ಪೋಸ್ಟ್​ ಆಫೀಸ್​ ಯೋಜನೆಯಡಿ 10 ವರ್ಷಗಳ ನಂತರ 8 ಲಕ್ಷ ರೂಪಾಯಿಗಳ ಆದಾಯ ರಿಟರ್ನ್ | Post Office Scheme Invest 100 Rupees Return 8 Lakh After 10 years

WhatsApp Group Join Now
Telegram Group Join Now

Post Office Scheme Invest 100 Rupees Return 8 Lakh After 10 years: ಪೋಸ್ಟ್ ಆಫೀಸ್ (Post Office Scheme) ನ ಹಲವಾರು ಯೋಜನೆಗಳು ಈಗಾಗಲೇ ಜಾರಿಯಲ್ಲಿವೆ, ಇದರಲ್ಲಿ ಹೂಡಿಕೆ ಮಾಡುವುದು ಅನೇಕ ಪ್ರಯೋಜನಗಳನ್ನು ನೋಡಬಹುದು. ಸಾಮಾನ್ಯ ಮತ್ತು ಬಡ ಜನರಿಗೆ ಸುರಕ್ಷಿತ ಹೂಡಿಕೆಯ ಜೊತೆ ಜೊತೆಗೆ ಉತ್ತಮ ಆದಾಯವನ್ನು (Profit) ಪಡೆಯಲ್ಲು ಪೋಸ್ಟ್ ಆಫೀಸ್ ಸ್ಕೀಮ್‌ಗಳು ಉತ್ತಮವಾಗಿದೆ. ಸರಕಾರ ಸಹ ಪೋಸ್ಟ್ ಆಫೀಸ್ ಯೋಜನೆಗಳಿಗೆ ಬೆಂಬಲವನ್ನೊದಗಿಸುತ್ತಿದ್ದೆ.

ಜನರು ಎಲ್ಲೆಲ್ಲೋ ಹಣ ಹೂಡಿಕೆ ಮಾಡುವುದರ ಬದಲಾಗಿ ಪೋಸ್ಟ್ ಆಫೀಸ್ ಯೋಜನೆಗಳಲ್ಲಿ ಧೈರ್ಯವಾಗಿ ಹೂಡಿಕೆ ಮಾಡಬಹುದಾಗಿದೆ. ಈ ಯೋಜನೆಯ ಮುಕ್ತಾಯ ಅವಧಿಯು 5 ವರ್ಷಗಳಾಗಿದೆ. ಈ ಯೋಜನೆಯಡಿ ಆರ್‌ಡಿಯನ್ನು ಅಪ್ರಾಪ್ತರ ಹೆಸರಿನಲ್ಲಿ ಖಾತೆ ತೆರೆಯಬಹುದು. ಇದರಲ್ಲಿ, ಪೋಷಕರು ತಮ್ಮ ಹೆಸರನ್ನು ದಾಖಲೆಗಳೊಂದಿಗೆ ನೀಡಬೇಕಾಗುತ್ತದೆ.

ಅಂಚೆ ಕಛೇರಿಯ ಸಣ್ಣ ಉಳಿತಾಯ ಯೋಜನೆಯಡಿ ಎಲ್ಲರೂ ಸುಲಭವಾಗಿ ಹೂಡಿಕೆ ಪ್ರಾರಂಭಿಸಬಹುದು. ಇದು ಹೆಚ್ಚು ಸುರಕ್ಷಿತ ಆಗಿರುತ್ತದೆ, ಜೊತೆಯಲ್ಲಿ ಉತ್ತಮ ರಿಟರ್ನ್ ನೀಡಲಿದೆ. ಪೋಸ್ಟ್ ಆಫೀಸ್ ರಿಕರಿಂಗ್ ಡೆಪಾಸಿಟ್(ಆರ್‌ಡಿ) ಸ್ಕೀಮ್ ಅಡಿಯಲ್ಲಿ 10 ವರ್ಷಗಳ ನಂತರ ನೀವು 8 ಲಕ್ಷ ರೂ. ಗಳನ್ನು ಹೇಗೆ ಪಡೆಯಬಹುದು ಮತ್ತು ಇದಕ್ಕಾಗಿ ನೀವು ಎಷ್ಟು ಹೂಡಿಕೆ ಮಾಡಬೇಕು ಎಂಬುದನ್ನು ಕೆಳಗಿನ ಲೇಖನದಲ್ಲಿ ಮಾಹಿತಿ ನೀಡುತ್ತಿದ್ದೇವೆ.

ಪೋಸ್ಟ್ ಆಫೀಸ್ ರಿಕರಿಂಗ್ ಡೆಪಾಸಿಟ್(ಆರ್‌ಡಿ) ಸ್ಕೀಮ್ ಮೆಚ್ಯೂರಿಟಿ ಅವಧಿಯನ್ನು 5 ವರ್ಷ ಆಗಿರುತ್ತದೆ. ತಾವು ಇದನ್ನು 10 ವರ್ಷಗಳ ಅವಧಿಯವರೆಗೆ ವಿಸ್ತರಿಸಬಹುದು. ಇಲ್ಲಿ ಹೂಡಿಕೆ ಮಾಡುವುದರಿಂದ ಶೇ.6.7% ರಷ್ಟು ಬಡ್ಡಿ ಪಡೆಯಬಹುದು. ಈ ಯೋಜನೆ ಲಾಭದಾಯಕ ಹಾಗೂ ಅಷ್ಟೇ ಸುರಕ್ಷಿತ ಯೋಜನೆಯಾಗಿದೆ ಉಳಿತಾಯಕ್ಕೆ ಪ್ರಯೋಜನಕಾರಿಯಾಗಲಿದೆ.

