ಭಾರತೀಯ ರಿಸರ್ವ್ ಬ್ಯಾಂಕ್ (RBI) ಯುಪಿಐ ಬಳಕೆದಾರರಿಗೆ ಹೊಸ ಫೀಚರ್ನ್ನು ಪರಿಚಯಿಸಲಾಗಿದೆ. ಡೆಲಿಗೇಟೆಡ್ ಪೇಮೆಂಟ್ಸ್ ಸೌಲಭ್ಯ ಇದಾಗಿದ್ದು, ಕುಟುಂಬದ ಒಬ್ಬರ ಬ್ಯಾಂಕ್ ಖಾತೆಯಿಂದ ಎರಡು ಜನ ಯುಪಿಐ (UPI) ಮೂಲಕ ಹಣ ಪಾವತಿ ಮಾಡಬಹುದಾಗಿದೆ. ಯುಪಿಐ ಬಳಕೆದಾರರು ತಮ್ಮ ಬ್ಯಾಂಕ್ ಖಾತೆಯ ಒಂದು ಮಿತಿಯವರೆಗೆ ಯುಪಿಐ ಟ್ರಾನ್ಸಾಕ್ಷನ್ ಮಾಡಲು ಇನ್ನೊಬ್ಬರಿಗೆ ಅಂದರೆ ದ್ವಿತೀಯ ಬಳಕೆದಾರರಿಗೆ ಅವಕಾಶ ನೀಡಬಹುದು.
ಆನ್ಲೈನ್ ಯುಪಿಐ ಪಾವತಿ ವ್ಯವಸ್ಥೆಯಲ್ಲಿ ಹೊಸ ಫೀಚರ್ನ್ನು ಭಾರತೀಯ ರಿಸರ್ವ್ ಬ್ಯಾಂಕ್ (RBI) ಪರಿಚಯಿಸಲಾಗಿದೆ. ಡೆಲಿಗೇಟೆಡ್ ಪೇಮೆಂಟ್ಸ್ ಸೌಲಭ್ಯ ಇದಾಗಿದೆ. ಏನಿದರ ವಿಶೇಷತೆಗಳು? ಏನು ಇದರ ಪ್ರಯೋಜನಗಳು? ಇಲ್ಲಿದೆ ಸಂಪೂರ್ಣ ವಿವರ.
ಈ ಹೊಸ ಫೀಚರ್ ಅಡಿಯಲ್ಲಿ ಮೊದಲ ಯುಪಿಐ ಬಳಕೆದಾರರು ತಮ್ಮ ಬ್ಯಾಂಕ್ ಖಾತೆಯಿಂದ ಕನಿಷ್ಠ ಮಿತಿಯವರೆಗೆ ಯುಪಿಐ ಟ್ರಾನ್ಸಾಕ್ಷನ್ ಮಾಡಿ ಇನ್ನೊಬ್ಬರಿಗೆ ಅಂದರೆ ಎರಡನೇ UPI ಬಳಕೆದಾರರಿಗೆ ಅವಕಾಶ ಕಲ್ಪಿಸಬಹುದಾಗಿದೆ. ಈ ಹೊಸ ಫೀಚರ್ ನಿಂದ ಯುಪಿಐ ಖಾತೆಗೆ ಪ್ರತ್ಯೇಕ ಬ್ಯಾಂಕ್ ಖಾತೆ ನಂಬರ್ ಲಿಂಕ್ ಮಾಡುವ ಅವಶ್ಯಕತೆ ಇರುವುದಿಲ್ಲ.
