PM Kisan MaanDhan Yojana: ಭಾರತವು ಮೂಲತಃ ಕೃಷಿ ಪ್ರಧಾನ ರಾಷ್ಟ್ರ ಆಗಿರುವುದರಿಂದ. ದೇಶದ ಬಹುಪಾಲು ಜನರು ಕೃಷಿಯನ್ನೇ ಅವಲಂಬಿಸಿದ್ದಾರೆ. ಹಾಗಾಗಿ, ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ವೃದ್ಧಾಪ್ಯದಲ್ಲಿ ಜೀವನೋಪಾಯದ ಭದ್ರತೆಯನ್ನು ಒದಗಿಸುವ ನಿಟ್ಟಿನಲ್ಲಿ ಸರ್ಕಾರ ಪಿಎಂ ಕಿಸಾನ್ ಮಾನಧನ್ ಯೋಜನೆಯನ್ನು ಪ್ರಾರಂಭಿಸಿದೆ. ಕೇಂದ್ರ ಸರ್ಕಾರದ ಈ ಯೋಜನೆಯಡಿ ಅರ್ಹ ಫಲಾನುಭವಿಗಳಿಗೆ ತಿಂಗಳಿಗೆ 3000 ರೂ. ಸಹಾಯಧನ ಪಡೆಯಬಹುದು.
ಪಿಎಂ ಕಿಸಾನ್ ಮಾನಧನ್ ನಿಧಿ ಯೋಜನೆಯಲ್ಲಿ 18 ರಿಂದ 40 ವರ್ಷ ವಯಸ್ಸಿನ ಹಾಗೂ 5 ಎಕರೆಯೊಳಗಿನ ಜಮೀನನ್ನು ಹೊಂದಿರುವ ರೈತರಿಗೆ ಯೋಜನೆಗೆ. ತಿಂಗಳಿಗೆ 3,000 ರೂ ಪಿಂಚಣಿ ನೀಡಲಾಗುತ್ತದೆ. ಈ ಯೋಜನೆಯಡಿ ರೈತರು ಮೊದಲು ತಿಂಗಳಿಗೆ ಕನಿಷ್ಠ ಹಣ 55 ರೂ. ನಿಂದ 200 ರೂ ಕಟ್ಟಬೇಕು.
PM Kisan MaanDhan Yojana
ಏನಿದು ಪಿಎಂ ಕಿಸಾನ್ ಮಾನಧನ್ ಯೋಜನೆ?
PM Kisan MaanDhan Yojana: 2 ಹೆಕ್ಟೇರ್ ಅಥವಾ 5 ಎಕರೆವರೆಗೆ ಜಮೀನು ಹೊಂದಿರುವ ಹಾಗೂ 18 ರಿಂದ 40 ವರ್ಷ ವಯೋಮಾನದೊಳಗಿನ ರೈತರಿಗೆ ವೃದ್ದಾಪ್ಯದಲ್ಲಿ ಆರ್ಥಿಕ ನೆರವನ್ನು ನೀಡುವ ನಿಟ್ಟಿನಲ್ಲಿ 2019 ರಲ್ಲಿ ಪ್ರಧಾನಮಂತ್ರಿ ಮಾನಧನ್ ಯೋಜನೆಯನ್ನು ಕೇಂದ್ರ ಸರ್ಕಾರ ಪ್ರಾರಂಭಿಸಿದ್ದು. ಈ ಯೋಜನೆಯಲ್ಲಿ ಅರ್ಹ ವೃದ್ಧ ರೈತರಿಗೆ ತಿಂಗಳಿಗೆ 3000 ರೂ.ಗಳ ಪಿಂಚನಿಯನ್ನು ನೀಡಲಾಗುತ್ತದೆ.
ಅರ್ಹ ರೈತರು ಈ ಯೋಜನೆಯಡಿ ಪ್ರತಿ ತಿಂಗಳಿಗೆ 55 ರೂ. ನಿಂದ 200 ರೂವರೆಗೆ ಹಣವನ್ನು ಪಿಂಚಣಿ ನಿಧಿಗೆ ಠೇವಣಿ ಮಾಡಬೇಕು. ಗಮನಾರ್ಹ ರೈತರು ಹೂಡಿಕೆ ಮಾಡುವಷ್ಟೇ ಹಣವನ್ನು ಕೇಂದ್ರ ಸರ್ಕಾರ ಈ ಯೋಜನೆಯಲ್ಲಿ ಠೇವಣಿ ಮಾಡುತ್ತದೆ. ಒಂದು ವೇಳೆ ಅರ್ಜಿದಾರರು 18 ವರ್ಷ ವಯಸ್ಸಿನರಾಗಿದರೆ ಈ ಯೋಜನೆ ಠೇವಣಿ ಆರಂಭಿಸಿದರೆ ತಿಂಗಳಿಗೆ ಕನಿಷ್ಠ ರೂ. 55 . ನಂತೆ ಕಟ್ಟಬೇಕಾಗುತ್ತದೆ. ಒಂದು ವೇಳೆ 40ನೇ ವಯಸ್ಸಿನಲ್ಲಿ ಯೋಜನೆಯಡಿ ಠೇವಣಿ ಪ್ರಾರಂಭಿಸಿದ್ದರೆ. ತಿಂಗಳಿಗೆ ಕನಿಷ್ಠ ಮೊತ್ತ 200 ರೂ ಕಟ್ಟಬೇಕಾಗುತ್ತದೆ.
