇಜ್‌ಮೆಂಟ್ ಟ್ರೈನಿ
ಉದ್ಯೋಗದ ಸ್ಥಳ: ಭಾರತದಾದ್ಯಂತ
ವಿದ್ಯಾರ್ಹತೆ:
ನ್ಯಾಷನಲ್ ಸೀಡ್ಸ್ ಕಾರ್ಪೋರೇಷನ್ ಲಿಮಿಟೆಡ್ ನೇಮಕಾತಿ ಅಧಿಸೂಚನೆ ಪ್ರಕಾರ ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಮಂಡಳಿಯಿಂದ ಹುದ್ದೆಗಳಿಗೆ ಅನುಸಾರವಾಗಿ ಐಟಿಐ, ಡಿಪ್ಲೊಮಾ, ಪದವಿ, ಬಿ.ಕಾಂ, ಬಿ.ಎಸ್‌ಸಿ, ಬಿ.ಇ ಅಥವಾ ಬಿ.ಟೆಕ್, ಎಂಎಸ್‌ಡಬ್ಲ್ಯು, ಎಂ.ಎ, ಎಂಬಿಎ, ಎಂ.ಎಸ್‌ಸಿ ಮತ್ತು ಸ್ನಾತಕೋತ್ತರ ಪದವಿಯನ್ನು ಪೂರ್ಣಗೊಳಿಸರಬೇಕು.
ವಯೋಮಿತಿ:
ನ್ಯಾಷನಲ್ ಸೀಡ್ಸ್ ಕಾರ್ಪೋರೇಷನ್ ಲಿಮಿಟೆಡ್ ನೇಮಕಾತಿ ಅಧಿಸೂಚನೆ ಪ್ರಕಾರ ಅಭ್ಯರ್ಥಿಗಳು ವಿವಿಧ ಹುದ್ದೆಗಳಿಗೆ ಅನುಗುಣವಾಗಿ ಕನಿಷ್ಠ ವಯಸ್ಸು 27 ಪೂರೈಸಿರಬೇಕು. ಹಾಗೂ ಗರಿಷ್ಠ 50 ವರ್ಷದೊಳಗಿರಬೇಕು.
ವಯೋಮಿತಿ ಸಡಿಲಿಕೆ:
ಒಬಿಸಿ (ಎನ್‌ಸಿಎಸ್) ಅಭ್ಯರ್ಥಿಗಳಿಗೆ: 3 ವರ್ಷ
ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳಿಗೆ: 5 ವರ್ಷ
ಪಿಡಬ್ಲ್ಯುಡಿ ಅಭ್ಯರ್ಥಿಗಳಿಗೆ: 10 ವರ್ಷ
NSCL Recruitment 2024 ವೇತನ ಶ್ರೇಣಿ:
ನ್ಯಾಷನಲ್ ಸೀಡ್ಸ್ ಕಾರ್ಪೋರೇಷನ್ ಲಿಮಿಟೆಡ್ ನೇಮಕಾತಿ ಅಧಿಸೂಚನೆ ಪ್ರಕಾರ ಈ ಹುದ್ದೆಗಳಿಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಹುದ್ದೆಗೆ ಅನುಗುಣವಾಗಿ 24,616 ರಿಂದ 1,41,260 ರೂ. ಮಾಸಿಕ ವೇತನವನ್ನು ನೀಡಲಾಗುತ್ತದೆ.
ಅರ್ಜಿ ಶುಲ್ಕ:
ಇಡಬ್ಲ್ಯುಎಸ್/ಒಬಿಸಿ/ಮಾಜಿ ಸೈನಿಕರು ಅಭ್ಯರ್ಥಿಗಳು: 500 ರೂ.
ಎಸ್‌ಸಿ/ಎಸ್‌ಟಿ/ಪಿಡಬ್ಲ್ಯುಡಿ ಅಭ್ಯರ್ಥಿಗಳು: ಅರ್ಜಿ ಶುಲ್ಕವಿಲ್ಲ.
ಆಯ್ಕೆ ವಿಧಾನ:
ಅಧಿಸೂಚನೆ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು
ಕಂಪ್ಯೂಟರ್ ಆಧಾರಿತ ಪರೀಕ್ಷೆ, ದಾಖಲಾತಿ ಪರಿಶೀಲನೆ ಮತ್ತು ಸಂದರ್ಸನದ ಮೂಲಕ ಆಯ್ಕೆ ಮಾಡಿಕೊಳ್ಳಲಾಗುತ್ತದೆ.
ಪ್ರಮುಖ ದಿನಾಂಕಗಳು:
ಆನ್‌ಲೈನ್ ಅರ್ಜಿ ಸ್ವೀಕರಿಸಲು ಪ್ರಾರಂಭದ ದಿನಾಂಕ: 26/10/2024
ಆನ್‌ಲೈನ್ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 30/11/2024
NSCL Recruitment 2024 ಪ್ರಮುಖ ಲಿಂಕ್‌ಗಳು:
ಅಧಿಸೂಚನೆ ನೋಡಲು: ಇಲ್ಲಿ ಕ್ಲಿಕ್ ಮಾಡಿ
ಆನ್‌ಲೈನ್ ಅರ್ಜಿ ಸಲ್ಲಿಸಲು: ಇಲ್ಲಿ ಕ್ಲಿಕ್ ಮಾಡಿ
ವೆಬ್‌ಸೈಟ್ ವಿಳಾಸ: indiaseeds.com
PDO ಪರೀಕ್ಷೆ ಹಾಲ್ ಟಿಕೆಟ್ ಪ್ರಕಟ ಡೌನ್‌ಲೋಡ್ ಮಾಡಲು ಡೈರೆಕ್ಟರ್ ಲಿಂಕ್