ನಟ ದರ್ಶನ ನಟನೆಯ ಕಾಟೇರ, ರಾಬರ್ಟ್, ಚೌಕ ಕನ್ನಡ ಚಿತ್ರರಂಗಕ್ಕೆ ಮೂರು ಹಿಟ್ ಸಿನಿಮಾಗಳನ್ನು ನಿರ್ದೇಶನ ಮಾಡಿರುವ ಡೈರೆಕ್ಟರ್ ತರುಣ್ ಕಿಶೋರ್ ಸುಧೀರ್ ಮತ್ತು ಸೋನಲ್ ಮೊಂಥೆರೋ ಇಬ್ಬರು ದಾಂಪತ್ಯ ಜೀವನಕ್ಕೆ ಕಾಲಿಡುವುದಕ್ಕೆ ಸಜ್ಜಾಗಿದ್ದಾರೆ. ಪಂಚತಂತ್ರ, ಬನಾರಸ್, ರಾಬರ್ಟ್ ಸೇರಿ ವಿವಿಧ ಸಿನಿಮಾಗಳಲ್ಲಿ ನಟಿಸಿದ್ದ ಸೋನಲ್ ಮೊಂಥೆರೋ ಜೊತೆಗೆ ತರುಣ್ ಸುಧೀರ್ ಕೈ ಹಿಡಿಯಲಿದ್ದಾರೆ. ಇಲ್ಲಿದೆ ಈ ಸೆಲೆಬ್ರಿಟಿ ಕಲ್ಯಾಣದ ಎಕ್ಸ್‌ಕ್ಲೂಸಿವ್ ಮಾಹಿತಿ.
ಸ್ಯಾಂಡಲ್‌ವುಡ್‌ನ ಡೈರೆಕ್ಟರ್ ತರುಣ್ ಸುಧೀರ್ ಕಿಶೋರ್ ಸುಧೀರ್ ಮತ್ತು ನಟಿ ಸೋನಲ್ ಮೊಂಥೆರೋ (Tharun Sudhir And Sonal Monteiro Marriage) ಇಬ್ಬರು ಮದುವೆ ಆಗುತ್ತಿರುವ ಸುದ್ದಿ ಎಲ್ಲರಿಗೂ ತಿಳಿದಿದೆ. ಸೋನಲ್ ಮೊಂಥೆರೋ ಸಿನಿಮಾದಲ್ಲಿ ನಟಿ ಅಷ್ಟೇ ಅಲ್ಲ ಈಗ ತರುಣ್ ಸುಧೀರ್ ಬಾಳಿಗೇ ನಾಯಕಿಯಾಗುತ್ತಿದ್ದಾರೆ. ಅಂದಹಾಗೆ ಈ ಜೋಡಿಯ ಮದುವೆ ಯಾವಾಗ ಎಂಬುದು ಎಲ್ಲರ ಪ್ರಶ್ನೆಗೆ ಉತ್ತರ ಸಿಕ್ಕಿದೆ.
ಸುಧೀರ್ ಮತ್ತು ನಟಿ ಸೋನಲ್ ಸೋಶಿಯಲ್ ಮೀಡಿಯಾ (Instagram) ದಲ್ಲಿ ಪ್ರೀ-ವೆಡ್ಡಿಂಗ್ ವಿಡಿಯೋವನ್ನು ಇಬ್ಬರು ಹಂಚಿಕೊಂಡಿದ್ದಾರೆ. ಈ ವಿಡಿಯೋ ಚಿತ್ರಮಂದಿರದಲ್ಲಿ ಶೂಟ್ ಮಾಡಲಾಗಿದೆ. ಈ ಜೋಡಿಗೆ ಎಲ್ಲಾ ಕನ್ನಡ ಚಿತ್ರರಂಗದ ಸೆಲೆಬ್ರಿಟಿ ಕಡೆಯಿಂದ ಶುಭಾಶಯ ಕೋರಲಾಗುತ್ತಿದೆ.
ತರುಣ್ – ಸೋನಲ್ ಮದುವೆ ಯಾವಾಗ ಎಲ್ಲಿ?
ತರುಣ್ ಸುಧೀರ್ ಕಿಶೋರ್ ಮತ್ತು ಸೋನಲ್ ಮೊಂಥೆರೋ ಈ ಜೋಡಿ ಮದುವೆಯು ಆಗಸ್ಟ್ 11ರಂದು ಬೆಂಗಳೂರಿನ ಕೆಂಗೇರಿ ಬಳಿ ಇರುವ ಪೂರ್ಣಿಮಾ ಪ್ಯಾಲೇಸ್‌ನಲ್ಲಿ ಕಲ್ಯಾಣ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.