Student Free Bus Pass 2024: ನಮಸ್ಕಾರ ಸ್ನೇಹಿತರೇ ಇವತ್ತಿನ ಈ ಲೇಖನದಲ್ಲಿ ನಮ್ಮ ಕರ್ನಾಟಕ ರಾಜ್ಯ ಸರ್ಕಾರ ಹಾಗೂ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಇಲಾಖೆಯಿಂದ ನೀಡಲಾಗುವ 2024-25 ನೇ ಸಾಲಿನ ಬಸ್ ಪಾಸ್ ಬಗ್ಗೆ ಸಂಪೂರ್ಣ ಮಾಹಿತಿ ನೋಡೋಣ. 2024 ನೇ ಸಾಲಿನ ಶೈಕ್ಷಣಿಕ ವರ್ಷದ ಪ್ರಾಥಮಿಕ, ಫ್ರೌಡ್ ಮತ್ತು ಪದವಿ ಪೂರ್ವ ಕಾಲೇಜುಗಳು ಪ್ರಾರಂಭವಾಗಿದ್ದು, ಆ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ವಿದ್ಯಾರ್ಥಿ ಬಸ್ ಪಾಸ್ (Student Bus Pass) ವಿತರಿಸಲಾಗುತ್ತಿದೆ. ಬಸ್ ಪಾಸ್ ಶುಲ್ಕ ಎಷ್ಟು? ಅರ್ಜಿ ಸಲ್ಲಿಸುವುದು ಹೇಗೆ? ಎಂಬುದರ ಕುರಿತು ಸಂಪೂರ್ಣ ಮಾಹಿತಿ ಕೆಳಗೆ ನೀಡಲಾಗಿದೆ.
Student Free Bus Pass 2024 ಪಾಸ್ ದರ ಪಟ್ಟಿ:
ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳ ಬಸ ಪಾಸ್ ಶುಲ್ಕ: 150 ರೂ.
ಪ್ರೌಢ ಶಾಲಾ ವಿದ್ಯಾರ್ಥಿಗಳ ಬಸ ಪಾಸ್ ಶುಲ್ಕ: 750 ರೂ.
ಪರಿಶಿಷ್ಟ ಜಾತಿ (SC) ಮತ್ತು ಪರಿಶಿಷ್ಟ ಪಂಗಡ (ST) ವಿದ್ಯಾರ್ಥಿಗಳ ಬಸ್ ಪಾಸ್ ಶುಲ್ಕ: 150 ರೂ.
ಪ್ರೌಢ ಶಾಲಾ ವಿದ್ಯಾರ್ಥಿನಿಯರ (ಗಡಿ ಭಾಗದ ಆಚೆಗೆ) ಶುಲ್ಕ: 150 ರೂ.
ಪದವಿ ಪೂರ್ವ ಕಾಲೇಜು- ಡಿಪ್ಲೊಮಾ ವಿದ್ಯಾರ್ಥಿಗಳಿಗೆ ಬಸ್ ಪಾಸ್ ಶುಲ್ಕ: 1050 ರೂ.
SC, ST ವಿದ್ಯಾರ್ಥಿಗಳಿಗೆ ಬಸ್ ಪಾಸ್ ಶುಲ್ಕ – 150 ರೂ.
ಐಟಿಐ, ಡಿಪ್ಲೊಮಾ ವಿದ್ಯಾರ್ಥಿಗಳಿಗೆ ಪಾಸ್ ಶುಲ್ಕ: 1310 ರೂ.
ITI, ಡಿಪ್ಲೊಮಾ (SC, ST) ವಿದ್ಯಾರ್ಥಿಗಳಿಗೆ ಪಾಸ್ ಶುಲ್ಕ : 160 ರೂ.
ವೃತ್ತಿಪರ ಕೋರ್ಸ್ ವಿದ್ಯಾರ್ಥಿಗಳಿಗೆ ಪಾಸ್ ಶುಲ್ಕ: 1550 ರೂ.
ವೃತ್ತಿಪರ ಕೋರ್ಸ್ (SC, ST) ವಿದ್ಯಾರ್ಥಿಗಳಿಗೆ ಪಾಸ್ ಶುಲ್ಕ: 150 ರೂ.
ಸಂಜೆ ಕಾಲೇಜು ವಿದ್ಯಾರ್ಥಿಗಳ ಪಾಸ್ ದರ- 1350 ರೂ.
ಸಂಜೆ ಕಾಲೇಜು ಎಸ್ಸಿ, ಎಸ್ಟಿ ವಿದ್ಯಾರ್ಥಿಗಳ ಬಸ್ ಪಾಸ್ ಶುಲ್ಕ 150 ರೂ.
