Post Office Students Scholorship: ಭಾರತೀಯ ಅಂಚೆ ಇಲಾಖೆಯ ವತಿಯಿಂದ 6 ರಿಂದ 9ನೇ ತರಗತಿಗಳಲ್ಲಿ ಓದುತ್ತಿರುವ ಶಾಲಾ ಮಕ್ಕಳಲ್ಲಿ ‘ಫಿಲಾಟೆಲಿ’ (ಅಂಚೆ ಚೀಟಿ ಸಂಗ್ರಹಣೆ) ಬಗ್ಗೆ ಹವ್ಯಾಸವನ್ನು ಉತ್ತೇಜಿಸುವ ಸಲುವಾಗಿ ‘ದೀನ್ ದಯಾಳ್ ಸ್ಪರ್ಶ್ ಯೋಜನೆ’ಯಡಿ (Deen Dayal SPARSH Yojana) ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಲು ಅರ್ಜಿ ಆಹ್ಪಾನಿಸಲಾಗಿದೆ.
2023-24 ರ ವಾರ್ಷಿಕ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ಶೇ.60ಕ್ಕಿಂತ ಹೆಚ್ಚು ಅಂಕಗಳನ್ನು ಪಡೆದಿರಬೇಕು. ಹಾಗೂ ಫಿಲಾಟೆಲಿ ಕ್ಲಬ್ ಸದಸ್ಯರು ಆಗಿರಬೇಕು ಅಥವಾ ವಿದ್ಯಾರ್ಥಿಗಳು ತನ್ನದೇ ಆದ ಅಂಚೆ ಚೀಟಿಯ ಸಂಗ್ರಹ ಖಾತೆಯನ್ನು ಹೊಂದಿರಬೇಕು. ಆ ವಿದ್ಯಾರ್ಥಿಗಳು ಈ ಸ್ಕಾಲರ್ಶಿಪ್ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.
Post Office Students Scholorship ಅಂಚೆ ಇಲಾಖೆಯ ವಿದ್ಯಾರ್ಥಿವೇತನಕ್ಕೆ ಅರ್ಜಿಸಲ್ಲಿಸುವ ಶಾಲಾ ಮಕ್ಕಳಿಗೆ ಅಂಚೆ ಚೀಟಿಗಳ ಸಂಗ್ರಹ ಕುರಿತ ರಸಪ್ರಶ್ನೆ ಸ್ಪರ್ಧೆ ನಡೆಸಲಾಗುತ್ತದೆ. ಸ್ಪರ್ಧೆಯಲ್ಲಿ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಪ್ರತಿ ವರ್ಷ 6,000 ರೂ. ವಿದ್ಯಾರ್ಥಿ ವೇತನ ನೀಡಲಾಗುತ್ತದೆ.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಸೆಪ್ಟೆಂಬರ್, 03, 2024
ಅರ್ಜಿ ಸಲ್ಲಿಸುವುದು ಹೇಗೆ?
ಹೆಚ್ಚಿನ ಮಾಹಿತಿಗೆ ವೆಬ್‌ಸೈಟ್ karnatakapost.gov.in inidapost.gov.in ಗೆ ಅಥವಾ ಹತ್ತಿರದ ಅಂಚೆ ಕಚೇರಿಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು.
- ಪದವಿ ಪಾಸಾದವರಿಗೆ ಇಂಡಿಯನ್ ಬ್ಯಾಂಕ್ ನಲ್ಲಿ ಉದ್ಯೋಗ
- ಗ್ರಂಥಪಾಲಕ & ವೈಯಕ್ತಿಕ ಕಾರ್ಯದರ್ಶಿ ನೇಮಕಾತಿ
- ಪದವಿ ಪಾಸಾದವರಿಗೆ ಉಚಿತ PSI ಕೋಚಿಂಗ್