ಹೊಸ ಜವಳಿ ಘಟಕ ಸ್ಥಾಪನೆಗೆ ಸರ್ಕಾರದಿಂದ ಸಹಾಯಧನಕ್ಕಾಗಿ ಅರ್ಜಿ ಆಹ್ವಾನ | Small and Micro Textile Units Establishment Scheme

WhatsApp Group Join Now
Telegram Group Join Now

Small and Micro Textile Units Establishment Scheme: ನಮಸ್ಕಾರ ಸ್ನೇಹಿತರೇ ಈ ಲೇಖನದ ಮೂಲಕ ನಿಮ್ಮೆಲ್ಲರಿಗೂ ತಿಳಿಸುವುದೇಂದರೆ ಕರ್ನಾಟಕದ ಸರ್ಕಾರದ ಕೈಮಗ್ಗ ಮತ್ತು ಜವಳಿ ಇಲಾಖೆ (Handlooms And Textiles Department Karnataka) ವತಿಯಿಂದ 2024-25ನೇ ಸಾಲಿನಲ್ಲಿ ನೇಕಾರರ ಪ್ಯಾಕೇಜ್ ಯೋಜನೆಯಡಿ ಜವಳಿ ಉದ್ಯಮ ಪ್ರಾರಂಭಿಸಲು ಅರ್ಹ ಫಲಾನುಭವಿಗಳಿಂದ ಸಹಾಯಧನಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ.

ಈ ಯೋಜನೆಯ ಪ್ರಯೋಜನವು ಪರಿಶಿಷ್ಟ ಜಾತಿ ವಿಶೇಷ ಘಟಕ ಮತ್ತು ಪರಿಶಿಷ್ಟ ಪಂಗಡ ಗಿರಿಜನ ಉಪ ಯೋಜನೆಯಡಿ ನೇಕಾರರ ವಿಶೇಷ ಪ್ಯಾಕೇಜ್ ಯೋಜನೆಯಡಿ ಸಣ್ಣ ಮತ್ತು ಅತೀ ಸಣ್ಣ ಘಟಕಗಳ ಸ್ಥಾಪನೆಗೆ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಫಲಾನುಭವಿಗಳಿಂದ ಹೊಸದಾಗಿ ಜವಳಿ ಘಟಕ ಸ್ಥಾಪಿಸಲು ಇಲಾಖೆಯಿಂದ ಸಹಾಯಧನ ನೀಡಲು ಅರ್ಜಿ ಆಹ್ವಾನಿಸಲಾಗಿದೆ.

ಜವಳಿ ಉದ್ಯಮಕ್ಕೆ ಸಹಾಯಧನ:
ರಾಜ್ಯ ಸರ್ಕಾರವು ಜವಳಿ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಫಲಾನುಭವಿಗಳು ಅತಿ ಸಣ್ಣ ಘಟಕಗಳ ಸ್ಥಾಪನೆಗೆ ಶೇ.75 ರಷ್ಟು ಅಥವಾ ಗರಿಷ್ಠ ರೂ.2. ಕೋಟಿ ವರೆಗೆ ಸಹಾಯಧನ ನೀಡಲಾಗುತ್ತದೆ. ಫಲಾನುಭವಿಗಳು ಜವಳಿ ಉತ್ಪಾದನಾ ಘಟಕವನ್ನು ಸ್ಥಾಪಿಸಲು ಅವಶ್ಯವಾದ ನಿವೇಶನ, ಕಟ್ಟಡ ಜಾಗವ ಹೊಂದಿರುವವರಾಗಿರಬೇಕು.

ಈ ಯೋಜನೆಯಡಿ ನೇಕಾರಿಕೆ ವೃತ್ತಿಯಲ್ಲಿ ನೇಯ್ಗೆ ಅನುಭವ ಪಡೆದಿರುವವರು ಜವಳಿ ಕ್ಷೇತ್ರಕ್ಕೆ ಸಂಬಂಧಿಸಿದಂತೆ ವಿದ್ಯುತ್ ಮಗ್ಗ, ಕೈಮಗ್ಗ, ಸಿಲ್ಕ್ ಟ್ವಿಸ್ಟಿಂಗ್, ರೇಡಿಮೆಡ್ ಗಾರ್ಮೆಂರ್ಟ್, ಪ್ರಿಂಟಿಂಗ್, ಎಂಬ್ರಾಯಿಡರಿ, ಫಿನಿಷಿಂಗ್, ವಾರ್ಪಿಂಗ್, ಡೈಯಿಂಗ್, ಕಂಪ್ಯೂಟರ್ ಡಿಸೈನಿಂಗ್ ಮತ್ತು ಇತರೆ ಜವಳಿ ಚಟುವಟಿಕೆ ಘಟಕಗಳನ್ನು ಸ್ಥಾಪಿಸಲು ಸಹಾಯಧನ ನೀಡಲಾಗುತ್ತದೆ.

ಅರ್ಜಿ ಸಲ್ಲಿಸುವ ಜವಳಿ ಉತ್ಪಾದನಾ ಉದ್ದಿಮೆದಾರರು ಅಗತ್ಯವಿರುವ ದಾಖಲಾತಿಗಳೊಂದಿಗೆ 18 ಡಿಸೆಂಬರ್ 2024 ರೊಳಗಾಗಿ ಕೈಮಗ್ಗ ಮತ್ತು ಜವಳಿ ಇಲಾಖೆಯ ಕಚೇರಿಗೆ ಖುದ್ದಾಗಿ ಅರ್ಜಿ ಮತ್ತು ದಾಖಲೆಗಳನ್ನು ಸಲ್ಲಿಸಬಹುದು.

ಹೆಚ್ಚಿನ ಮಾಹಿತಿಗಾಗಿ:
ಕೈಮಗ್ಗ ಮತ್ತು ಜವಳಿ ಇಲಾಖೆ, ಜಿಲ್ಲಾ ಪಂಚಾಯತ್ ದಾವಣಗೆರೆ ರಾಮಾಂಜನೇಯ ಪ್ಲಾಜಾ ಕಾಲೇಜ್ ರಸ್ತೆ, ನಿಟ್ಟುವಳ್ಳಿ. ದಾವಣಗೆರೆ-577004. ಸಂಪರ್ಕಿಸಲು ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ದೂರವಾಣಿ ಸಂಖ್ಯೆ: 08192-262362

ಗ್ರಾಮೀಣ ಪ್ರದೇಶದ ಕುಶಲಕರ್ಮಿಗಳಿಗೆ ಉಚಿತ ಟೂಲ್‌ಕಿಟ್‌ ಪಡೆಯಲು ಅರ್ಜಿ ಆಹ್ವಾನ

ಮಹಿಳೆಯರಿಗೆ 3 ಲಕ್ಷ ರೂ. ಬಡ್ಡಿ ರಹಿತ ಸಾಲ ಯೋಜನೆಗೆ ಅರ್ಜಿ ಆಹ್ವಾನ

Leave a Comment

WhatsApp

Join Now Latest UpDates

Join Now Latest Job And Scheme UpDates News Belagavi

Powered by Webpresshub.net