ಪಿಎಂ ಕಿಸಾನ್‌ 18ನೇ ಕಂತಿನ ಹಣ ಪಡೆಯಲು ಈ ಕೆಲಸ ಮಾಡುವುದು ಕಡ್ಡಾಯ? | PM Kisan 18th Installment Release Date

WhatsApp Group Join Now
Telegram Group Join Now

ದೇಶದ ಕೃಷಿಕರಿಗೆ ನೆರವಾಗುವ ಉದ್ದೇಶದಿಂದ ಕೇಂದ್ರ ಸರ್ಕಾರ ಜಾರಿಗೆ ತಂದ ಪ್ರಧಾನ ಮಂತ್ರಿ ಕಿಸಾನ್‌ ಸಮ್ಮಾನ್‌ ನಿಧಿ (PM Kisan Samman Nidhi) ಯೋಜನೆಯನ್ನು ಜಾರಿಗೆ ತಂದಿದ್ದು. ಪಿಎಂ ಕಿಸಾನ್ 18ನೇ ಕಂತಿನ ಹಣ ಬಿಡುಗಡೆಗೆ ಕುರಿತು ಪ್ರಮುಖ ಮಾಹಿತಿ ಹೊರಬಿದ್ದಿದೆ. ಮುಂಬರುವ ಅಕ್ಟೋಬರ್ ಅಥವಾ ನವೆಂಬರ್‌ನಲ್ಲಿ ಫಲಾನುಭವಿಗಳ ಖಾತೆಗೆ 18ನೇ ಕಂತಿನ 2,000 ರೂ. ಹಣ ಜಮೆ ಆಗಲಿದೆ.

ಇದುವರೆಗೆ ಪಿಎಂ ಕಿಸಾನ್ ಹಣ 2024 ರಲ್ಲಿ ಎರಡು ಕಂತುಗಳು ಫೆಬ್ರವರಿಯಲ್ಲಿ 16ನೇ ಕಂತು ಬಿಡುಗಡೆಯಾಗಿತ್ತು. ಹಾಗೂ 17ನೇ ಕಂತು ಜೂನ್‌ನಲ್ಲಿ ಜಮಾ ಆಗಿತ್ತು. ಮತ್ತು 18ನೇ ಕಂತು ಅಕ್ಟೋಬರ್ ಅಥವಾ ನವೆಂಬರ್ ತಿಂಗಳಲ್ಲಿ ಜಮಾ ಆಗುವ ಸಾಧ್ಯತೆ ಇದೆ. ಕೇಂದ್ರ ಸರ್ಕಾರ ಪ್ರಧಾನ ಮಂತ್ರಿ ಕಿಸಾನ್‌ ಸಮ್ಮಾನ್‌ ನಿಧಿ ಯೋಜನೆಯನ್ನು 2019 ರಲ್ಲಿ ಪ್ರಾರಂಭಿಸಿದೆ.

PM Kisan 18th Installment Release Date

ಪಿಎಂ-ಕಿಸಾನ್ ಸಮ್ಮಾನ್‌ ಯೋಜನೆಯಡಿ ದೇಶದ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ನೆರವಾಗುವ ಉದ್ದೇಶದಿಂದ ಕೃಷಿಕರ ಖಾತೆಗೆ ನಾಲ್ಕು ತಿಂಗಳಿಗೊಮ್ಮೆ 2 ಸಾವಿರ ರೂ.ಗಳಂತೆ ವರ್ಷದಲ್ಲಿ 3 ಬಾರಿ ಜಮಾ ಮಾಡಲಾಗುತ್ತದೆ. 6 ಸಾವಿರ ರೂ. ಹಣವನ್ನು ನೇರವಾಗಿ ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಲಾಗುತ್ತದೆ.

ಕಿಸಾನ್‌ ಸಮ್ಮಾನ್‌ ನಿಧಿಯ ಹಣವನ್ನು ಪಡೆಯಲು ಫಲಾನುಭವಿ ರೈತರು ಇ-ಕೆವೈಸಿ ಮಾಡಿಸುವುದು ಸರ್ಕಾರ ಕಡ್ಡಾಯಗೊಳಿಸಿದೆ. ಆನ್‌ಲೈನ್‌ ಅಥವಾ ಆಫ್‌ಲೈನ್‌ ಮೂಲಕ ಇ-ಕೆವೈಸಿ ಮಾಡಬಹುದು.

