ಪೋಸ್ಟ್ ಆಫೀಸ್ ನಲ್ಲಿ ಹೂಡಿಕೆ ಮಾಡಿದ್ರೆ ಸಾಕು 10 ಲಕ್ಷ ರೂ. ರಿಟರ್ನ್ ಸಿಗುತ್ತೆ! | Post office Investment Scheme

WhatsApp Group Join Now
Telegram Group Join Now

Post office Investment Scheme: ಕೆಲವು ಜನ ಎಷ್ಟು ದುಡಿಮೆ ಮಾಡಿದರು ಎಲ್ಲಿ ಹಣ ಹೂಡಿಕೆ ಮಾಡಬೇಕು ಎಂಬ ಸ್ಪಷ್ಟನೆ ಇರುವುದಿಲ್ಲ. ದೊಡ್ಡ ಮೊತ್ತದ ಹಣ ಇರುತ್ತದೆ, ಆದರೆ ಅದನ್ನು ಎಲ್ಲಿ ಯಾವ ಯೋಜನೆಯಲ್ಲಿ ಹೂಡಿಕೆ ಮಾಡಬೇಕು ಅಂತ ಕೆಲವರಿಗೆ ಸ್ಪಷ್ಟನೆ ಇರುವುದಿಲ್ಲ. ಹಾಗಾದರೆ ಇಲ್ಲಿದೆ ನೋಡಿ ನೀವು ಪೋಸ್ಟ್ ಆಫೀಸ್‌ನಲ್ಲಿ ಹಲವು ಉತ್ತಮ ಯೋಜನೆಗಳಲ್ಲಿ ಹೂಡಿಕೆ ಮಾಡಬಹುದು.

Post office Investment Scheme:

ಹಾಗಾದರೆ ನೀವು ಸಹ ದೀರ್ಘಾವಧಿಯ ಹೂಡಿಕೆಯ ಉತ್ತಮ ಆಯ್ಕೆಯನ್ನು ಹುಡುಕುತ್ತಿದ್ದಿರಾ? ನೀವು ಖಾತರಿ ಆದಾಯ ಪಡೆಯಲು ಬಯಸಿದರೆ, ನೀವು ಅಂಚೆ ಇಲಾಖೆಯ ಅನೇಕ ಉತ್ತಮ ಯೋಜನೆಗಳನ್ನು ನೋಡಬಹುದು. ಅದರಲ್ಲಿ ಕಿಸಾನ್ ವಿಕಾಸ್ ಪತ್ರವೂ (ಕೆವಿಪಿ) ಸಹ ಒಂದಾಗಿದೆ. ಇದನ್ನು ದೀರ್ಘಾವಧಿಯ ಆರ್ಥಿಕ ಉಳಿತಾಯವನ್ನು ಉತ್ತೇಜಿಸುವ ಉದ್ದೇಶದಿಂದ ಸರ್ಕಾರ (ಪೋಸ್ಟ್ ಆಫೀಸ್) 1988 ರಲ್ಲಿ ಪ್ರಾರಂಭಿಸಿದೆ.

ಪ್ರಾರಂಭದಲ್ಲಿ ಈ ಯೋಜನೆಯಡಿ ರೈತರು ಮಾತ್ರವೇ ಹೂಡಿಕೆ ಮಾಡಬಹುದಿತ್ತು, ಆದರೆ ಈಗ ಈ ಯೋಜನೆಯಲ್ಲಿ ಭಾರತೀಯ ಎಲ್ಲ ಪ್ರಜೆಗಳು ಹಣ ಹೂಡಿಕೆ ಮಾಡಬಹುದಾಗಿದೆ. ಪ್ರಸ್ತುತ, ಈ ಯೋಜನೆಯಲ್ಲಿ 7.5 % ರಷ್ಟು ಬಡ್ಡಿದರ ನೀಡಲಾಗುತ್ತಿದೆ.

ನೀವು ಕಿಸಾನ್ ವಿಕಾಸ್ ಪತ್ರವೂ (KVP) ಯೋಜನೆಯಲ್ಲಿ ನಿಮ್ಮ ಹಣದ ಹೂಡಿಕೆಯನ್ನು 115 ತಿಂಗಳುಗಳಲ್ಲಿ ದ್ವಿಗುಣ ಹಣ ರಿಟರ್ನ್ ಪಡೆಯಬಹುದು. ಅಂದರೆ 9 ವರ್ಷ 7 ತಿಂಗಳಲ್ಲಿ ನಿಮ್ಮ ಹಣ ದ್ವಿಗುಣಗೊಳಿಸುವ ಖಾತರಿ ನೀಡುತ್ತದೆ. ಈ ಯೋಜನೆಯಡಿ ನೀವು 5 ಲಕ್ಷ ರೂ. ಯನ್ನು ಹೂಡಿಕೆ ಮಾಡಿದರೆ, 9 ವರ್ಷ 7 ತಿಂಗಳ ನಂತರ ನಿಮ್ಮಗೆ 10 ಲಕ್ಷ ರೂ. ಭಾರಿ ಮೊತ್ತದ ರಿಟರ್ನ್ ಸಿಗುತ್ತದೆ.

