RDWSD Karnataka Recruitment 2024: ಕರ್ನಾಟಕ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯು ವಿವಿಧ ಯೋಜನೆಗಳಡಿ ಖಾಲಿ ಇರುವ ಜಿಲ್ಲಾ ತಾಂತ್ರಿಕ ಸಹಾಯಕರ ಮತ್ತು ಸಮಾಲೋಚಕರ ಸೇರಿದಂತೆ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಆನ್‌ಲೈನ್ ಮೂಲಕ ಅರ್ಜಿಯನ್ನು ಆಹ್ವಾನಿಸಲಾಗಿದೆ.
Karnataka Rural Drinking Water And Sanitation Department Recruitment ಹಣಕಾಸು ಸಮಾಲೋಚಕರು ಹುದ್ದೆಗೆ ಅರ್ಜಿ ಸಲ್ಲಿಸಲು ಆಸಕ್ತಿ ಇರುವ ಅಭ್ಯರ್ಥಿಗಳು ನೇಮಕಾತಿಗೆ ಸಂಬಂಧಿಸಿದಂತೆ ಅರ್ಹತೆಗಳು, ಒಟ್ಟು ಹುದ್ದೆಗಳ ವಿವರ, ಅರ್ಜಿ ಸಲ್ಲಿಸುವ ಪ್ರಕ್ರಿಯೆ, ಪ್ರಮುಖ ದಿನಾಂಕಗಳು, ಅರ್ಜಿ ಸಲ್ಲಿಸಲು ಡೈರೆಕ್ಟ್ ಲಿಂಕ್‌ಗಳು ಸೇರಿದಂತೆ ಸಂಪೂರ್ಣ ಮಾಹಿತಿಯನ್ನು ಕೆಳಗೆ ನೀಡಲಾಗಿದೆ.
RDWSD Karnataka Recruitment 2024:
ಒಟ್ಟು ಹುದ್ದೆಗಳ ಸಂಖ್ಯೆ: 47
ಹುದ್ದೆಗಳ ಹೆಸರು: ಹಣಕಾಸು ಸಮಾಲೋಚಕರು
ಉದ್ಯೋಗದ ಸ್ಥಳ: ಕರ್ನಾಟಕ
ಹುದ್ದೆಗಳ ಮಾಹಿತಿ:
ಸಂಗ್ರಹಣೆ ಸಮಾಲೋಚಕರು:09
ಪರಿವೀಕ್ಷಣಾ ಮತ್ತು ಮೌಲ್ಯಮಾಪನ ಸಮಾಲೋಚಕರು: 10
ಪರಿಸರ ಸಮಾಲೋಚಕರು: 10
ಸಾಮಾಜಿಕ ಅಭಿವೃದ್ಧಿ ಸಮಾಲೋಚಕರು: 07
ಹಣಕಾಸು ಸಮಾಲೋಚಕರು: 11
ವಿದ್ಯಾರ್ಹತೆ:
ಕರ್ನಾಟಕ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ನೇಮಕಾತಿ ಅಧಿಸೂಚನೆ ಪ್ರಕಾರ ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಬಿಇ ಅಥವಾ ಬಿ.ಟೆಕ್ ಇನ್ ಸಿವಿಲ್, ಬಿಸಿಎ / ಬಿಇ, ಎಂಬಿಎ ಎಂ.ಕಾಂ ಸ್ನಾತಕೋತ್ತರ ಪದವಿಯನ್ನು ಪೂರ್ಣಗೊಳಿಸರಬೇಕು.
ವಯೋಮಿತಿ:
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ಗರಿಷ್ಠ ವಯಸ್ಸು 45 ವರ್ಷ ಮೀರಿರಬಾರದು.
ಮಾಸಿಕ ವೇತನ:
ಸಂಗ್ರಹಣೆ ಸಮಾಲೋಚಕರು: 50,000 ರಿಂದ 75,000 ರೂ.
ಪರಿವೀಕ್ಷಣಾ ಮತ್ತು ಮೌಲ್ಯಮಾಪನ ಸಮಾಲೋಚಕರು: 50,000 ರಿಂದ 75,000 ರೂ.
ಪರಿಸರ ಸಮಾಲೋಚಕರು: 50000 ರಿಂದ 75000 ರೂ.
ಸಾಮಾಜಿಕ ಅಭಿವೃದ್ಧಿ ಸಮಾಲೋಚಕರು: 50000 ರಿಂದ 75000 ರೂ.
ಹಣಕಾಸು ಸಮಾಲೋಚಕರು: 50000 ರಿಂದ 75000 ರೂ.
ಇದನ್ನೂ ಓದಿ: ಆಧಾರ್ ಕಾರ್ಡ್ ನಲ್ಲಿ ಪೋಟೋ, ಹೆಸರು, ವಿಳಾಸ, ಈ ದಿನಾಂಕದೊಳಗೆ ತಿದ್ದುಪಡಿ ಮಾಡಲು ಕೊನೆಯ ದಿನ
ಆಯ್ಕೆ ವಿಧಾನ:
ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ಶಾರ್ಟ್ ಲಿಸ್ಟ್ ನಲ್ಲಿ ಆಯ್ಕೆಯಾದವರನ್ನು ದಾಖಲೆಗಳ ಪರಿಶೀಲನೆ ಮೂಲಕ ಆಯ್ಕೆ ಮಾಡಲಾಗುತ್ತದೆ.
ಪ್ರಮುಖ ದಿನಾಂಕಗಳು:
ಆನ್‌ಲೈನ್ ಅರ್ಜಿ ಸ್ವೀಕರಿಸಲು ಪ್ರಾರಂಭದ ದಿನಾಂಕ: 10-09-2024
ಆನ್‌ಲೈನ್ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 23-09-2024
ಇದನ್ನೂ ಓದಿ: ಪಿಎಂ ಕಿಸಾನ್ 18ನೇ ಕಂತಿನ ಹಣ ಪಡೆಯಲು ಈ ಕೆಲಸ ಮಾಡುವುದು ಕಡ್ಡಾಯ?
RDWSD Karnataka Recruitment 2024 ಪ್ರಮುಖ ಲಿಂಕ್‌ಗಳು:
ಅಧಿಸೂಚನೆ ನೋಡಲು: ಇಲ್ಲಿ ಕ್ಲಿಕ್ ಮಾಡಿ
ಆನ್‌ಲೈನ್ ಅರ್ಜಿ ಸಲ್ಲಿಸಲು: ಇಲ್ಲಿ ಕ್ಲಿಕ್ ಮಾಡಿ
State ISA & State Water Quality Co-Ordinator ಅಧಿಸೂಚನೆ: ಇಲ್ಲಿ ಕ್ಲಿಕ್ ಮಾಡಿ
ವೆಬ್‌ಸೈಟ್ ವಿಳಾಸ: english.swachhamevajayate.org & ksrwspdtsuonline.in
ಇತರೆ ಹೆಚ್ಚಿನ ಮಾಹಿತಿಗಳಿಗಾಗಿ recruitment.rdwsd@gmail.com ಗೆ ಇಮೇಲ್ ಮಾಡಬಹುದು.
ಇದನ್ನೂ ಓದಿ: ಬೆಳೆಹಾನಿ ಪರಿಹಾರ ಆಧಾರ್ ಲಿಂಕ್ ಆದ ರೈತರ ಪಟ್ಟಿ ಬಿಡುಗಡೆ ಪಟ್ಟಿಯಲ್ಲಿ ನಿಮ್ಮ ಹೆಸರು ಚೆಕ್ ಮಾಡಿ