Reliance Foundation Scholarship: 2024-25 ನೇ ಸಾಲಿನಲ್ಲಿ ಪದವಿಪೂರ್ವ ಮತ್ತು ಸ್ನಾತಕೋತ್ತರ ಶಿಕ್ಷಣ ಪಡೆಯುತ್ತಿರುವ ಸಮಾಜದಲ್ಲಿ ಹಿಂದುಳಿದ ವರ್ಗಗಳ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ರಿಲಯನ್ಸ್ ಫೌಂಡೇಶನ್ ವತಿಯಿಂದ ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನಿಸಿದೆ. ಈ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು, ಅರ್ಹತೆ ಏನು, ಹೇಗೆ ಅರ್ಜಿ ಸಲ್ಲಿಸಬೇಕು ಸಂಪೂರ್ಣ ಮಾಹಿತಿ ಕೆಳಗಿನಂತೆ ತಿಳಿಸಿದ್ದೇವೆ.
ರಿಲಾಯನ್ಸ್ ಫೌಂಡೇಶನ್ ವತಿಯಿಂದ ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ನೀಡುತ್ತಿದ್ದು, ಆಸಕ್ತ ಹಾಗೂ ಅರ್ಹ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.
Reliance Foundation Scholarship ಅರ್ಜಿ ಸಲ್ಲಿಸಲು ಅರ್ಹತೆ:
ವಿದ್ಯಾರ್ಥಿಗಳು ಕನಿಷ್ಠ 60% ಅಂಕಗಳೊಂದಿಗೆ ದ್ವೀತಿಯ ಪಿಯುಸಿಯಲ್ಲಿ ಉತ್ತೀರ್ಣರಾಗಿರಬೇಕು.
ಕುಟುಂಬದ ಆದಾಯವು ವರ್ಷಕ್ಕೆ 15 ಲಕ್ಷಕ್ಕಿಂತ ಕಡಿಮೆ ಇರಬೇಕು.
ಕಡ್ಡಾಯ ಆಪ್ಟಿಟ್ಯೂಡ್ ಪರೀಕ್ಷೆಗೆ ಉತ್ತರಿಸಬೇಕು.
ಎಂಜಿನಿಯರಿಂಗ್, ಟೆಕ್ನಾಲಜಿ ಕೋರ್ಸ್ ಗಳನ್ನು ಅಭ್ಯಾಸ ಮಾಡುತ್ತಿರುವ ಮೊದಲ ವರ್ಷದಲ್ಲಿ ಸ್ನಾತಕೋತ್ತರ ಕೋರ್ಸ್‌ಗಳಿಗೆ ದಾಖಲಾಗಿರುವಂತಹ ವಿದ್ಯಾರ್ಥಿಗಳು.
ಗೇಟ್ ಪರೀಕ್ಷೆಯಲ್ಲಿ 550-1000 ಅಂಕ ಗಳಿಸಿರಬೇಕು.
ಭಾರತೀಯ ಪ್ರಜೆ ಆಗಿರಬೇಕು.
ಪ್ರಯೋಜನಗಳು:
ಪದವಿ ವಿದ್ಯಾರ್ಥಿಗಳಿಗೆ:
ಪದವಿ ಓದುತ್ತಿರುವ ವಿದ್ಯಾರ್ಥಿಗಳಿಗೆ 2,00,000 ರೂ. ವರೆಗೆ ವಿದ್ಯಾರ್ಥಿವೇತನ ನೀಡಲಾಗುತ್ತದೆ.
ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ:
ಸ್ನಾತಕೋತ್ತರ ಪದವಿಯನ್ನು ಓದುತ್ತಿರುವ ವಿದ್ಯಾರ್ಥಿಗಳಿಗೆ 6,00,000 ರೂ. ವರೆಗೆ ವಿದ್ಯಾರ್ಥಿವೇತನ ನೀಡಲಾಗುತ್ತದೆ.
ಇದನ್ನೂ ಓದಿ: ವಿದ್ಯಾರ್ಥಿಗಳಿಗೆ ಹೊಸ ವಿದ್ಯಾರ್ಥಿವೇತನ 40,000 ರೂ ಖಾತೆಗೆ
ದಾಖಲೆಗಳು:
ಅರ್ಜಿದಾರರ ಪೋಟೋ
ವಿಳಾಸ ಪುರಾವೆ
SSLC ಮತ್ತು PUC ಬೋರ್ಡ್ ಪರೀಕ್ಷೆಗಳ ಅಂಕಪಟ್ಟಿಗಳು
ಪ್ರಸ್ತುತ ಕಾಲೇಜು/ದಾಖಲಾತಿ ಸಂಸ್ಥೆಯ ಬೋನಾಫೈಡ್ ವಿದ್ಯಾರ್ಥಿ ಪ್ರಮಾಣಪತ್ರ
ಕುಟುಂಬದ ಆದಾಯ ಪುರಾವೆ
ಸಂಬಂಧಿತ ಸರ್ಕಾರಿ ಪ್ರಾಧಿಕಾರದಿಂದ ನೀಡಲಾದ ಅಧಿಕೃತ ಅಂಗವೈಕಲ್ಯ ಪ್ರಮಾಣಪತ್ರ (ಅನ್ವಯಿಸಿದರೆ)
ಪ್ರಮುಖ ದಿನಾಂಕ ಮತ್ತು ಲಿಂಕ್‌ಗಳು:
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 06-10-2024
ಆನ್‌ಲೈನ್ ಅರ್ಜಿ ಸಲ್ಲಿಸಲು: ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: SBI ಬ್ಯಾಂಕ್ ವತಿಯಿಂದ 6ನೇ ತರಗತಿಯಿಂದ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ 70,000 ರೂ. ಸ್ಕಾಲರ್ಶಿಪ್