Post office Investment Scheme: ಹೌದು ಕಿಸಾನ್ ವಿಕಾಸ್ ಪತ್ರವೂ ಕೆವಿಪಿ ಯೋಜನೆಯಲ್ಲಿ ಹೂಡಿಕೆಯನ್ನು ಕೇವಲ 1000 ರೂ. ಗಳಿಂದ ಆರಂಭಿಸಬಹುದು. ಗರಿಷ್ಠ ಹೂಡಿಕೆ ಮಾಡಲು ಯಾವುದೇ ರೀತಿಯ ಮಿತಿ ಇರುವುದಿಲ್ಲ. ಆದರೆ ನೀವು 50,000 ರೂ. ಗಿಂತ ಹೆಚ್ಚು ಹಣವನ್ನು ಹೂಡಿಕೆ ಮಾಡಬೇಕಾದರೆ, ನಿಮ್ಮ ಪ್ಯಾನ್ ಕಾರ್ಡ್ ನೀಡುವುದು ಕಡ್ಡಾಯವಾಗಿದೆ.

ಇದನ್ನೂ ಓದಿ: ಕರ್ನಾಟಕ ವಿಧಾನ ಸಭೆ ಸಚಿವಾಲಯದಲ್ಲಿ ಉದ್ಯೋಗ 1,12,900 ರೂ. ವೇತನ

ಕಿಸಾನ್ ವಿಕಾಸ್ ಪತ್ರವು (KVP) ಪೋಸ್ಟ್ ಆಫೀಸ್ ಉತ್ತಮ ಯೋಜನೆಯಾಗಿದೆ. ಈ ಯೋಜನೆಯಡಿ ಹೂಡಿಕೆ ಮಾಡಲು ನಿಮ್ಮಗೆ 18 ವರ್ಷ ತುಂಬಿರಬೇಕು. ಈ ಯೋಜನೆಯಡಿ ಏಕ ಮತ್ತು ಜಂಟಿ ಎರಡು ಖಾತೆಗಳನ್ನು ತೆರೆಯಬಹುದು. ಇದಲ್ಲದೆ, 10 ವರ್ಷಕ್ಕಿಂತ ಮೇಲ್ಪಟ್ಟ ಮಗುವಿನ ಹೆಸರಿನಲ್ಲಿ ಸಹ ಕಿಸಾನ್ ವಿಕಾಸ್ ಪತ್ರವನ್ನು ಹೂಡಿಕೆ ಮಾಡಬಹುದು.

ಅಪ್ರಾಪ್ತ ವಯಸಿ ಅಥವಾ ಅಸ್ವಸ್ಥ ಮನಸ್ಸಿನ ವ್ಯಕ್ತಿಯ ಪರವಾಗಿ ಬೇರೆಯವರ ಹೆಸರಿನಲ್ಲಿ ಸಹ ಖಾತೆಯನ್ನು ತೆರೆಯಬಹುದು. ಖಾತೆಯನ್ನು ತೆರೆಯಲು, ಆಧಾರ್ ಕಾರ್ಡ್, ವಯಸ್ಸಿನ ಪ್ರಮಾಣಪತ್ರ, ಪಾಸ್‌ಪೋರ್ಟ್ ಅಳತೆ ಪೋಟೋ, ಹಾಗೂ ಮುಂತಾದ ದಾಖಲೆಗಳು ಸಲ್ಲಿಸಬೇಕು.

ಕೆವಿಪಿ ಖಾತೆಯಲ್ಲಿ ಹಣವನ್ನು ಠೇವಣಿ ಮಾಡಿದ ದಿನಾಂಕದ 2. 5 ವರ್ಷ ನಂತರ ಅವಧಿಗೂ ಮೊದಲು ಹಣವನ್ನು ಹಿಂಪಡೆಯಬಹುದು. ಆದರೆ ಪ್ರೀ-ಮೆಚ್ಯೂರ್ ಠೇವಣಿಗಳನ್ನು ಖಾತೆದಾರರ ಮರಣದ ಸಂದರ್ಭದಲ್ಲಿ ಆದೇಶದ ಮಾತ್ರ ಮೇರೆಗೆ ಹಿಂಪಡೆಯಬಹುದು.

ಇದನ್ನೂ ಓದಿ: PUC ಪಾಸಾದ ವಿದ್ಯಾರ್ಥಿಗಳಿಗೆ ಕೇಂದ್ರ ಸರ್ಕಾರದಿಂದ 20,000 ರೂ. ಸ್ಕಾಲರ್‌ಶಿಪ್‌ 

Leave a Comment

WhatsApp

Join Now Latest UpDates

Join Now Latest Job And Scheme UpDates News Belagavi

Powered by Webpresshub.net