ಬಸ್ ಪಾಸ್ ಅರ್ಜಿ ಸಲ್ಲಿಸಲು ಪ್ರಮುಖ ದಾಖಲೆಗಳು:
ವಿದ್ಯಾರ್ಥಿಗಳ ಆಧಾರ್ ಕಾರ್ಡ್ (Aadhar Card)
ಪಾಲಕರ ಮೊಬೈಲ್ ನಂಬರ್ (Mobile Number)
ವಿದ್ಯಾರ್ಥಿಗಳ ಇತ್ತೀಚಿನ ಪೋಟೋ
ಹಿಂದಿನ ವರ್ಷದ ಮಾರ್ಕ್ ಶಿಟ್
ವಿದ್ಯಾರ್ಥಿಗಳ ಆದಾಯ ಪ್ರಮಾಣ ಪತ್ರ
ಶಾಲಾ, ಕಾಲೇಜುಗಳಲ್ಲಿ ನೀಡಲಾದ ಪ್ರವೇಶ ಶುಲ್ಕ ರಸೀದಿ(School/College Admission Fee Receipt)
Bus Pass ಅರ್ಜಿ ಸಲ್ಲಿಸುವುದು ಹೇಗೆ?
ವಿದ್ಯಾರ್ಥಿಗಳು ಸೇವಾ ಸಿಂಧು ಪೋರ್ಟಲ್ ನಲ್ಲಿ ಆನ್‌ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು. ಸೇವಾ ಸಿಂಧು ಪೋರ್ಟಲ್ ವಿಳಾಸ sevasindhuservices.karnataka.gov.in/buspass ಮೂಲಕ ಅರ್ಜಿ ಸಲ್ಲಿಸಬಹುದು.
ಅಥವಾ ವಿದ್ಯಾರ್ಥಿ ಗಳು ಕರ್ನಾಟಕ-ಒನ್, ಗ್ರಾಮ- ಒನ್ ಮತ್ತು ಬೆಂಗಳೂರು- ಒನ್ ಕೇಂದ್ರಗಳಿಗೆ ಭೇಟಿನೀಡಿ ಅಲ್ಲಿನ ಸಿಬ್ಬಂದಿ ಸಹಾಯದಿಂದ ಆನ್‌ಲೈನ್ ಅರ್ಜಿ ಸಲ್ಲಿಸಬಹುದು.
ವಿದ್ಯಾರ್ಥಿಗಳು ಬಸ್ ಪಾಸ್‌ಗಾಗಿ ಅರ್ಜಿ ಸಲ್ಲಿಸಲು Declaration Forme ನ್ನು ಸೇವಾಸಿಂಧು ಪೋರ್ಟಲ್ ಅಥವಾ ಕರಾರಸಾ ನಿಗಮದ ವೆಬ್ ವೆಬ್ ಸೈಟ್ ನಿಂದ (https://ksrtc.karnataka.gov.in/studentpass) ಡೌನ್ ಲೋಡ್ ಮಾಡಿಕೊಡಿಕೊಂಡು ನಂತರ ಅರ್ಜಿ ಸಲ್ಲಿಸುವಾಗ Submit ಮಾಡಬೇಕು.
ಸೇವಾ ಕೇಂದ್ರಗಳಲ್ಲಿ ಅಪ್ಲಿಕೇಶನ್ ಸಲ್ಲಿಸಲು ಕೇಂದ್ರದ ಸಿಬ್ಬಂದಿಗೆ 30 ರೂಪಾಯಿ ಸೇವಾ ಶುಲ್ಕವನ್ನು ಮಾತ್ರ ನೀಡಬೇಕು.
ಇತರೆ ಸ್ಕಾಲರ್‌ಶಿಪ್ ಮಾಹಿತಿ:
- PUC ಯಿಂದ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗೆ ಪ್ರತಿ ತಿಂಗಳು 3200 ಸ್ಕಾಲರ್‌ಶಿಪ್
- SSLC ಪಾಸಾದ ವಿದ್ಯಾರ್ಥಿಗಳಿಗೆ 10,000 ವಿದ್ಯಾರ್ಥಿ ವೇತನ
- ವಿದ್ಯಾರ್ಥಿಗಳ ಖಾತೆಗೆ 50,000 ರೂ. ವಿದ್ಯಾರ್ಥಿ ವೇತನ
- ಆಧಾರ್ ಕೌಶಲ್ ಸಂಸ್ಥೆಯಿಂದ 50, 000 ವಿದ್ಯಾರ್ಥಿವೇತನ
- 6 ರಿಂದ 10 ನೇ ತರಗತಿ ವಿದ್ಯಾರ್ಥಿಗಳಿಗೆ 10,000 ರೂ. ವಿದ್ಯಾರ್ಥಿ ವೇತನ