ಭಾರತೀಯ ರಿಸರ್ವ್ ಬ್ಯಾಂಕ್ ಗವರ್ನರ್ ಆದ ಶಕ್ತಿಕಾಂತ ದಾಸ್ ಅವರು ಇತ್ತೀಚಿಗಷ್ಟೇ ನಡೆದ ಸುದ್ದಿಗೋಷ್ಠಿಯಲ್ಲಿ ಈ ಹೊಸ ಫೀಚರ್ ಬಗ್ಗೆ ತಿಳಿಸಿದ್ದಾರೆ. ಡಿಜಿಟಲ್ ವಹಿವಾಟು ವ್ಯಾಪ್ತಿಯನ್ನು ಮತ್ತು ಬಳಕೆದಾರರನ್ನು ಮತ್ತಷ್ಟು ವಿಸ್ತರಿಸಲು ಈ ಕ್ರಮ ಜಾರಿಗೆ ಗೊಳಿಸಲಾಗಿದೆ, ಒಂದೇ ಬ್ಯಾಂಕ್ ಅಕೌಂಟ್ ನಿಂದ ಇಬ್ಬರೂ ಯುಪಿಐ ಪಾವತಿ ಮಾಡಲು ಅವಕಾಶ ಕಲ್ಪಿಸುವ ಮುಖ್ಯ ಉದ್ದೇಶವಾಗಿದೆ ಎಂದು ವಿವರಿಸಿದ್ದಾರೆ.
ಈ ಯೋಜನೆಯ ಪ್ರಯೋಜನಗಳು:
ಈ ನೂತನ ಕ್ರಮದಿಂದ ಹಳ್ಳಿ ಜನರಿಗೆ ಹೆಚ್ಚು ಪ್ರಯೋಜನ ವಾಗಲಿದೆ ಎಂದು ಹೇಳಬಹುದು. ಗ್ರಾಮೀಣ ಭಾಗ ಕುಟುಂಬಗಳಲ್ಲಿ ಸಾಮಾನ್ಯವಾಗಿ ಒಂದೇ ಬ್ಯಾಂಕ್ ಖಾತೆ ಹೊಂದಿರುತ್ತಾರೆ. ಈ ಫೀಚರ್ ನಿಂದ ಕುಟುಂಬದ ಇನ್ನೊಬ್ಬರಿಗೂ ಯಪಿಐ ಪಾವತಿ ಮಾಡಲು ಅನುಕೂಲವಾಗುತ್ತದೆ.
ಯುಪಿಐ ಮಿತಿ ಹೆಚ್ಚಳ:
ಭಾರತೀಯ ರಿಸರ್ವ್ ಬ್ಯಾಂಕ್ ಯುಪಿಐ ಪಾವತಿ ಮಿತಿಯನ್ನೂ ಸಹ ಹೆಚ್ಚಿಸಲಾಗಿದೆ. ಈ ಮಿತಿ ತೆರಿಗೆ ಪಾವತಿದಾರರಿಗೆ ಮಾತ್ರ ಈ ಮಿತಿ ಅನ್ವಯಿಸಲಿದ್ದು, ಯುಪಿಐ ನಿಂದ ತೆರಿಗೆ ಪಾವತಿಗೆ ಮಿತಿಯನ್ನು 1 ಲಕ್ಷ ರೂ.ನಿಂದ 5 ಲಕ್ಷ ರೂ.ಗೆ ಹೆಚ್ಚಿಗೆ ಮಾಡಲಾಗಿದೆ.
ಯುಪಿಐ ಮೂಲಕ ತೆರಿಗೆ ಪಾವತಿಯ ಮಿತಿಯನ್ನು ಒಮ್ಮೆ ಟ್ರಾನ್ಸಾಕ್ಷನ್ ಮಾಡಲು 1 ಲಕ್ಷ ರೂ.ನಿಂದ 5 ಲಕ್ಷ ರೂ.ಗೆ ಏರಿಸಲು ನಿರ್ಧರಿಸಲಾಗಿದೆ. ಇದರಿಂದ ಗ್ರಾಹಕರಿಗೆ ಯುಪಿಐ ಮೂಲಕ ತೆರಿಗೆ ಪಾವತಿಸಲು ಮತ್ತಷ್ಟು ಸುಲಭವಾಗಲಿದೆ,” ಎಂದು ಅವರು ಹೇಳಿದ್ದಾರೆ.