ಇ-ಕೆವೈಸಿ ಕಡ್ಡಾಯ (PM Kisan KYC update):
ಅರ್ಹ ಫಲಾನುಭವಿಗಳು pmkisan.gov.in ಗೆ ವೆಬ್‌ಸೈಟ್ ನೀಡಿ.
ಆನಂತರ ನೀವು ಮುಖಪುಟದಲ್ಲಿ ಇರುವ ಇ- ಕೆವೈಸಿ ಆಯ್ಕೆ ಮೇಲೆ ಕ್ಲಿಕ್ ಮಾಡಿ.
ಆನಂತರ ನಿಮ್ಮ ಆಧಾರ್ ಸಂಖ್ಯೆ ಮತ್ತು ಕ್ಯಾಪ್ಟಾ ಕೋಡ್ ಅನ್ನು ಭರ್ತಿ ಮಾಡಬೇಕಾಗುತ್ತದೆ.
ಮತ್ತೆ ಸರ್ಚ್ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
ಅದಾದನಂತರ ನಿಮ್ಮ ಆಧಾ‌ರ್ ಕಾರ್ಡ್ ಗೆ ಲಿಂಕ್ ಇರುವ ಮೊಬೈಲ್ ನಂಬರ್‌ (Mobile number)ನಮೂದಿಸಬೇಕು. ನಿಮ್ಮ ಮೊಬೈಲ್ ನಂಬರ್‌ ಗೆ ಒಟಿಪಿ ಬರುತ್ತದೆ. OTP ಅನ್ನು ನಮೂದಿಸಿ.
ನಂತರ ಸಬ್ಸಿಟ್ ಬಟನ್ (submit button) ಮೇಲೆ ಕ್ಲಿಕ್ ಮಾಡಿ. ನಿಮ್ಮ ಇ- ಕೆವೈಸಿ ಪೂರ್ಣಗೊಂಡ ತಕ್ಷಣ, ಇದರ ಜೊತೆಗೆ ಭೂ ಪರಿಶೀಲನೆಯೂ ಬಹಳ ಅವಶ್ಯಕ ವಾಗಿದೆ.

ಇದನ್ನೂ ಓದಿ: ಗೃಹಲಕ್ಷ್ಮಿ ಹಣ ಬಿಡುಗಡೆ ಬಗ್ಗೆ ಹೊಸ ಅಪ್‌ಡೇಟ್‌!

ಹೊಸ ಹೆಸರು ನೋಂದಾಯಿಸುವ ವಿಧಾನ:
ಅರ್ಜಿದಾರರು pmkisan.gov.in ವೆಬ್‌ಸೈಟ್‌ ಭೇಟಿ ನೀಡಿ.
ಅಲ್ಲಿ ಕಾಣುವ ‘New Farmer Registration’ ಆಯ್ಕೆ ಮೇಲೆ ಕ್ಲಿಕ್ ಮಾಡಿ ನಂತರ ಅರ್ಜಿದಾರರ ಆಧಾರ್‌ ಕಾರ್ಡ್‌ ನಂಬರ್‌ ನಮೂದಿಸಿ ಕ್ಯಾಪ್ಚ ಕೋಡ್‌ ಭರ್ತಿ ಮಾಡಿ ಸಬ್ಸಿಟ್ ಮಾಡಿ.
ನಂತರ ಅಗತ್ಯ ಮಾಹಿತಿ ಭರ್ತಿ ಮಾಡಿ ‘Yes’ ಬಟನ್‌ ಕ್ಲಿಕ್‌ ಮಾಡಿ.
ಅರ್ಜಿ ಫಾರಂ ತುಂಬಿದ ನಂತರ ಸೇವ್‌ ಮಾಡಿ ಭವಿಷ್ಯದ ಅಗತ್ಯಗಳಿಗಾಗಿ ಪ್ರಿಂಟ್‌ ಔಟ್‌ ತೆಗೆದಿಡಿ.

ಇದನ್ನೂ ಓದಿ: ಕೃಷಿ ಇಲಾಖೆಯಿಂದ ವಿವಿಧ ಸಬ್ಸಿಡಿ ಯೋಜನೆ ಅರ್ಜಿ ಆಹ್ವಾನ 

WhatsApp Group Join Now
Telegram Group Join Now

Leave a Comment