Rashtriya Krishi Vikash Yojana: 2024- 25 ನೇ ಸಾಲಿನ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ (RKVY) ತೋಟಗಾರಿಕೆ ಇಲಾಖೆಯಿಂದ ನೀರಿನಲ್ಲಿ ಕರಗುವ ರಸಗೊಬ್ಬರ ಘಟಕಕ್ಕೆ (Water Soluble Fertilizers) ಸಹಾಯಧನ ನೀಡಲು ರೈತರಿಂದ ಆರ್ಜಿ ಆಹ್ವಾನಿಸಲಾಗಿದೆ.
ಯಾರು ಅರ್ಹರು:
ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ತೋಟಗಾರಿಕೆ ಇಲಾಖೆಯಿಂದ ನೀರಿನಲ್ಲಿ ಕರಗುವ ರಸಗೊಬ್ಬರ (Fertilizers) ಘಟಕಕ್ಕೆ ಸಹಾಯಧನ ನೀಡಲು ಪರಿಶಿಷ್ಟ ಜಾತಿ (SC) ಮತ್ತು ಪರಿಶಿಷ್ಟ ಪಂಗಡ (ST) ಹಾಗೂ ಸಾಮಾನ್ಯ ವರ್ಗದ ರೈತರಿಂದ ಅರ್ಜಿ ಆಹ್ವಾನಿಸಿದೆ.
Rashtriya Krishi Vikash Yojana ಘಟಕ ಮೊತ್ತ?.
ತೋಟಗಾರಿಕೆ ಬೆಳೆಗಳ ಗುಣಮಟ್ಟದ ಉತ್ಪಾದನೆಗೆ ವಿಶೇಷ ಉತ್ತೇಜನವನ್ನು ಹೆಚ್ಚಿಸಲು ಸರ್ಕಾರವು ನೀರಿನಲ್ಲಿ ಕರಗುವ ರಸಗೊಬ್ಬರ ಘಟಕದ ಪ್ರತಿ ಹೆಕ್ಟೇರ್‍ಗೆ ವೆಚ್ಚ ರೂ.50,000 ನೇರ ಸಹಾಯಧನ ನೀಡುತ್ತದೆ.
ಎಷ್ಟು ಸಹಾಯಧನ ನೀಡಲಾಗುತ್ತದೆ?.
ತೋಟಗಾರಿಕೆ ಇಲಾಖೆಯಿಂದ (Horticulture department) ಇದರಲ್ಲಿ ಸಾಮಾನ್ಯ ವರ್ಗದ ರೈತರಿಗೆ ಶೇ.40 ರಂತೆ ರೂ.20,000 ಸಬ್ಸಿಡಿ ನೀಡಲಾಗುತ್ತದೆ ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ರೈತರಿಗೆ ಶೇ.50ರಂತೆ ರೂ.25000 ಸಹಾಯಧನವನ್ನು (ಸಬ್ಸಿಡಿ) ನೀಡಲಾಗುವುದು.
ಅರ್ಜಿ ಸಲ್ಲಿಸುವ ವಿಳಾಸ ಮತ್ತು ದಿನಾಂಕ:
ತೋಟಗಾರಿಕೆ ಬೆಳೆಗಳನ್ನು (Horticulture crops) ಬೆಳೆಯುವ ರೈತರು ಅನುಮೋದಿತ ಕಂಪನಿಯಿಂದ ರಸಗೊಬ್ಬರ ಖರೀದಿಸಿದ ಮೊತ್ತದ ಬಿಲ್ಲುಗಳನ್ನು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಕಚೇರಿಗೆ ಅಕ್ಟೋಬರ್ 30 ರೊಳಗೆ ಸಲ್ಲಿಸಿದ್ದಲ್ಲಿ ನೇರವಾಗಿ ರೈತರ ಖಾತೆಗೆ ಹಣ ಜಮಾ ಮಾಡಲಾಗುವುದು.
ಹೆಚ್ಚಿನ ಮಾಹಿತಿಗಾಗಿ:
ಪ್ರಸನ್ನ ಕುಮಾರ್.ಜಿ.ಹೆಚ್ ರೈ.ಸಂ.ಕೇಂದ್ರ ದೂರವಾಣಿ ಸಂಖ್ಯೆ: 9108338179
ಸುನೀಲ್ ಕುಮಾರ್. ಹೆಚ್.ಟಿ ರೈ.ಸಂ. ಕೇಂದ್ರ ಸೂಕ್ತ ದೂರವಾಣಿ ಸಂಖ್ಯೆ: 7899942287
ಅಧಿಕ ಮಾಹಿತಿ ಪಡೆಯಲು: ಇಲ್ಲಿ ಕ್ಲಿಕ್ ಮಾಡಿ
ಅನ್ನಭಾಗ್ಯ ಫಲಾನುಭವಿಗಳಿಗೆ ಮತ್ತೊಂದು ಗುಡ್ ನ್ಯೂಸ್
ಕರ್ನಾಟಕ ಸರ್ಕಾರದ ಈ ಯೋಜನೆಯಡಿ ಸಿಗಲಿದೆ 5000 ರೂ. ಆರ್ಥಿಕ ಸಹಾಯಧನ
ಯುವಕ ಯುವತಿಯರಿಗೆ ಉಚಿತ ಕಂಪ್ಯೂಟರ್ ಟ್ಯಾಲಿ ತರಬೇತಿ ಜೊತೆಗೆ ಊಟ ವಸತಿ ಉಚಿತ