ಈಗ 18 ವರ್ಷದೊಳಗಿನ ಮಕ್ಕಳಿಗೂ ಪ್ಯಾನ್​ ಕಾರ್ಡ್​ ಕಡ್ಡಾಯ | PAN Card for Children

WhatsApp Group Join Now
Telegram Group Join Now

PAN Card for Children: ಇತ್ತೀಚಿನ ದಿನಗಳಲ್ಲಿ ಯಾವುದೇ ಹಣಕಾಸು ವ್ಯವಹಾರ ಮಾಡಲು ಪ್ಯಾನ್​ ಕಾರ್ಡ್​​ ಕಡ್ಡಾಯ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಎಲ್ಲರ ಬಳಿಯೂ ಪರ್ಮನೆಂಟ್ ಅಕೌಂಟ್ ನಂಬರ್ (PAN)​ ಇರಲೇಬೇಕು ಎಂಬ ನಿಯಮವಿದೆ. ಇದು ಕೇವಲ 18 ವರ್ಷ ದಾಟಿದವರಿಗೆ ಮಾತ್ರ ಅಲ್ಲ. ಇದೀಗ 18 ವರ್ಷದೊಳಗಿನ ಮಕ್ಕಳೂ ಸಹ ಪ್ಯಾನ್​​ ಕಾರ್ಡ್​​​ ಹೊಂದಿರುವುದು ಕಡ್ಡಾಯ. ಈ ವಿಚ ಹಲವು ಜನರಿಗೆ ಗೊತ್ತಿಲ್ಲ. ಹಾಗಿದ್ರೆ ಬನ್ನಿ, ನಿಮ್ಮ ಮಗುವಿನ ಹೆಸರಿನ ಪ್ಯಾನ್​ ಕಾರ್ಡ್​​ನ್ನು (Pan Card) ಹೇಗೆ ಪಡೆಯುವುದು ಎಂದು ತಿಳಿಯೋಣ.

PAN Card ದೊಡ್ಡ ಪ್ರಮಾಣದ ಹಣಕಾಸಿನ ವಹಿವಾಟು ಮಾಡಲು ಪ್ರಮುಖ ದಾಖಲೆ ಪ್ಯಾನ್​ ಕಾರ್ಡ್​ ಅವಶ್ಯಕ. ಬ್ಯಾಂಕ್ ಖಾತೆ ತೆರೆಯಲು ಹಾಗೂ ಎಲ್ಲಿಯಾದರೂ ಹಣ ಹೂಡಿಕೆ, ವ್ಯವಹಾರ ನಡೆಸುವಾಗ ಪುರಾವೆಯಾಗಿ PAN ಕಾರ್ಡ್​​ನ್ನು ತೋರಿಸಬೇಕು. ಸರ್ಕಾರಿ ಕಚೇರಿಯಲ್ಲಿ ಹಣ ವರ್ಗಾವಣೆಗೆ ಮಾಡಲು ಪ್ಯಾನ್ ಕಾರ್ಡ್ ಅಗತ್ಯವಿದೆ.

PAN Card for Children ಯಾವಾಗ ಅವಶ್ಯಕ?

ಮಕ್ಕಳ ಹೆಸರಲ್ಲಿ ಆಸ್ತಿ ವ್ಯವಹಾರ ಮಾಡುವ ಹಲವು ಪೋಷಕರು ಇದ್ದಾರೆ. ಮಕ್ಕಳ ಹೆಸರಿನಲ್ಲಿ ಬ್ಯಾಂಕ್​ ಖಾತೆಗಳನ್ನೂ ಸಹ ತೆರೆದಿರುತ್ತಾರೆ. ಪೋಷಕರು ತಮ್ಮ ಹೂಡಿಕೆಗೆ ನಾಮಿನಿಗಳಾಗಿ ತಮ್ಮ ಮಕ್ಕಳ ಹೆಸರನ್ನು ಸೇರಿಸುತ್ತಾರೆ, ಆವಾಗ ಮಕ್ಕಳ ಹೆಸರಿನಲ್ಲಿ ಪ್ಯಾನ್​ ಕಾರ್ಡ್​​ ಹೊಂದಿರುವುದು ಕಡ್ಡಾಯ. ಅದಕ್ಕಾಗಿಯೇ 18 ವರ್ಷದೊಳಗಿನ ಮಕ್ಕಳಿಗೆ ಪ್ಯಾನ್​ ಕಾರ್ಡ್​​​ನ್ನು ಪಡೆಯಬೇಕು.

