ರೈತರಿಗೆ ಪ್ರಮುಖ ಯೋಜನೆಯಾದ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ (PM Kisan Yojana) ಹಣವನ್ನು ಪಡೆಯುತ್ತಿರುವ ಫಲಾನುಭವಿಗಳಿಗೆ ಪ್ರಮುಖವಾದ ನವೀಕರಣವನ್ನು ನೀಡಲಾಗಿದೆ. ಈ ಯೋಜನೆಯ 19 ನೇ ಕಂತಿನ ಪ್ರಯೋಜನ ಪಡೆಯಲು, ರೈತರು ಹೊಸ ಅರ್ಹತಾ ಮಾನದಂಡಗಳನ್ನು ಕಡ್ಡಾಯವಾಗಿ ಪೂರೈಸಬೇಕಾಗುತ್ತದೆ.
ಸರ್ಕಾರವು ಈ ಯೋಜನೆಯಡಿ ರೈತರಿಗೆ ಪ್ರತಿ ನಾಲ್ಕು ತಿಂಗಳಿಗೊಮ್ಮೆ 2,000 ರೂ. ರಂತೆ ವಾರ್ಷಿಕವಾಗಿ 6000 ರೂ. ಅನ್ನು ಮೂರು ಕಂತುಗಳಲ್ಲಿ ಜಮಾ ಮಾಡಲಾಗುತ್ತದೆ. ಆದರೆ ಈಗ, (PM Kisan 19th Unstallment eKYC) ಈ ಯೋಜನೆಯ ಪ್ರಯೋಜನ ಪಡೆಯಲು ರೈತ ನೋಂದಣಿಯಲ್ಲಿ ekyc ನೋಂದಣಿ ಅಗತ್ಯವಾಗಿದೆ.
PM Kisan 19th Unstallment eKYC
ಈಗಾಗಲೇ 18 ನೇ ಕಂತಿನ ಹಣವನ್ನು ಪಡೆದಿದ್ದು. ನೀವು 19 ನೇ ಕಂತಿಗೆ ಅರ್ಹರಾಗಿದ್ದೀರಿ ಎಂದು ಖಚಿತಪಡಿಸಿಕೊಳ್ಳಲು, ಈ ಕೆಳಗಿನ ವಿಧಾನವನ್ನು ಅನುಸರಿಸಿ.
- ಮೊದಲು pmkisan.gov.in ವೆಬ್‌ಸೈಟ್‌ಗೆ ಭೇಟಿ ನೀಡಿ.
- ನಂತರ ವೆಬ್‌ಸೈಟ್‌ನಲ್ಲಿ ಕೆಳಗೆ ಸ್ಕ್ರಾಲ್ ಮಾಡಿ ಮತ್ತು ‘ಫಲಾನುಭವಿಗಳ ಪಟ್ಟಿ’ ಕ್ಲಿಕ್ ಮಾಡಿ.
- ಅದಾದನಂತರ ಹೊಸ ಪುಟದಲ್ಲಿ ನಿಮ್ಮ ಎಲ್ಲಾ ಮಾಹಿತಿಯನ್ನು ಭರ್ತಿ ಮಾಡಿ.
- ಅಲ್ಲಿ ನಿಮ್ಮ ರಾಜ್ಯ, ಜಿಲ್ಲೆ, ಉಪವಿಭಾಗ, ಬ್ಲಾಕ್ ಮತ್ತು ಗ್ರಾಮವನ್ನು ಆಯ್ಕೆಮಾಡಿ.
- ನಂತರ Get Report’ ಬಟನ್ ಮೇಲೆ ಕ್ಲಿಕ್ ಮಾಡಿ.
- ನಂತರ ಫಲಾನುಭವಿಗಳ ಪಟ್ಟಿ ನಿಮ್ಮ ಮುಂದೆ ತೆರೆಯುತ್ತದೆ. ಆ ಪಟ್ಟಿಯಲ್ಲಿ ನಿಮ್ಮ ಹೆಸರು ಇದ್ದರೆ, ನೀವು 19 ನೇ ಕಂತಿನ ಹಣ ಪಡೆಯಲು ಅರ್ಹರಾಗುತ್ತೀರಿ.