ಇದನ್ನೂ ಓದಿ: ಸ್ವಯಂ ಉದ್ಯೋಗ ಪ್ರಾರಂಭಿಸಲು 1,00,000 ರೂ. ನೇರಸಾಲ ಯೋಜನೆಗೆ ಅರ್ಜಿ ಆಹ್ವಾನಿ
PM Kisan MaanDhan Yojana ಅರ್ಹ ರೈತರು 60 ವರ್ಷದವರೆಗೆ ಪ್ರತೀ ತಿಂಗಳು ಪಿಂಚಣಿ ನಿಧಿಗೆ ಹಣ ಕಟ್ಟಬೇಕು. 60 ವಯಸ್ಸಿನ ಬಳಿಕ ರೈತರ ಖಾತೆ ಪ್ರತಿ ತಿಂಗಳಿಗೆ 3,000 ರೂ ಅಥವಾ ಅದಕ್ಕಿಂತ ಹೆಚ್ಚಿನ ಮೊತ್ತದ ಪಿಂಚಣಿಯನ್ನು ರೈತರು ಪಡೆಯಬಹುದು.
ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು:
ಆಧಾರ್ ಕಾರ್ಡ್
ಬ್ಯಾಂಕ್ ಪಾಸ್ ಬುಕ್
ವಿಳಾಸ ಗುರುತಿನ ಚೀಟಿ
ಮೊಬೈಲ್ ಸಂಖ್ಯೆ
ಪಾಸ್ಪೋರ್ಟ್ ಅಳತೆಯ ಭಾವಚಿತ್ರ.
ಇದನ್ನೂ ಓದಿ: ಸರ್ಕಾರದಿಂದ ಮಹಿಳೆಯರಿಗೆ 2.5 ಲಕ್ಷ ಸಹಾಯಧನ ಅರ್ಜಿ ಆಹ್ವಾನ
ಪಿಎಂ ಕಿಸಾನ್ ಮಾನಧನ್ ಯೋಜನೆ ನೊಂದಣಿ ಹೇಗೆ?
ರೈತರು ತಮ್ಮ ಹತ್ತಿರದ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿ. ಆಧಾರ್ ಕಾರ್ಡ್, ಬ್ಯಾಂಕ್ ಖಾತೆಯ ವಿವರ ನೀಡಿ ನೊಂದಣಿ ಮಾಡಬೇಕು.
ರೈತರ ವಯಸ್ಸಿಗೆ ಅನುಗುಣವಾಗಿ ಅವರು ಕನಿಷ್ಠ ಎಷ್ಟು ಹಣ ಠೇವಣಿ ಮಾಡಬೇಕು ನಿರ್ದಿಷ್ಟಪಡಿಸಲಾಗುತ್ತದೆ.
ಗ್ರಾಮ ಮಟ್ಟದ ಉದ್ದಿಮೆದಾರ ಈ ನೊಂದಾವಣಿಯಲ್ಲಿ ಸಹಾಯ ಮಾಡುತ್ತಾರೆ.
ಅರ್ಹ ರೈತರು ಮೊದಲ ಕಂತಿನ ಹಣವನ್ನು ನಗದು ರೂಪದಲ್ಲಿ ಆ ಉದ್ದಿಮೆದಾರರಿಗೆ ನೀಡಬೇಕು. ಬಳಿಕ ಆಟೊ ಡೆಬಿಟ್ ಅರ್ಜಿ ತುಂಬಿಸಿ ಸಲ್ಲಿಸಬೇಕು.
ಆ ನಂತರ ಪ್ರತೀ ತಿಂಗಳು ಅವರು ಎಸ್ಬಿ ಖಾತೆಯಿಂದ ನಿರ್ದಿಷ್ಟ ಮೊತ್ತದ ಹಣವು ಪಿಂಚಣಿ ನಿಧಿಗೆ ಕಟ್ಟಾಗುತ್ತದೆ.
ರೈತರು ಯೋಜನೆಯಲ್ಲಿ ನೊಂದಣಿ ಮಾಡಿಕೊಂಡ ನಂತರ ರೈತರಿಗೆ ವಿಶೇಷ ಕಿಸಾನ್ ಪೆನ್ಷನ್ ಅಕೌಂಟ್ ನಂಬರ್ (ಕೆಪಿಎಎನ್) ಸೃಷ್ಟಿಯಾಗುತ್ತದೆ. ಬಳಿಕ ಕಿಸಾನ್ ಕಾರ್ಡ್ ಕೊಡಲಾಗುತ್ತದೆ.
ಇದನ್ನೂ ಓದಿ: ಬೆಳೆಹಾನಿ ಪರಿಹಾರ ಆಧಾರ್ ಲಿಂಕ್ ಆದ ರೈತರ ಪಟ್ಟಿ ಬಿಡುಗಡೆ ಪಟ್ಟಿಯಲ್ಲಿ ನಿಮ್ಮ ಹೆಸರು ಚೆಕ್ ಮಾಡಿ