18 ವರ್ಷಕ್ಕಿಂತ ಕಡಿಮೆ ವಯಸ್ಸಿನವರು PAN ಕಾರ್ಡ್ ಪಡೆಯುವುದು ಹೇಗೆ:
18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಗುವಿನ ಪ್ಯಾನ್ ಕಾರ್ಡ್‌ಗೆ (PAN Card) ಅರ್ಜಿ ಸಲ್ಲಿಸಲು ಬಯಸಿದರೆ, ಅದು ಬಹಳ ಸಹಜ ಆದರೆ ಯಾವುದೇ ಅಪ್ರಾಪ್ತ ವಯಸ್ಕರು ಸ್ವತಃ ಪ್ಯಾನ್​ ಕಾರ್ಡ್​​ಗೆ ಅರ್ಜಿ ಸಲ್ಲಿಸುವಂತಿಲ್ಲ. ಬದಲಾಗಿ, ಅವರ ಪೋಷಕರು ಮಗುವಿನ ಪರವಾಗಿ ಅರ್ಜಿ ಸಲ್ಲಿಸಬೇಕು.

ಪ್ರಮುಖ ದಾಖಲೆಗಳು:
ಪೋಷಕರ ಫೋಟೋ ಮತ್ತು ಸಹಿಯನ್ನು
ಗುರುತಿನ ಚೀಟಿ, ವಿಳಾಸ ಪುರಾವೆ
ಮಕ್ಕಳ ಆಧಾರ್ ಕಾರ್ಡ್,
ಪೋಷಕರ ಆಧಾರ್ ಕಾರ್ಡ್
ಮೊಬೈಲ್ ನಂಬರ್‌

ಇದನ್ನೂ ಓದಿ: PUC ಪಾಸಾದ ವಿದ್ಯಾರ್ಥಿಗಳಿಗೆ ಕೋಟಕ್ ಮಹೀಂದ್ರಾ ಬ್ಯಾಂಕ್ ವತಿಯಿಂದ 1.5 ಲಕ್ಷ ವಿದ್ಯಾರ್ಥಿವೇತನ

ಅರ್ಜಿ ಸಲ್ಲಿಸುವ ವಿಧಾನ:
ಪೋಷಕರು ನಿಮ್ಮ ಮಕ್ಕಳ ಪ್ಯಾನ್ ಕಾರ್ಡ್ ಪಡೆಯಲು ಬಯಸಿದರೆ, ಮೊದಲಿಗೆ ನ್ಯಾಷನಲ್ ಸೆಕ್ಯುರಿಟೀಸ್ ಡಿಪಾಸಿಟರಿ ಲಿಮಿಟೆಡ್ (NSDL) ನ ವೆಬ್‌ಸೈಟ್ tin-nsdl.com ಗೆ ಭೇಟಿ ಕೊಟ್ಟು. ಅಲ್ಲಿ ಆಯ್ಕೆಗಳಲ್ಲಿ PAN ಕ್ಲಿಕ್ ಮಾಡಿ. ನಂತರ ಹೊಸ PAN (ಫಾರ್ಮ್ 49A) ವಿಭಾಗವನ್ನು ಹಂಚಿಕೆಗಾಗಿ Apply ಮೇಲೆ ಕ್ಲಿಕ್ ಮಾಡಿ.

ಪ್ಯಾನ್ ಕಾರ್ಡ್ ತೆಗೆದುಕೊಳ್ಳಲು ಬಯಸುವ ಮಕ್ಕಳ ವಿವರಗಳೊಂದಿಗೆ ಪೋಷಕರ ವಿವರಗಳನ್ನು ಭರ್ತಿ ಮಾಡಬೇಕು. ಪ್ಯಾನ್ ಕಾರ್ಡ್ ಅರ್ಜಿ ಸಲ್ಲಿಸಿದ 15 ದಿನಗಳ ನಂತರ ಪೋಸ್ಟ್‌ ಮುಖಾಂತರ Pan ಕಾರ್ಡ್ ನಿಮಗೆ ತಲುಪುತ್ತದೆ.

ಇದನ್ನೂ ಓದಿ: ಬಡ ಕುಟುಂಬಗಳಿಗೆ ಉಚಿತ ಮನೆ ಭಾಗ್ಯ ಸರ್ಕಾರದಿಂದ ಗುಡ್ ನ್ಯೂಸ್ 

WhatsApp Group Join Now
Telegram Group Join Now

Leave a Comment