ಭಾರತೀಯ ರೈಲ್ವೆ ಇಲಾಖೆಯಲ್ಲಿ ಉದ್ಯೋಗ ಹುಡುಕುತ್ತಿರುವ ಅಭ್ಯರ್ಥಿಗಳಿಗೆ ಸಿಹಿ ಸುದ್ದಿ ಹುಬ್ಬಳ್ಳಿಯ ನೈಋತ್ಯ ರೈಲ್ವೆಯಲ್ಲಿ ಸ್ಪೋರ್ಟ್ಸ್ ಕೋಟಾದಡಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಆಫ್‌ಲೈನ್ ಮೂಲಕ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.
ಹುಬ್ಬಳ್ಳಿಯ ನೈಋತ್ಯ ರೈಲ್ವೆ ಈ ಹುದ್ದೆಗೆ ಅರ್ಜಿ ಸಲ್ಲಿಸಲು ಅರ್ಹ ಮತ್ತು ಆಸಕ್ತಿ ಇರುವ ಅಭ್ಯರ್ಥಿಗಳು ನೇಮಕಾತಿಗೆ ಸಂಬಂಧಿಸಿದಂತೆ ಅರ್ಹತೆಗಳು, ಒಟ್ಟು ಹುದ್ದೆಗಳ ವಿವರ, ಅರ್ಜಿ ಸಲ್ಲಿಸುವ ಪ್ರಕ್ರಿಯೆ, ಪ್ರಮುಖ ದಿನಾಂಕಗಳು, ಅರ್ಜಿ ಸಲ್ಲಿಸಲು ಡೈರೆಕ್ಟ್ ಲಿಂಕ್‌ಗಳು ಸೇರಿದಂತೆ ಸಂಪೂರ್ಣ ಮಾಹಿತಿಯನ್ನು ಕೆಳಗೆ ನೀಡಲಾಗಿದೆ.
South Western Railway Recruitment 2024
ಉದ್ಯೋಗದ ಸ್ಥಳ: ಹುಬ್ಬಳ್ಳಿ, ಮೈಸೂರು, ಬೆಂಗಳೂರು (ಕರ್ನಾಟಕ)
ಒಟ್ಟು ಹುದ್ದೆಗಳ ಸಂಖ್ಯೆ: 46
ವಿದ್ಯಾರ್ಹತೆ:
ನೈಋತ್ಯ ರೈಲ್ವೆ ನೇಮಕಾತಿ ಅಧಿಸೂಚನೆ ಪ್ರಕಾರ ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ಮಂಡಳಿಗಳು ಅಥವಾ ವಿಶ್ವವಿದ್ಯಾಲಯಗಳಿಂದ 10ನೇ, 12ನೇ, B.Sc ಪದವಿಯನ್ನು ಪೂರ್ಣಗೊಳಿಸಿರಬೇಕು.
ವಯೋಮಿತಿ:
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯೋಮಿತಿ 01 ಜನವರಿ 2025 ರಂತೆ ಕನಿಷ್ಠ ವಯಸ್ಸು 18 ವರ್ಷ ಪೂರೈಸಿರಬೇಕು. ಮತ್ತು ಗರಿಷ್ಠ 25 ವರ್ಷ ಮೀರಿರಬಾರದು.
South Western Railway Recruitment 2024 ವೇತನ ಶ್ರೇಣಿ:
ನೈಋತ್ಯ ರೈಲ್ವೆ ನೇಮಕಾತಿ ಅಧಿಸೂಚನೆ ಪ್ರಕಾರ ಈ ಹುದ್ದೆಗಳಿಗೆ ಆಯ್ಕೆಯಾಗುವ ಅಭ್ಯರ್ಥಿಗಳು ಪ್ರತಿ ತಿಂಗಳು 5,200 ರಿಂದ 20,200/- ರೂ. ವೇತನವನ್ನು ನೀಡಲಾಗುತ್ತದೆ.
