ನಮಸ್ಕಾರ ವಿದ್ಯಾರ್ಥಿ ಮಿತ್ರರೇ ಈ ಒಂದು ಲೇಖನದ ಮೂಲಕ ನಿಮ್ಮೇಲರಿಗೂ ನೀಡುವ ಮಾಹಿತಿ ಎಂದರೆ, ನೀವು ಪಿಯುಸಿ ಶಿಕ್ಷಣ ಪಡೆದು ಮುಂದಿನ ವಿದ್ಯಾಭ್ಯಾಸವನ್ನು ಪಡೆಯಲು ಇಚ್ಛಿಸಿರುವ ವಿದ್ಯಾರ್ಥಿಗಳಿಗೆ ಸ್ವಾಮಿ ದಯಾನಂದ್ ಎಜುಕೇಶನ್ ಫೌಂಡೇಷನ್ (ಎಸ್‌ಡಿಇಎಫ್) ವತಿಯಿಂದ 50,000 ರಿಂದ 2,00,000 ರೂಪಾಯಿಗಳ ವರಗೆ “ಶ್ಯಾಮ್ ಲತಾ ಗಾರ್ಗ್” ಇಂಡಿಯಾ ಸ್ಕಾಲರ್‌ಶಿಪ್ (SDEF Smt. Shyam Lata Garg India Scholarships) ನೀಡುತ್ತಿದ್ದು. ಅರ್ಹ ಮತ್ತು ಆಸಕ್ತರು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
2024-25ನೇ ಸಾಲಿನಲ್ಲಿ ಸರ್ಕಾರಿ ಅಥವಾ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಎಂಜಿನಿಯರಿಂಗ್, ವೈದ್ಯಕೀಯ, ವಾಸ್ತುಶಿಲ್ಪ, ಸೇರಿದಂತೆ ಇತರೆ ವೃತ್ತಿಪರ ಕೋರ್ಸ್‌ಗಳನ್ನು ವ್ಯಾಸಂಗ ಆರ್ಥಿಕವಾಗಿ ಹಿಂದುಳಿದಿರುವ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳಿಗೆ “ಶ್ರೀಮತಿ. ಶ್ಯಾಮ್ ಲತಾ ಗಾರ್ಗ್” ಇಂಡಿಯಾ ಸ್ಕಾಲರ್‌ಶಿಪ್ ಅನ್ನು ಸ್ವಾಮಿ ದಯಾನಂದ ಶಿಕ್ಷಣ ಪ್ರತಿಷ್ಠಾನದ (SDEF) ಅಡಿಯಲ್ಲಿ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಹಣಕಾಸಿನ ನೆರವು ನೀಡುತ್ತದೆ. ಆಯ್ಕೆಯಾಗುವ ವಿದ್ಯಾರ್ಥಿಗಳಿಗೆ ಉನ್ನತ ಅಧ್ಯಯನವನ್ನು ಮುಂದುವರಿಸಲು ತಮ್ಮ ಪದವಿ ಶಿಕ್ಷಣ ಮುಗಿಯುವವರೆಗೆ ವಾರ್ಷಿಕ 50,000 ರಿಂದ 2 ಲಕ್ಷದವರೆಗೆ ವಿದ್ಯಾರ್ಥಿವೇತನವನ್ನು ನೀಡಲಾಗುತ್ತದೆ.
Shyam Lata Garg India Scholarship ಅರ್ಹತೆ:
- ಭಾರತದಾದ್ಯಂತ ಯಾವುದೇ ಶಿಕ್ಷಣ ಸಂಸ್ಥೆಗಳಲ್ಲಿ ಎಂಜಿನಿಯರಿಂಗ್, ವೈದ್ಯಕೀಯ, ವಾಸ್ತುಶಿಲ್ಪ ಸೇರಿ ಇತರ ವೃತ್ತಿಪರ ಕೋರ್ಸ್‌ಗಳನ್ನು ಓದುತ್ತಿರಬೇಕು.
- ದ್ವೀತಿಯ ಪಿಯುಸಿ ಯಲ್ಲಿ (ಸಿಬಿಎಸ್‌ಸಿ) ಬೋರ್ಡ್‌ನಲ್ಲಿಯಾದರೆ ಕನಿಷ್ಠ ಶೇಕಡಾ 80 % ಅಥವಾ ಇತರ ಬೋರ್ಡ್ ಪರೀಕ್ಷೆಯಾದರೆ ಶೇಕಡಾ 70 % ಕ್ಕಿಂತ ಹೆಚ್ಚು ಅಂಕಗಳನ್ನು ಪಡೆದಿರಬೇಕು.
- ಕೋರ್ಸ್ ನ ಎರಡನೆಯ ವರ್ಷದ ವಿದ್ಯಾರ್ಥಿಗಳಿಗೆ ಕನಿಷ್ಠ 8.0 ಸಿಜಿಪಿಎ ಅವಶ್ಯಕ ವಿರುತ್ತದೆ.
- ವಿದ್ಯಾರ್ಥಿಗಳ ಕುಟುಂಬದ ವಾರ್ಷಿಕ ಆದಾಯವು 8 ಲಕ್ಷಕ್ಕಿಂತ ಕಡಿಮೆ ಇರಬೇಕು.
