ಪಿಎಂ ಕಿಸಾನ್ ಫಲಾನುಭವಿಗಳಿಗೆ ಸಂತಸದ ಸುದ್ದಿ | PM Kisan Yojana

WhatsApp Group Join Now
Telegram Group Join Now

ಕೇಂದ್ರ ಸರ್ಕಾರದ ಹಲವು ಯೋಜನೆಯಲ್ಲಿ ಒಂದಾದ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ಫಲಾನುಭವಿಗಳಿಗೆ ಪ್ರಸ್ತುತ ವರ್ಷಕ್ಕೆ ಮೂರು ಕಂತುಗಳಲ್ಲಿ ತಲಾ 6,000 ರೂ. ಹಣವನ್ನು ಅರ್ಹ ರೈತರ ಖಾತೆಗೆ ಜಮಾ ಮಾಡಲಾಗುತ್ತಿದೆ. ಈಗ ರೈತರಿಗೆ ಮತ್ತೊಂದು ಸಂತಸದ ಸುದ್ದಿ.

ಜುಲೈ ಮೂರನೇ ವಾರದಲ್ಲಿ ಕೇಂದ್ರ ಸರ್ಕಾರ ಮಳೆಗಾಲ ಅಧಿವೇಶನ ಬಜೆಟ್ ಮಂಡಿಸಲಿದೆ. ಈ ಬಾರಿಯ ಬಜೆಟ್ ಮೇಲೆ ರೈತರ ಬಗ್ಗೆ ಹೆಚ್ಚಿನ ನಿರೀಕ್ಷೆಗಳಿವೆ. ಇದರಲ್ಲಿ ಪಿಎಂ ಕಿಸಾನ್ ಯೋಜನೆಯಲ್ಲಿ ಈಗ ನೀಡುತ್ತಿರುವ ಅನುದಾನ , 6,000 ರೂಪಾಯಿಯಿಂದ 8,000 ರೂಪಾಯಿಗಳಿಗೆ ಹೆಚ್ಚಿಸಬೇಕು ಎಂದು ಕೃಷಿ ವಲಯದ ತಜ್ಞರು ಶಿಫಾರಸು ಮಾಡಿದ್ದಾರೆ. ಹಾಗಾದರೆ ಈ ಯೋಜನೆಯ ಫಲಾನುಭವಿಯಾಗುವುದು ಹೇಗೆ?

PM Kisan Yojana:

ಏನಿದ ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆ:
ಪಿಎಂ ಕಿಸಾನ್ (PM Kisan Samman Nidhi ) ಈ ಯೋಜನೆಯನ್ನು 2019 ರಲ್ಲಿ ಮೊದಲ ಬಾರಿಗೆ ಪರಿಚಯಿಸಲಾಯಿತು. ಕೃಷಿ ಭೂಮಿ ಇದ ರೈತರಿಗೆ ನೆರವಾಗಲೆಂದು ಪ್ರಾರಂಭಿಸಲಾದ ಈ ಯೋಜನೆಯಡಿಯಲ್ಲಿ ವಾರ್ಷಿಕ ನಾಲ್ಕು ತಿಂಗಳಿಗೊಮ್ಮೆ 2000 ರೂಪಾಯಿಗಳಂತೆ ಒಟ್ಟು ಮೂರು ಕಂತುಗಳಲ್ಲಿ 6000 ರೂಪಾಯಿ ಹಣ ರೈತರಿಗೆ ನೀಡುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ. ಜುಲೈ ತಿಂಗಳ ಕೇಂದ್ರ ಬಜೆಟ್ ನಂತರ 6,000 ರೂ. ಯಿಂದ 8,000 ರೂ. ಗೆ ಹೆಚ್ಚಿಸುವ ನಿರೀಕ್ಷೆಯಿದೆ.

ಪಿಎಂ ಕಿಸಾನ್ ಹೆಚ್ಚುವರಿ ಬೇಡಿಕೆ:
PM Kisan Yojana: ಮುಂದಿನ ಬಜೆಟ್‌ನಲ್ಲಿ ರೈತರ ಹೆಚ್ಚುವರಿ ಬೇಡಿಕೆಯನ್ನು ಸರ್ಕಾರ ಸ್ವೀಕರಿಸಿದರೆ. ವಾರ್ಷಿಕವಾಗಿ ನೀಡುವ ಮೊತ್ತ 6,000 ರೂ.ನಿಂದ 8,000 ರೂ. ಒಪ್ಪಿಕೊಂಡರೆ ಪ್ರತಿ ನಾಲ್ಕು ತಿಂಗಳಿಗೊಮ್ಮೆ ರೈತರ ಖಾತೆಗೆ 2000 ರೂ.ಗಳ ಬದಲಿಗೆ ಸುಮಾರು 2,667 ರೂ. ಹಣ ಜಮಾ ಆಗುತ್ತದೆ.

ಹಕ್ಕು ನಿರಾಕರಣೆ: ನಮ್ಮ ವೆಬ್‌ಸೈಟ್‌ನಲ್ಲಿ ಒದಗಿಸಲಾಗುವ ಮಾಹಿತಿಯು ಜಾಗೃತಿಗಾಗಿ ಮಾತ್ರ ಮತ್ತು ಇಂಟರ್ನೆಟ್‌ನಲ್ಲಿ ಲಭ್ಯವಿರುವ ಮೂಲಗಳಿಂದ ಸಂಗ್ರಹಿಸಲಾಗಿದೆ. ನಾವು ಯಾವುದೇ ಅಭಿಪ್ರಾಯ ಅಥವಾ ಹಕ್ಕುಗಳನ್ನು ಅನುಮೋದಿಸುವುದಿಲ್ಲ. ಮಾಹಿತಿ ನಿಖರತೆಯನ್ನು ಸ್ವತಂತ್ರವಾಗಿ ಪರಿಶೀಲಿಸಬಹುದು.

Leave a Comment