ಆಯ್ಕೆ ಪ್ರಕ್ರಿಯೆ:
ಕ್ರೀಡಾ ಪ್ರಯೋಗಗಳು
ಶಿಕ್ಷಣ ಅರ್ಹತೆ
ದೈಹಿಕ ಸಾಮರ್ಥ್ಯ ಪರೀಕ್ಷೆ
ಡಾಕ್ಯುಮೆಂಟ್ ಪರಿಶೀಲನೆ
ವೈದ್ಯಕೀಯ ಪರೀಕ್ಷೆ
ಅರ್ಜಿ ಸಲ್ಲಿಸುವ ವಿಧಾನ:
ಅರ್ಜಿದಾರರು ಅರ್ಜಿ ನಮೂನೆಯನ್ನು ಸಂಬಂಧಿತ ಸ್ವಯಂ-ದೃಢೀಕರಿಸಿದ ಅಗತ್ಯ ದಾಖಲೆಗಳೊಂದಿಗೆ 19 ನವೆಂಬರ್-2024 ರಂದು ಅಥವಾ ಮೊದಲೇ ಈ ಕೆಳಗೆ ನೀಡಲಾದ ವಿಳಾಸಗಳಿಗೆ ರಿಜಿಸ್ಟರ್ ಪೋಸ್ಟ್, ಸ್ಪೀಡ್ ಪೋಸ್ಟ್ ಅಥವಾ ಇತರೆ ಯಾವುದೇ ಸೇವೆಗಳ ಮೂಲಕ ಕಳುಹಿಸಬೇಕು.
ಅರ್ಜಿ ಸಲ್ಲಿಸುವ ವಿಳಾಸ
ಹುಬ್ಬಳ್ಳಿ- ಅಸಿಸ್ಟೆಂಟ್ ಪರ್ಸನಲ್ ಆಫೀಸರ್; ಹೆಡ್ ಕ್ವಾಟರ್ಸ್, ಸೌತ್ ವೆಸ್ಟರ್ನ್ ರೈಲ್ವೆ ಆಫೀಸ್, ಸಿಬ್ಬಂದಿ ಇಲಾಖೆ, ರೈಲು ಸೌಧ, ಗದಗ ರಸ್ತೆ, ಹುಬ್ಬಳ್ಳಿ -580 020
ಬೆಂಗಳೂರು ವಿಳಾಸ : ಹಿರಿಯ ವಿಭಾಗೀಯ ಸಿಬ್ಬಂದಿ ಅಧಿಕಾರಿ, DRM ಕಚೇರಿ ಸಂಕೀರ್ಣ, ನೈಋತ್ಯ ರೈಲ್ವೆ, ಬೆಂಗಳೂರು-560023.
ಹುಬ್ಬಳ್ಳಿ ವಿಳಾಸ : ಹಿರಿಯ ವಿಭಾಗೀಯ ಸಿಬ್ಬಂದಿ ಅಧಿಕಾರಿ, DRM ಕಚೇರಿ ಕಾಂಪೌಂಡ್, ನೈಋತ್ಯ ರೈಲ್ವೆ, ಹುಬ್ಬಳ್ಳಿ-560020.
ಮೈಸೂರು ವಿಳಾಸ : ಹಿರಿಯ ವಿಭಾಗೀಯ ಸಿಬ್ಬಂದಿ ಅಧಿಕಾರಿ, ನೈಋತ್ಯ ರೈಲ್ವೆ, ಇರ್ವಿನ್ ರಸ್ತೆ, ಮೈಸೂರು-570001.
ಪ್ರಮುಖ ದಿನಾಂಕಗಳು:
ಅರ್ಜಿ ಸ್ವೀಕರಿಸಲು ಪ್ರಾರಂಭದ ದಿನಾಂಕ: ಅಕ್ಟೋಬರ್ 19, 2024.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ನವೆಂಬರ್ 19, 2024.
South Western Railway Recruitment 2024 ಪ್ರಮುಖ ಲಿಂಕ್‌ಗಳು:
ಅಧಿಸೂಚನೆ ನೋಡಲು: ಇಲ್ಲಿ ಕ್ಲಿಕ್ ಮಾಡಿ
ಅರ್ಜಿ ನಮೂನೆ ನೋಡಲು: ಇಲ್ಲಿ ಕ್ಲಿಕ್ ಮಾಡಿ
swr.indianrailways.gov.in ಈ ಅಧಿಕೃತ ವೆಬ್ಸೈಟ್
ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ನೇಮಕಾತಿ 2024