ಮಹಿಳೆಯರಿಗೆ ಸಿಗಲಿದೆ 11,000 ರೂ. ಹೇಗೆ ಪಡೆಯುವ ಇಲ್ಲಿದೆ ಮಾಹಿತಿ | PM Matru Vandana Yojana Application

WhatsApp Group Join Now
Telegram Group Join Now

PM Matru Vandana Yojana Application: ಭಾರತದಲ್ಲಿ ಮಹಿಳೆಯರ ಕಲ್ಯಾಣಕ್ಕಾಗಿ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳು ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದು. ಅದರಲ್ಲಿ ಒಂದಾದ ಪ್ರಧಾನಮಂತ್ರಿ ಮಾತೃ ವಂದನಾ ಯೋಜನೆಯೂ ಒಂದಾಗಿದೆ. ಭಾರತ ಸರ್ಕಾರವು ಈ ಯೋಜನೆಯಡಿಯಲ್ಲಿ ಮಹಿಳೆಯರಿಗೆ 11,000 ರೂ. ಆರ್ಥಿಕ ಸಹಾಯಧನ ನೀಡುತ್ತದೆ. ಈ ಹಣ ನೇರವಾಗಿ ಅರ್ಜಿದಾರರ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತದೆ.

ದೇಶದಲ್ಲಿ ಆರ್ಥಿಕವಾಗಿ ಹಿಂದುಳಿದಿರುವ ಕುಟುಂಬಗಳ ಗರ್ಭಿಣಿ ಮಹಿಳೆಯರು ಈ ಆರ್ಥಿಕ ಸಹಾಯಧನದ ಲಾಭವನ್ನು ಪಡೆಯಬಹುದು. ಈ ಯೋಜನೆಯನ್ನು ಸರ್ಕಾರವು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಡಿ ನೀಡುತ್ತದೆ.

PM Matru Vandana Yojana Application

ಈ ಯೋಜನೆಯ ಮುಖ್ಯ ಉದ್ದೇಶ?
ಮುಖ್ಯವಾಗಿ ಪ್ರಧಾನ ಮಂತ್ರಿ ಮಾತೃ ವಂದನಾ ಯೋಜನೆಯನ್ನು ನಿರ್ದಿಷ್ಟವಾಗಿ ಗರ್ಭಿಣಿ ಕಾರ್ಮಿಕರಿಗಾಗಿ ಉದ್ದೇಶಿಸಲಾಗಿದೆ. ಮಹಿಳೆಯರು ಗರ್ಭಾವಸ್ಥೆಯಲ್ಲಿ ವೇತನದ ನಷ್ಟವನ್ನು ಎದುರಿಸುತ್ತಾರೆ. ಈ ಯೋಜನೆಯ ಮೂಲಕ ಲಭಿಸುವ ಆರ್ಥಿಕ ಸಹಾಯಧನದಿಂದ ಗರ್ಭಿಣಿಯರು ತಮ್ಮ ಪೌಷ್ಟಿಕಾಂಶ ಕೊರತೆಯನ್ನು
ಪೂರೈಸಿಕೊಳ್ಳಬಹುದು. ಮತ್ತು ನವಜಾತ ಶಿಶುವಿಗೆ ಉತ್ತಮ ಆರೋಗ್ಯ ಒದಗಿಸುವುದು ಈ ಯೋಜನೆಯ ಪ್ರಮುಖ ಉದ್ದೇಶವಾಗಿದೆ.

ಇದನ್ನೂ ಓದಿ: ಪೋಸ್ಟ್ ಆಫೀಸ್ ನಲ್ಲಿ ಹೂಡಿಕೆ ಮಾಡಿದ್ರೆ ಸಾಕು 10 ಲಕ್ಷ ರೂ. ರಿಟರ್ನ್ ಸಿಗುತ್ತೆ!

ಈ ಯೋಜನೆಯಡಿ ಒಟ್ಟು 11,000 ರೂ. ಆರ್ಥಿಕ ನೆರವು ನೀಡಲಾಗುತ್ತದೆ. ಈ ಯೋಜನೆಯು ಭಾರತದಾದ್ಯಂತ ಜಾರಿಯಲ್ಲಿದೆ. ಈ ಯೋಜನೆಯಡಿ ಮಹಿಳೆಯರಿಗೆ, ಹೆರಿಗೆಗೆ ಸಂಬಂಧಿಸಿದ ಎಲ್ಲಾ ರೀತಿಯ ಸುರಕ್ಷತೆ ಮತ್ತು ಮುನ್ನೆಚ್ಚರಿಕೆ ಕುರಿತು ಮಾಹಿತಿ ನೀಡಲಾಗುತ್ತದೆ. ಇದರಿಂದ ಮಹಿಳೆಯರು ಆರೋಗ್ಯಕರ ರೀತಿಯಲ್ಲಿ ಹೆರಿಗೆಯನ್ನು ಪೂರ್ಣಗೊಳಿಸಬಹುದು.