ಇದನ್ನೂ ಓದಿ: ಪಿಎಂ ಕಿಸಾನ್‌ 18ನೇ ಕಂತಿನ ಹಣ ಪಡೆಯಲು ಈ ಕೆಲಸ ಮಾಡುವುದು ಕಡ್ಡಾಯ? 

ಈ ಯೋಜನೆಯಡಿ ಕನಿಷ್ಟ ಎಷ್ಟು ಹಣ ಹೂಡಿಕೆ ಮಾಡಬಹುದು.?
ಪೋಸ್ಟ್ ಆಫೀಸ್ ನ ಈ ಯೋಜನೆಯಡಿ ಹೂಡಿಕೆಯನ್ನು 100 ರೂ. ರಿಂದ ಆರಂಭಿಸಬಹುದು, ಆದರೆ ಗರಿಷ್ಠ ಹೂಡಿಕೆ ಮಾಡಲು ಯಾವುದೇ ಮಿತಿಯನ್ನು ನಿಗದಿ ಇರುವುದಿಲ್ಲ.

ನೀವು 12 ಕಂತುಗಳನ್ನು ನಿರಂತರವಾಗಿ ಠೇವಣಿ ಮಾಡಿದರೆ ಈ ಯೋಜನೆಯಲ್ಲಿ ಸಾಲವನ್ನು ಸಹ ಪಡೆಯಬಹುದು. ಒಂದು ವರ್ಷದ ನಂತರ, ನಿಮ್ಮ ಖಾತೆಯಲ್ಲಿ ಠೇವಣಿಯಾದ ಮೊತ್ತದ ಶೇ 50 ಪ್ರತಿಶತದವರೆಗೆ ನೀವು ಸಾಲವನ್ನು ತೆಗೆದುಕೊಳ್ಳಬಹುದು.

ಅಂಚೆ ಕಚೇರಿ ಮರುಕಳಿಸುವ ಠೇವಣಿ ಯೋಜನೆಯಡಿ ಪ್ರತಿ ತಿಂಗಳು 5 ಸಾವಿರ ರೂ. ಆರ್‌ಡಿ ಖಾತೆಗೆ ಜಮೆ ಮಾಡಿದರೆ, ಅದರ ಮೆಚ್ಯೂರಿಟಿ ಅವಧಿಯ ಐದು ವರ್ಷಗಳಲ್ಲಿ, ನೀವು ಒಟ್ಟು 3 ಲಕ್ಷ ರೂ.ಗಳನ್ನು ಠೇವಣಿ ಮಾಡುತ್ತೀರಿ ಇದಕ್ಕೆ ಪ್ರತಿಯಾಗಿ ನಿಮಗೆ ಶೇ 6.7 % ರಷ್ಟು ಬಡ್ಡಿ ಸೇರಿಸಿ 56,830 ರಷ್ಟು ನೀಡಲಾಗುತ್ತದೆ.

ಇದನ್ನೂ ಓದಿ: ಗೃಹಲಕ್ಷ್ಮಿ ಹಣ ಬಿಡುಗಡೆ ಬಗ್ಗೆ ಹೊಸ ಅಪ್‌ಡೇಟ್‌! 

10 ವರ್ಷಗಳಲ್ಲಿ ಮೊತ್ತ ಎಷ್ಟಾಗುತ್ತದೆ?
ಇದರ ನಂತರ, ನಿಮ್ಮ ಹೂಡಿಕೆ ಒಟ್ಟು ಮೊತ್ತ 3,56,830 ರೂ. ಆಗುತ್ತದೆ. ಈಗ ನೀವು ಈ ಖಾತೆಯನ್ನು ಮತ್ತೆ 5 ವರ್ಷಗಳವರೆಗೆ ವಿಸ್ತರಿಸಿದರೆ, ಆಗ 10 ವರ್ಷಗಳಲ್ಲಿ ನೀವು ಠೇವಣಿ ಮಾಡಿದ ಮೊತ್ತವು 6,00,000 ರೂ.ಗೆ ತಲುಪುತ್ತದೆ.

ಈ ಒಟ್ಟು ಹೂಡಿಕೆ ಹಣಕ್ಕೆ ಶೇಕಡಾ 6.7% ದರದಲ್ಲಿ ಈ ಠೇವಣಿಯ ಪ್ರತಿಯಾಗಿ ಬಡ್ಡಿ ಮೊತ್ತವು 2,54,272 ರೂ. ಆಗುತ್ತದೆ. ಆಗ 10 ವರ್ಷಗಳ ಅವಧಿಯಲ್ಲಿ ನಿಮ್ಮ ಒಟ್ಟು ನಿಧಿಯು 8,54,272 ರೂ ಆಗಿರುತ್ತದೆ.

ಖಾತೆ ಹೇಗೆ ತೆರೆಯುವುದು?
ಆಸಕ್ತರು ನಿಮ್ಮ ಹತ್ತಿರದ ಅಂಚೆ ಕಚೇರಿಗೆ ಭೇಟಿ ನೀಡುವ ಮೂಲಕ ಪೋಸ್ಟ್ ಆಫೀಸ್ ಮರುಕಳಿಸುವ ಠೇವಣಿ ಯೋಜನೆಯಡಿ ಖಾತೆಯನ್ನು ತೆರೆದು ಹೂಡಿಕೆಯನ್ನು ಆರಂಭಿಸಬಹುದು.

ಇದನ್ನೂ ಓದಿ: ಕೃಷಿ ಇಲಾಖೆಯಿಂದ ವಿವಿಧ ಸಬ್ಸಿಡಿ ಯೋಜನೆ ಅರ್ಜಿ ಆಹ್ವಾನ

WhatsApp Group Join Now
Telegram Group Join Now

Leave a Comment