PM Kisan 19th Unstallment eKYC ರೈತರು ಈ 4 ಕೆಲಸಗಳ ಬಗ್ಗೆ ತಿಳಿದುಕೊಳ್ಳಿ:
- ಈಗಾಗಲೇ ನೀವು ಈ ಯೋಜನೆಗೆ ಫಲಾನುಭವಿಗಳು ಅಥವಾ ಪ್ರಯೋಜನ ಪಡೆಯುತ್ತಿದ್ದರೆ ನಿಮ್ಮ ಆಧಾರ್ ಕಾರ್ಡ್ ಅನ್ನು ನಿಮ್ಮ ಬ್ಯಾಂಕ್ ಖಾತೆಗೆ ಲಿಂಕ್ ಮಾಡಬೇಕು. ಈ ಕೆಲಸವನ್ನು ಮಾಡದಿದ್ದರೆ, ನಿಮ್ಮ ಮುಂದಿನ ಕಂತಿನ ಪ್ರಯೋಜನಗಳಿಂದ ವಂಚಿತರಾಗಬಹುದು. ನೀವು ನಿಮ್ಮ ಬ್ಯಾಂಕ್ ಶಾಖೆಗೆ ಭೇಟಿ ನೀಡಿ ಈ ಕೆಲಸವನ್ನು ಮಾಡಬಹುದು.
- ಅರ್ಹ ರೈತರು 19ನೇ ಕಂತಿನ ಪ್ರಯೋಜನ ಪಡೆಯಲು, ಸಂಬಂಧಿಸಿದ ರೈತರು ಇ-ಕೆವೈಸಿ ಮಾಡಿಸುವುದು ಕಡ್ಡಾಯವಾಗಿದೆ. ಈ ಕೆಲಸ ಮಾಡದ ರೈತರ ಖಾತೆಗೆ ಹಣ ಪಾವತಿಯಾಗಲು ಸಾಧ್ಯವಿಲ್ಲ. ನೀವು ಇ-ಕೆವೈಸಿಯನ್ನು ನಿಮ್ಮ ಹತ್ತಿರದ ಸಿಎಸ್‌ಸಿ (CSC) ಕೇಂದ್ರಗಳಿಗೆ ಭೇಟಿ ನೀಡುವ ಮೂಲಕ ಅಥವಾ ನಿಮ್ಮ ಮೊಬೈಲ್ ನಲ್ಲಿ ಯೋಜನೆಯ ಅಧಿಕೃತ ವೆಬ್‌ಸೈಟ್ pmkisan.gov.in ಗೆ ಬೇಟೆ ನೀಡಿ ekyec ಮಾಡಬಹುದು.
- ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಲಾಭ ಪಡೆಯುತ್ತಿರುವ ರೈತರು 19 ಕಂತಿನ ಪ್ರಯೋಜನ ಪಡೆಯಲು ಭೂ ಪರಿಶೀಲನೆಯನ್ನು ಮಾಡಬೇಕಾಗಿದೆ.
- ರೈತರು eKYC ಅನ್ನು ಪೂರ್ಣಗೊಳಿಸಲು PMKISAN ಪೋರ್ಟಲ್‌ನಲ್ಲಿ OTP-ಆಧಾರಿತ eKYC, CSC ಕೇಂದ್ರದಲ್ಲಿ ಬಯೋಮೆಟ್ರಿಕ್ ಆಧಾರಿತ eKYC ಮತ್ತು ಮುಖದ ದೃಢೀಕರಣ ಆಧಾರಿತ eKYC ಮಾಡಿರಬಹುದು.
ಬಿಪಿಎಲ್ ಕಾರ್ಡ್ ರದ್ದಾದ ಫಲಾನುಭವಿಗಳಿಗೆ ರಾಜ್ಯ ಸರ್ಕಾರದಿಂದ ಗುಡ್ ನ್ಯೂಸ್