ವಿದ್ಯಾರ್ಥಿವೇತನದ ಮೊತ್ತ:
2500 ಕ್ಕಿಂತ ಕಡಿಮೆ AIR ರ್‍ಯಾಂಕ್ ಪಡೆದ ವಿದ್ಯಾರ್ಥಿಗಳಿಗೆ: 50,000 ರೂ.
2501 ರಿಂದ 5,000 ನಡುವಿನ ಎಐಆರ್ ರ್‍ಯಾಂಕ್ ಪಡೆದ ವಿದ್ಯಾರ್ಥಿಗಳಿಗೆ: 40,000 ರೂ.
5,001ರಿಂದ 7500 ರೊಳಗೆ ಎಐಆರ್ ರ್‍ಯಾಂಕ್ ಪಡೆದ ವಿದ್ಯಾರ್ಥಿಗಳಿಗೆ: 30,000 ರೂ.
7500 ಕ್ಕಿಂತ ಮೇಲಿನ ಎಐಆರ್ ರ್‍ಯಾಂಕ್ ಪಡೆದ ವಿದ್ಯಾರ್ಥಿಗಳಿಗೆ: 20,000 ರೂ.
ಬಿ.ಎ., ಬಿ.ಎಸ್‌ಸಿ, ಬಿ.ಕಾಂ, ಬಿಬಿಎ ಇತ್ಯಾದಿಯಂತಹ ನಾನ್-ಟೆಕ್ನಿಕಲ್ ಕೋರ್ಸ್‌ಗಳನ್ನು ಓದುತ್ತಿರುವ ವಿದ್ಯಾರ್ಥಿಗಳಿಗೆ: 10,000 ರೂ.
ಅರ್ಜಿ ಸಲ್ಲಿಸಲು ವಯಸ್ಸಿನ ಮಿತಿ:
ಮೊದಲನೇ ವರ್ಷದ ವಿದ್ಯಾರ್ಥಿಗಳ ವಯಸ್ಸು 19 ವರ್ಷಕ್ಕಿಂತ ಕಡಿಮೆ ಇರಬೇಕು.
2ನೇ ವರ್ಷದಲ್ಲಿ ಕೋರ್ಸ್ ಓದುತ್ತಿರುವ ವಿದ್ಯಾರ್ಥಿಗಳು ಗರಿಷ್ಠ ವಯಸ್ಸು 20 ವರ್ಷಕ್ಕಿಂತ ಕಡಿಮೆ ಆಗಿರಬೇಕು.
Shyam Lata Garg India Scholarship ಪ್ರಮುಖ ದಾಖಲೆಗಳು:
ಸರ್ಕಾರದ ಅಧಿಕೃತ ಗುರುತಿನ ಚೀಟಿ (ಆಧಾರ್ ಕಾರ್ಡ್ / ಪ್ಯಾನ್ ಕಾರ್ಡ್ / ಡ್ರೈವಿಂಗ್ ಲೈಸೆನ್ಸ್ / ವೋಟರ್ ಐಡಿ)
10ನೇ ತರಗತಿ ಮತ್ತು 12ನೇ ತರಗತಿಯ ಅಂಕಪಟ್ಟಿಗಳು
ಎಲ್ಲಾ ಸೆಮಿಸ್ಟರ್‌ಗಳು ಶೈಕ್ಷಣಿಕ ಅಂಕಪಟ್ಟಿಗಳು
ಸೀಟು ಹಂಚಿಕೆ ಪತ್ರ
ಶುಲ್ಕ ರಶೀದಿಗಳ ಪ್ರತಿ
ಕುಟುಂಬದ ಆದಾಯ ಪ್ರಮಾಣ ಪತ್ರ
ಇತ್ತೀಚಿನ ಭಾವಚಿತ್ರಗಳು
ಪ್ರಮುಖ ದಿನಾಂಕ ಮತ್ತು ಲಿಂಕ್ ಗಳು:
2024-25 ನೇ ಸಾಲಿನ ಶ್ರೀಮತಿ. ಶ್ಯಾಮ್ ಲತಾ ಗಾರ್ಗ್” ಇಂಡಿಯಾ ವಿದ್ಯಾರ್ಥಿವೇತನಕ್ಕೆ ಆನ್‌ಲೈನ್ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಡಿಸೆಂಬರ್ 31, 2024. ಆಗಿರುತ್ತದೆ.
ಅರ್ಜಿ ಸಲ್ಲಿಸುವ ವಿಧಾನ ಆನ್‌ಲೈನ್: ಇಲ್ಲಿ ಕ್ಲಿಕ್ ಮಾಡಿ
ಹೆಚ್ಚಿನ ಮಾಹಿತಿಗಾಗಿ:
ಇ-ಮೇಲ್ ವಿಳಾಸ: scholarships@swamidayanand.org
ದೂರವಾಣಿ ಸಂಖ್ಯೆ : (+91) -120-4146823
ಅದಾನಿ ಜ್ಞಾನ ಜ್ಯೋತಿ ಗ್ರೂಪ್ ವತಿಯಿಂದ ಬರೋಬ್ಬರಿ 1,8 ಲಕ್ಷ ವಿದ್ಯಾರ್ಥಿವೇತನ
SBI ಬ್ಯಾಂಕ್ ವತಿಯಿಂದ 6 ರಿಂದ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ 70,000 ರೂ. ಸ್ಕಾಲರ್ಶಿಪ್