SSLC Marks Card Correction: 2024ನೇ ಸಾಲಿನ 10ನೇ ತರಗತಿ (SSLC) ಪರೀಕ್ಷೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳ ಅಂಕಪಟ್ಟಿಯನ್ನು ತಿದ್ದುಪಡಿ ಮಾಡಿಕೊಳ್ಳಲು ವಿದ್ಯಾರ್ಥಿಗಳಿಗೆ ನವೆಂಬರ್ 20 ರವರೆಗೆ ಅವಕಾಶ ನೀಡಲಾಗಿದೆ, ಎಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯು ತಿಳಿಸಿದೆ.
SSLC Marks Card Correction SSLC ಅಂಕಪಟ್ಟಿ ತಿದ್ದುಪಡಿ
ಈಗಾಗಲೇ ವಿದ್ಯಾರ್ಥಿಗಳಿಗೆ ಅಂಕಪಟ್ಟಿಗಳನ್ನು ಮುದ್ರಿಸಿ ಶಾಲೆಗಳಲ್ಲಿ ವಿತರಣೆ ಮಾಡಲಾಗಿದೆ. ಆದರೆ ವಿದ್ಯಾರ್ಥಿಗಳ ಅಂಕಪಟ್ಟಿಯಲ್ಲಿ ಯಾವುದೇ ತಿದ್ದುಪಡಿಗಳು ಇದರೆ ವಿದ್ಯಾರ್ಥಿಗಳು ತಮ್ಮ ಶಾಲೆಗೆ ಬೇಡಿ ನೀಡಿ ತಿದ್ದುಪಡಿಗೆ ಅರ್ಜಿ ಸಲ್ಲಿಸಬಹುದು.
2024 ನೇ ಸಾಲಿನಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳ ಅಂಕಪಟ್ಟಿಯಲ್ಲಿ ಅಭ್ಯರ್ಥಿ/ತಂದೆ/ತಾಯಿಯ ಹೆಸರು, ಜನ್ಮ ದಿನಾಂಕ ಮತ್ತು ಸೇರಿದಂತೆ ಇತರೆ ತಿದ್ದುಪಡಿಗಳಿದ್ದಲ್ಲಿ ವಿದ್ಯಾರ್ಥಿಗಳು ನವೆಂಬರ್ 20 ರೊಳಗೆ ಅರ್ಜಿ ಸಲ್ಲಿಸಬಹುದು.
ತಪ್ಪಾಗಿ ಮುದ್ರಣವಾದ, ಹರಿದಿರುವ ಅಂಕಪಟ್ಟಿಯನ್ನು ಮಂಡಲಿಯಲ್ಲಿ ನಿಗದಿಪಡಿಸಿರುವ ಶುಲ್ಕವನ್ನು ಪಾವತಿಸಿ ಮತ್ತೊಂದು ಅಂಕಪಟ್ಟಿಯನ್ನು ಪಡೆಯಬೇಕು ಹಾಗೂ ಅಂಕಪಟ್ಟಿ ಹರಿದಿದ್ದಲ್ಲಿ ಮುದ್ರಣದಲ್ಲಿ ದೋಷವಿದ್ದಲ್ಲಿ, ಪೋಟೋ ಸರಿಯಾಗಿ ಮುದ್ರಣವಾಗದಿರುವುದು ಕಂಡು ಬಂದಲ್ಲಿ ತಡ ಮಾಡದೆ ಅಂಕಪಟ್ಟಿ ಸ್ವೀಕರಿಸಿದ 05 ದಿನಗಳೊಳಗೆ ಹೊಸ ಅಂಕಪಟ್ಟಿಯನ್ನು ಪಡೆಯಲು ಪ್ರಸ್ತಾವನೆಯೊಂದಿಗೆ ಮೂಲ ಅಂಕಪಟ್ಟಿಯನ್ನು ಲಗತ್ತಿಸಿ ಮಂಡಲಿಯ ಪರಿಶೀಲನಾ ಶಾಖೆಗೆ ಮುಖ್ಯೋಪಾಧ್ಯಾಯರು ಲಿಖಿತವಾಗಿ ಮನವಿಯನ್ನು ಸಲ್ಲಿಸತಕ್ಕದ್ದು.
ಅಂಕಪಟ್ಟಿ ತಿದ್ದುಪಡಿ ಅಧಿಸೂಚನೆ : Click Here
ರಾಷ್ಟ್ರೀಯ ಬೀಜ ನಿಗಮದಲ್ಲಿ ಉದ್ಯೋಗ 1 ಲಕ್ಷಕ್ಕೂ ಅಧಿಕ ವೇತನ
ಸಣ್ಣ ಕೈಗಾರಿಕಾ ಅಭಿವೃದ್ಧಿ ಬ್ಯಾಂಕ್ ನೇಮಕಾತಿ 1 ಲಕ್ಷ ರೂ. ವೇತನ