ಈ ಯೋಜನೆಯಡಿ ಗರ್ಭಿಣಿ ಮಹಿಳೆಯರು ಮತ್ತು ಬಾಣಂತಿಯರಿಗೆ ಮೊದಲ ಗರ್ಭಾವಸ್ಥೆಯಲ್ಲಿ 5000 ರೂ. ಸಹಾಯಧನ ನೀಡಲಾಗುತ್ತದೆ. ಹಾಗೂ ಎರಡನೇ ಹೆಣ್ಣು ಮಗುವಿನ ಜನನದ ಸಂದರ್ಭದಲ್ಲಿ ₹6000 ಆರ್ಥಿಕ ನೆರವು ನೀಡಲಾಗುವುದು. ಈ ಆರ್ಥಿಕ ಸಹಾಯ ಪಡೆಯಲು ಆನ್‌ಲೈನ್ ಅಥವಾ ಆಫ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

ಯೋಜನೆ ಪಡೆಯಲು ಅರ್ಹತೆ:
ಭಾರತದ ನಾಗರಿಕರು ಮಾತ್ರ ಅರ್ಹರು.
ಗರ್ಭಿಣಿಯರು 19 ವರ್ಷ ಮತ್ತು ಮೇಲ್ಪಟ್ಟವರಾಗಿರಬೇಕು.
ಗರಿಷ್ಠ ಎರಡು ಮಕ್ಕಳ ಜನನದ ಸಂದರ್ಭದಲ್ಲಿ ಮಾತ್ರ ಈ ಯೋಜನೆ ಪ್ರಯೋಜನ ಪಡೆಯಬಹುದು.

ಇದನ್ನೂ ಓದಿ: PUC ಪಾಸಾದ ವಿದ್ಯಾರ್ಥಿಗಳಿಗೆ ಕೋಟಕ್ ಮಹೀಂದ್ರಾ ಬ್ಯಾಂಕ್ ವತಿಯಿಂದ 1.5 ಲಕ್ಷ ವಿದ್ಯಾರ್ಥಿವೇತನ 

ಈ ಯೋಜನೆಗೆ ಅರ್ಜಿ ಸಲ್ಲಿಸಲು ಅಗತ್ಯ ದಾಖಲೆಗಳು:
ಆಧಾರ್ ಕಾರ್ಡ್,
ಮಗುವಿನ ಜನನ ಪ್ರಮಾಣಪತ್ರ,
ಪ್ಯಾನ್ ಕಾರ್ಡ್,
ವಿಳಾಸ ಪುರಾವೆ,
ಆದಾಯ ಪ್ರಮಾಣಪತ್ರ,
ಮೊಬೈಲ್ ಸಂಖ್ಯೆ,
ಪಾಸ್‌ಪೋರ್ಟ್ ಗಾತ್ರದ ಪೋಟೋ,
ಬ್ಯಾಂಕ್ ಪಾಸ್ ಬುಕ್
ಅಂಗನವಾಡಿ ಕೇಂದ್ರದಲ್ಲಿ ಅರ್ಜಿ ನಮೂನೆ ಪಡೆಯಿರಿ.

PM Matru Vandana Yojana Application ಅರ್ಜಿ ಸಲ್ಲಿಸುವ ವಿಧಾನ:
ಗರ್ಭಿಣಿ ಮಹಿಳೆಯರು ತಮ್ಮ ಸಮೀಪದ ಆರೋಗ್ಯ ಕೇಂದ್ರಕ್ಕೆ ಅಥವಾ ಅಂಗನವಾಡಿ ಕೇಂದ್ರಗಳಿಗೆ ಭೇಟಿ ನೀಡಿ ನಿಮ್ಮ ಗರ್ಭಿಣಿ ಮೆಡಿಕಲ್ ಸರ್ಟಿಫಿಕೇಟ್ ನೀಡಿ ನೋಂದಣಿ ಮಾಡಿಕೊಳ್ಳಬಹುದು.

ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸ: pmmvy.wcd.gov.in

ಇದನ್ನೂ ಓದಿ: PUC ಪಾಸಾದ ವಿದ್ಯಾರ್ಥಿಗಳಿಗೆ ಕೇಂದ್ರ ಸರ್ಕಾರದಿಂದ 20,000 ರೂ. ಸ್ಕಾಲರ್‌ಶಿಪ್‌

WhatsApp Group Join Now
Telegram Group Join Now

Leave a Comment