ಈ ವಿಮಾ ಯೋಜನೆಯಡಿ ನಿಮಗೆ ಸಿಗಲಿದೆ ಬರೋಬ್ಬರಿ 2,ಲಕ್ಷ ರೂ. | Pradhan Mantri Jeevan Jyoti Bima Yojana

WhatsApp Group Join Now
Telegram Group Join Now

Pradhan Mantri Jeevan Jyoti Bima Yojana:ಪ್ರಧಾನ ಮಂತ್ರಿ ಜೀವನ್ ಜ್ಯೋತಿ ಬಿಮಾ ಯೋಜನೆʼ (PMJJBY) ಕೇಂದ್ರ ಸರ್ಕಾರದ ವಿಮಾ ಯೋಜನೆಯಾಗಿದ್ದು, ಈ ಯೋಜನೆ ಜೀವ ವಿಮಾ ರಕ್ಷಣೆಯನ್ನು ನೀಡುವ ವಿಮಾ ಯೋಜನೆಯಾಗಿದೆ. ಫಲಾನುಭವಿಗಳು ಯಾವುದೇ ಕಾರಣದಿಂದ ಮರಣ ಸಂಭವಿಸಿದಲ್ಲಿ ಜೀವ ವಿಮಾ ರಕ್ಷಣೆಯನ್ನು ಒದಗಿಸಲಾಗುತ್ತದೆ.

ಏನಿದು ಯೋಜನೆ?
ʼಪ್ರಧಾನ ಮಂತ್ರಿ ಜೀವನ್ ಜ್ಯೋತಿ ಬಿಮಾ ಯೋಜನೆಯು ಒಂದು ವರ್ಷದ ಕವರ್ ಆಗಿದ್ದು, ಇದನ್ನು ಪ್ರತಿವರ್ಷವೂ ಮರು ನವೀಕರಿಸಬಹುದಾಗಿದೆ. ಈ ಯೋಜನೆಯನ್ನು ಬ್ಯಾಂಕ್‌ ಮತ್ತು ಪೋಸ್ಟ್ ಆಫೀಸ್ ಗಳಲ್ಲಿ ಖಾತೆ ತೆರೆಯಬಹುದು. ಈ ಯೋಜನೆ ಜೀವ ವಿಮಾ ಕಂಪನಿಗಳ ಮೂಲಕ ಕಾರ್ಯನಿರ್ವಹಿಸುತ್ತದೆ. ಬ್ಯಾಂಕ್ ಅಥವಾ ಪೋಸ್ಟ್ ಆಫೀಸ್ ನಲ್ಲಿ ಖಾತೆಯನ್ನು ಹೊಂದಿರುವ 18 ರಿಂದ 50 ವರ್ಷದ ಎಲ್ಲಾ ಗ್ರಾಹಕರು ಈ ಯೋಜನೆಯ ಲಾಭ ಪಡೆಯಬಹುದು.

ಯೋಜನೆಯ ಪ್ರಯೋಜನಗಳು?
ಈ ಟರ್ಮ್ ಇನ್ಶೂರೆನ್ಸ್ (Pradhan Mantri Jeevan Jyoti Bima Yojana) ಯೋಜನೆಯಡಿ 18 ರಿಂದ 50 ವರ್ಷದ ವಯೋಮಾನದ ಎಲ್ಲಾ ಗ್ರಾಹಕರಿಗೆ ರೂ. 2,00,000 ವಾರ್ಷಿಕ ಅವಧಿಯ ಜೀವ ವಿಮಾ ರಕ್ಷಣೆಯನ್ನು ಒದಗಿಸಲಾಗುತ್ತದೆ. ಪಾಲಿಸಿದಾರನ ಸಾವು ಹೇಗೆ ಸಂಭವಿಸಿದರೂ, ಈ ಟರ್ಮ್ ಇನ್ಶೂರೆನ್ಸ್ ಅದನ್ನು ಒಳಗೊಂಡಿರುತ್ತದೆ. ಈ ಯೋಜನೆಗಾಗಿ ಗ್ರಾಹಕರು ವಾರ್ಷಿಕ 436 ರೂ. ಪ್ರೀಮಿಯಂ ಹಣ ಪಾವತಿಸಬೇಕಾಗುತ್ತದೆ. ಇದನ್ನು ಅವರ ಬ್ಯಾಂಕ್ ಖಾತೆಯಿಂದ ಸ್ವಯಂ-ಡೆಬಿಟ್ ಆಗುತ್ತದೆ. ಈ ಯೋಜನೆಗಾಗಿ ಗ್ರಾಹಕರು ಬ್ಯಾಂಕ್ ಖಾತೆ ಅಥವಾ ಅಂಚೆ ಕಚೇರಿಯಲ್ಲಿ ಉಳಿತಾಯ ಖಾತೆಯನ್ನು ಹೊಂದಿರಬೇಕು.

