ವಿದ್ಯಾರ್ಥಿಗಳಿಗೆ ಹೊಸ ವಿದ್ಯಾರ್ಥಿವೇತನ 40,000 ರೂ ಖಾತೆಗೆ | Raman Kant Munjal Scholarship 2024

WhatsApp Group Join Now
Telegram Group Join Now

ನಮಸ್ಕಾರ ಸ್ನೇಹಿತರೆ ಇವತ್ತಿನ ಈ ಲೇಖನದಲ್ಲಿ ಆಧಾರ್ ರಮಣ್ ಕಾಂತ್ ಮುಂಜಾಲ್ ಫೌಂಡೇಶನ್ ವತಿಯಿಂದ 2024-25 ನೇ ಸಾಲಿನಲ್ಲಿ ಪದವಿ ಹಾಗೂ ಪದವಿ ನಂತರದ ಕೋರ್ಸ್ ಗಳನ್ನು ಓದುತ್ತಿರುವ ವಿದ್ಯಾರ್ಥಿಗಳಿಗೆ (Raman Kant Munjal Scholarship) ಅನುಕೂಲವಾಗುವ ನಿಟ್ಟಿನಲ್ಲಿ ವಿದ್ಯಾರ್ಥಿವೇತನ ನೀಡುತ್ತಿದೆ. ಅರ್ಹ ವಿದ್ಯಾರ್ಥಿಗಳು ಇದರ ಸಂಪೂರ್ಣ ಸದುಪಯೋಗ ಪಡಿಸಿಕೊಳ್ಳಿ, ಅರ್ಜಿ ಸಲ್ಲಿಕೆ ಹೇಗೆ, ಅಗತ್ಯ ದಾಖಲೆಗಳ ವಿವರ ಸಂಪೂರ್ಣ ಮಾಹಿತಿಯನ್ನು ಓದಿ ಅರ್ಜಿ ಸಲ್ಲಿಸಬಹುದು.

ರಮಣ್ ಕಾಂತ್ ಮುಂಜಾಲ್ ಫೌಂಡೇಶನ್ ವತಿಯಿಂದ ನೀಡಲಾಗುವ ಈ ವಿದ್ಯಾರ್ಥಿವೇತನವು ಪ್ರಥಮ ವರ್ಷದ ಪದವಿ ಬಿಎ, ಬಿಬಿಎ, ಬಿ.ಕಾಂ, ಬಿಎಸ್ಸಿ, ಬಿಎಫ್‌ಐಎ, ಬಿಬಿಎಸ್, ಬಿಬಿಐ, ಬಿಎಎಫ್ ಸೇರಿದಂತೆ ವಿವಿಧ ಪದವಿ ಕೋರ್ಸ್‌ಗಳನ್ನು ಓದುತ್ತಿರುವ ವಿದ್ಯಾರ್ಥಿಗಳಿಗೆ ರಮಣ್ ಕಾಂತ್ ಮುಂಜಾಲ್ ಸ್ಕಾಲರ್ಶಿಪ್ ನೀಡುತ್ತಿದ್ದು, ಹಣಕಾಸು-ಸಂಬಂಧಿತ ಕೋರ್ಸ್‌ಗಳನ್ನು ಪಡೆಯುತ್ತಿರುವ ವಿದ್ಯಾರ್ಥಿಗಳು ಈ ವಿದ್ಯಾರ್ಥಿ ವೇತನವನ್ನು ಸದುಪಯೋಗ ಪಡಿಸಿಕೊಳ್ಳಬಹುದು.

Raman Kant Munjal Scholarship 2024

ಅರ್ಜಿ ಸಲ್ಲಿಸಲು ಅರ್ಹತೆ :
ಭಾರತದ ಪ್ರಜೆ ಆಗಿರಬೇಕು.
ಅಭ್ಯರ್ಥಿಗಳು SSLC ಮತ್ತು PUC ಯಲ್ಲಿ ಕನಿಷ್ಠ 80% ಅಂಕಗಳನ್ನು ಪಡೆದಿರಬೇಕು.
ಅರ್ಜಿದಾರರ ಕುಟುಂಬದ ವಾರ್ಷಿಕ ಆದಾಯವು 4ಲಕ್ಷ ರೂ. ಮೀರಿರಬಾರದು.

ವಿದ್ಯಾರ್ಥಿ ವೇತನ ಮೊತ್ತ:
ವಿದ್ಯಾರ್ಥಿವೇತನವು ವಾರ್ಷಿಕ 40,000 ರಿಂದ 5,50,000 ರೂ. ವರೆಗೆ (ಮೂರು ವರ್ಷಗಳ ಅವಧಿಗೆ.)

Raman Kant Munjal Scholarship 2024 ಪ್ರಮುಖ ದಾಖಲೆಗಳು:

SSLC ಮತ್ತು PUC ಅಂಕಪಟ್ಟಿ
ಅರ್ಜಿದಾರರ ಆಧಾರ್ ಕಾರ್ಡ್
ಪೋಷಕರ ಪ್ಯಾನ್ ಕಾರ್ಡ್ ಮತ್ತು ಆಧಾರ್ ಕಾರ್ಡ್
ಆದಾಯ ಪ್ರಮಾಣಪತ್ರ
ಅರ್ಜಿದಾರರ ಬ್ಯಾಂಕ್ ಖಾತೆ ನಂಬರ್‌
ಕಾಲೇಜು ನೀಡಿದ ಕಾಲೇಜು ಶುಲ್ಕ ರಶೀದಿ/ಬೇಡಿಕೆ ರಸೀದಿ
ಪಾಸ್ಪೋರ್ಟ್ ಅಳತೆಯ ಭಾವಚಿತ್ರ
ಅರ್ಜಿದಾರರು ಎಲ್ಲಾ ಸ್ವಯಂ-ದೃಢೀಕರಿಸಿದ ದಾಖಲೆಗಳನ್ನು ಅಪ್‌ಲೋಡ್ ಮಾಡಬೇಕಾಗುತ್ತದೆ.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 05-Sep-2024

ಅರ್ಜಿ ಸಲ್ಲಿಸಲು: ಇಲ್ಲಿ ಕ್ಲಿಕ್ ಮಾಡಿ
ವೆಬ್‌ಸೈಟ್ ವಿಳಾಸ: b4s.in

ಇತರೆ ಸ್ಕಾಲರ್‌ಶಿಪ್ ಮಾಹಿತಿ:‌

Leave a Comment

WhatsApp

Join Now Latest UpDates

Join Now Latest Job And Scheme UpDates News Belagavi

Powered by Webpresshub.net