ಸರ್ಕಾರದಿಂದ ಸಿಗಲಿದೆ 15,000 ರೂ. ಜೊತೆಗೆ 3 ಲಕ್ಷ ರೂ. ಸಾಲ ಸೌಲಭ್ಯ | PM Vishwakarma Yojana

WhatsApp Group Join Now
Telegram Group Join Now

ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರಗಳು ಒಂದಲ್ಲ ಒಂದು ಹೊಸ ಯೋಜನೆಯನ್ನು ಜಾರಿಗೆ ತರುತ್ತವೆ. ಹಾಗೆಯೇ ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆ (Gruha Lakshmi), ಗ್ರಹ ಜ್ಯೋತಿ ಯೋಜನೆ ಇರಬಹುದು. ಹಾಗೆಯೇ ಕೇಂದ್ರ ಸರ್ಕಾರ ಜಾರಿಗೆ ತಂದಿರುವಂತಹ ವಿಶ್ವಕರ್ಮ ಯೋಜನೆಯು ಸಹ ಒಂದಾಗಿದೆ. ಈ ಯೋಜನೆಯ ಲಾಭವನ್ನು ಪಡೆದುಕೊಳ್ಳುವಂತಹ ಅವಕಾಶ ನಿಮ್ಮದಾಗಿದೆ.

PM Vishwakarma Yojana:

ಗ್ರಾಮೀಣ ಪ್ರದೇಶಗಳ ಸಾಂಪ್ರದಾಯಿಕ ಕರಕುಶಲ ಮತ್ತು ಕುಶಲಕರ್ಮಿಗಳಿಗೆ ಬೆಂಬಲ ನೀಡುವ ಸಲುವಾಗಿ ಕೇಂದ್ರ ಸರ್ಕಾರ 2023 ಸೆಪ್ಟೆಂಬರ್ ತಿಂಗಳಿನಲ್ಲಿ ಪ್ರಾರಂಭಿಸಲಾದ ವಿಶ್ವಕರ್ಮ ಯೋಜನೆ (PM Vishwakarma Yojana) ಅಡಿಯಲ್ಲಿ ಕುಶಲಕರ್ಮಿಗಳಿಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಅವರಿಗೆ ಆರ್ಥಿಕ ಸಹಾಯವನ್ನು ನೀಡುವುದಲ್ಲದೆ. ಅವರ ಕ್ಷೇತ್ರದ ಕೆಲಸದಲ್ಲಿ ಇನ್ನಷ್ಟು ಉತ್ತಮ ತರಬೇತಿಯನ್ನು ನೀಡುವಂತಹ ಕೆಲಸವನ್ನು ಈ ವಿಶ್ವಕರ್ಮ ಯೋಜನೆ ಅಡಿಯಲ್ಲಿ ಕೇಂದ್ರ ಸರ್ಕಾರ ಯೋಜನೆಯನ್ನು ಆರಂಭಿಸಿದೆ.

ವಿಶ್ವಕರ್ಮ ಯೋಜನೆಯ (PM Vishwakarma Yojana) ಅಡಿಯಲ್ಲಿ 18 ವಲಯದಲ್ಲಿ ಕುಶಲಕರ್ಮಿಗಳಿಗೆ 7 ರಿಂದ 15 ದಿನಗಳ ಕಾಲ ತರಬೇತಿಯನ್ನು ನೀಡಿದ ನಂತರ 15,000 ರೂ. ಪ್ರೋತ್ಸಾಹಧನ ಸಹ ನೀಡಲಾಗುತ್ತದೆ. PM Vishwakarma ಉದ್ಯೋಗ ಪ್ರಮಾಣ ಪತ್ರ ಪಡೆದ ಅಭ್ಯರ್ಥಿಗಳಿಗೆ ಸಹಾಯ ಧನ ಮಾತ್ರವಲ್ಲದೆ 3 ಲಕ್ಷ ರೂಪಾಯಿಗಳವರೆಗೆ ಸಾಲ (Loan) ಸೌಲಭ್ಯವನ್ನು ಸಹ ಪಡೆಯಬಹುದು. ಈ ಸಾಲ ಸೌಲಭ್ಯವನ್ನು ಪ್ರತಿಶತ 5℅ ರ ಬಡ್ಡಿ ದರದಲ್ಲಿ ಸರ್ಕಾರ ಈ ಯೋಜನೆ ಅಡಿಯಲ್ಲಿ ಕುಶಲಕರ್ಮಿಗಳು ತಮ್ಮದೇ ಆದಂತಹ ಸ್ವಂತ ಉದ್ಯಮವನ್ನು ಪ್ರಾರಂಭಿಸುವವರು ಸಾಲ ಪಡೆಯಬಹುದು.

ಯೋಜನೆ ಅರ್ಜಿ ಸಲ್ಲಿಸಲು ಅರ್ಹತೆಗಳು:
18 ವರ್ಷಕ್ಕಿಂತ ಹೆಚ್ಚಿನ ವಯಸ್ಸಿನ ವ್ಯಕ್ತಿಗಳು ಕುಶಲಕರ್ಮಿ ಕೆಲಸದಲ್ಲಿ ತೊಡಗಿರಬೇಕು.
ರೇಷನ್ ಕಾರ್ಡ್ (Ration Card) ಹೊಂದಿರಬೇಕು.
ವಾರ್ಷಿಕ ಆದಾಯ 2.5 ಲಕ್ಷ ರೂ. ಗಿಂತ ಕಡಿಮೆ ಇರಬೇಕು.
ಕುಟುಂಬದಲ್ಲಿ ಸದಸ್ಯರು ಸರ್ಕಾರಿ ಹುದ್ದೆಯಲ್ಲಿ ಇರಬಾರದು.

ಬೇಕಾಗುವ ದಾಖಲೆಗಳು:
ರೇಷನ್ ಕಾರ್ಡ್
ಬ್ಯಾಂಕ್ ಪಾಸ್ ಬುಕ್
ಪಾಸ್ಪೋರ್ಟ್ ಸೈಜ್ ಫೋಟೋ
ಆಧಾರ್ ಕಾರ್ಡ್
ಮೊಬೈಲ್ ನಂಬರ್
ನಿಮ್ಮ ಉದ್ಯೋಗ ಪ್ರಮಾಣ ಪತ್ರ

ಅರ್ಹ ಮತ್ತು ಆಸಕ್ತರು ವಿಶ್ವಕರ್ಮ ಪೋರ್ಟಲ್ pmvishwakarma.gov.in ವೆಬ್‌ಸೈಟ್ ವಿಳಾಸ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು. ಅಥವಾ ನಿಮ್ಮ ಹತ್ತಿರದ ಸೇವಾ ಕೇಂದ್ರಗಳಿಗೆ ಹೋಗಿ ನೀವು ಈ ಎಲ್ಲ ಮಾಹಿತಿಗಳನ್ನು ತುಂಬಿಸುವ ಮತ್ತು ಅಗತ್ಯ ದಾಖಲೆಗಳನ್ನು ನೀಡುವ ಮೂಲಕ ಯೋಜನೆಗೆ ಅರ್ಜಿ ಸಲ್ಲಿಸಬಹುದಾಗಿದೆ.

Leave a Comment

WhatsApp

Join Now Latest UpDates

Join Now Latest Job And Scheme UpDates News Belagavi

Powered by Webpresshub.net