ಯೋಜನೆಯ ಅವಧಿ:
PMJJBY ಯೋಜನೆಯಡಿಯಲ್ಲಿ ಕವರೇಜ್ ವಾರ್ಷಿಕ ಪ್ರೀಮಿಯಂ ಪಾವತಿಯ ಮೇಲೆ ಜೂನ್ 1ರಿಂದ ಮೇ 31ರವರೆಗೆ ಒಂದು ವರ್ಷದ ಅವಧಿಗೆ ಮಾನ್ಯವಾಗಿರುತ್ತದೆ. ಈ ಯೋಜನೆಯ ಪ್ರೀಮಿಯಂ ಅನ್ನು ನೀವು ಜೂನ್, ಜುಲೈ ಮತ್ತು ಆಗಸ್ಟ್‌ನಲ್ಲಿ ಈ ಕವರ್ ತೆಗೆದುಕೊಂಡರೆ, ರೂ. 436 ಪ್ರೀಮಿಯಂ ಪಾವತಿ ಮಾಡಬೇಕಾಗುತ್ತದೆ. ಹಾಗೂ ಸೆಪ್ಟೆಂಬರ್, ಅಕ್ಟೋಬರ್ ಮತ್ತು ನವೆಂಬರ್‌ ತಿಂಗಳಲ್ಲಿ ಯೋಜನೆಗೆ ಸೇರಿದರೆ ರೂ. 342 ಪ್ರೀಮಿಯಂ ಪಾವತಿಸಬೇಕಾಗುತ್ತದೆ. ಅಥವಾ ವರ್ಷದ ಕೊನೆಯಲ್ಲಿ ಅಂದರೆ ಡಿಸೆಂಬರ್, ಜನವರಿ ಮತ್ತು ಫೆಬ್ರವರಿಯಲ್ಲಿ ಯೋಜನೆಗೆ ಸೇರಿದರೆ, 114 ರೂ. ಪ್ರೀಮಿಯಂ ಪಾವತಿಸಬೇಕಾಗುತ್ತದೆ.

ಇದನ್ನೂ ಓದಿ: SBI ಬ್ಯಾಂಕ್ ವತಿಯಿಂದ 6ನೇ ತರಗತಿಯಿಂದ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ 70,000 ರೂ. ಸ್ಕಾಲರ್ಶಿಪ್

ಇದನ್ನು ನೆನಪಿನಲ್ಲಿಡಿ
ಪ್ರಥಮ ಬಾರಿಗೆ ಗ್ರಾಹಕರ ಹೆಸರು ನೋಂದಾಯಿಸುವಾಗ, ಪ್ರೀಮಿಯಂನ ಸ್ವಯಂ ಡೆಬಿಟ್ ದಿನಾಂಕದಿಂದ ಈ ಯೋಜನೆ ಪ್ರಾರಂಭವಾಗುತ್ತದೆ. ಯೋಜನೆಗೆ ಸೇರಿದ ದಿನಾಂಕದಿಂದ ಮೊದಲ 30 ದಿನಗಳಲ್ಲಿ ಸಂಭವಿಸುವ (ಅಪಘಾತದಿಂದ ಉಂಟಾಗುವ ಹೊರತುಪಡಿಸಿ) ವಿಮಾ ರಕ್ಷಣೆಯು ಲಭ್ಯವಿರುವುದಿಲ್ಲ. ಆಕಸ್ಮಿಕ ಕಾರಣಗಳಿಂದಾಗುವ ಮರಣವನ್ನು ವಿಮಾ ರಕ್ಷಣೆಯ ಮೊದಲ ದಿನದಿಂದಲೇ ರಕ್ಷಣೆ ನೀಡಲಾಗುತ್ತದೆ.

ಇದನ್ನೂ ಓದಿ: ಸರ್ಕಾರದಿಂದ ವಿವಿಧ ಯೋಜನೆಯಡಿ ಸಾಲ ಸೌಲಭ್ಯ ಅರ್ಜಿ ಆಹ್ವಾನ

WhatsApp Group Join Now
Telegram Group Join Now

Leave a Comment