ಜಿಲ್ಲಾ ಪಂಚಾಯತ್ ನಲ್ಲಿ ಅಟೆಂಡರ್ ಹುದ್ದೆಗಳ ನೇಮಕಾತಿ ರೂ. 57550 ವೇತನ : Tumkur Zilla Panchayat Recruitment 2025 

WhatsApp Group Join Now
Telegram Group Join Now

Tumkur Zilla Panchayat Recruitment 2025: ತುಮಕೂರು ಜಿಲ್ಲಾ ಪಂಚಾಯತ್‌ ಇದೀಗ ತುಮಕೂರು ಜಿಲ್ಲಾ ಆಯುಷ್ ಕಚೇರಿ ವ್ಯಾಪ್ತಿಯಲ್ಲಿ ಆಸ್ಪತ್ರೆಗಳಲ್ಲಿ ಖಾಲಿ ಇರುವ ತಜ್ಞವೈದ್ಯರು, ಕ್ಷಾರಸೂತ್ರ ಅಟೆಂಡರ್, ಫಾರ್ಮಾಸಿಸ್ಟ್, ಮಸಾಜಿಸ್ಟ್‌ ಹುದ್ದೆಗಳನ್ನು ಭರ್ತಿ ಮಾಡಲು ಅಜಿ೯ ಆಹ್ವಾನಿಸಲಾಗಿದೆ.

ತುಮಕೂರು ಜಿಲ್ಲಾ ಆಯುಷ್ ಕಚೇರಿ ವ್ಯಾಪ್ತಿಯಲ್ಲಿ ಕೇಂದ್ರ ಪುರಸ್ಕೃತ ಯೋಜನೆಯ ರಾಷ್ಟ್ರೀಯ ಆಯುಷ್ ಅಭಿಯಾನದಡಿ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಅಗತ್ಯವಿರುವ ವಿದ್ಯಾರ್ಹತೆ,(Qualification) ವೇತನ ಶ್ರೇಣಿ, (Salary) ವಯೋಮಿತಿ, (Age Limit) ಅರ್ಜಿ ಶುಲ್ಕ,( Application Fees ) ಹುದ್ದೆಗಳ ವಿವರ, ಇತರೆ ಎಲ್ಲಾ ಮಾಹಿತಿ ಕೆಳಗೆ ವಿವರಿಸಲಾಗಿದೆ, ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮುನ್ನ ಅಧಿಸೂಚನೆ (Notification) ಓದಿ ನಂತರ ಅರ್ಜಿ ಸಲ್ಲಿಸಿ.

ಹುದ್ದೆ ಹೆಸರುಹುದ್ದೆಗಳ ಸಂಖ್ಯೆ
ತಜ್ಞವೈದ್ಯರು (ಆಯುರ್ವೇದ)02
ತಜ್ಞವೈದ್ಯರು (ಹೋಮಿಯೋಪತಿ)01
ಕ್ಷಾರಸೂತ್ರ ಅಟೆಂಡರ್01
ಫಾರ್ಮಾಸಿಸ್ಟ್04
ಮಸಾಜಿಸ್ಟ್‌01

Tumkur Zilla Panchayat Recruitment 2025 ವಿದ್ಯಾರ್ಹತೆ ವಿವರ:

ತಜ್ಞವೈದ್ಯರು (ಆಯುರ್ವೇದ): ಅಭ್ಯಾಥಿ೯ಯು ಕನಿಷ್ಠ 3 ವರ್ಷಗಳ ಅನುಭವದೊಂದಿಗೆ ಬಿಎಎಂಎಸ್‌, ಎಂಎಸ್ ಶಲ್ಯತಂತ್ರ ಅಥವಾ ಎಂಡಿ ಪಂಚಕರ್ಮ / ಕಾಯಚಿಕಿತ್ಸಾ ವಿಷಯದಲ್ಲಿ ಸ್ನಾತಕೋತ್ತರ ಪದವಿ ವಿದ್ಯಾಹ೯ತೆ ಹೊಂದಿರಬೇಕು.
ತಜ್ಞವೈದ್ಯರು (ಹೋಮಿಯೋಪತಿ): ಕನಿಷ್ಠ 3 ವರ್ಷಗಳ ಅನುಭವದೊಂದಿಗೆ ಬಿಹೆಚ್‌ಎಂಎಸ್‌, ಎಂಎಸ್ / ಎಂಡಿ ಸ್ನಾತಕೋತ್ತರ ಪದವಿ ಅಥವಾ ಪಿಜಿ ಅಲೋಯೆನ್ಸ್ ರಹಿತವಾಗಿ ಬಿಹೆಚ್‌ಎಂಎಸ್‌, ಸ್ನಾತಕ ಪದವಿ ಸಹ ಪರಿಗಣಿಸಲಾಗುವುದು.
ಕ್ಷಾರಸೂತ್ರ ಅಟೆಂಡರ್: ಅಭ್ಯಾಥಿ೯ಯು 10ನೇ ತರಗತಿ ವಿದ್ಯಾರ್ಹತೆ ಜೊತೆಗೆ ಆಯುಷ್ ಆಸ್ಪತ್ರೆ / ಚಿಕಿತ್ಸಾಲಯಗಳಲ್ಲಿ ಕನಿಷ್ಠ 2 ವರ್ಷ ಕೆಲಸದ ಅನುಭವ ಹೊಂದಿರತಕ್ಕದ್ದು.
ಫಾರ್ಮಾಸಿಸ್ಟ್: ಬಿ.ಫಾರ್ಮಾ ಪದವಿ ಜತೆಗೆ, 2 ವರ್ಷ ಅನುಭವ. ಅಥವಾ ಡಿಪ್ಲೊಮ ಇನ್ ಫಾರ್ಮಸಿ ವಿದ್ಯಾಹ೯ತೆಯೊಂದಿಗೆ. ಕಂಪ್ಯೂಟರ್ ಜ್ಞಾನ ಹೊಂದಿರಬೇಕು.
ಮಸಾಜಿಸ್ಟ್‌: ಕನಿಷ್ಠ 10ನೇ ತರಗತಿ ಪಾಸಾಗಿರಬೇಕು. ಹಾಗೂ ಆಯುಷ್ ಆಸ್ಪತ್ರೆ / ಚಿಕಿತ್ಸಾಲಯಗಳಲ್ಲಿ ಕನಿಷ್ಠ 02 ವರ್ಷ ಕರ್ತವ್ಯ ನಿರ್ವಹಿಸಿರಬೇಕು.

ವೇತನ ಶ್ರೇಣಿ:

ಹುದ್ದೆ ವೇತನ ಶ್ರೇಣಿ ವಿವರ
ತಜ್ಞವೈದ್ಯರು (ಆಯುರ್ವೇದ)ರೂ. 57550.
ತಜ್ಞವೈದ್ಯರು (ಹೋಮಿಯೋಪತಿ)ರೂ. 57550.
ಕ್ಷಾರಸೂತ್ರ ಅಟೆಂಡರ್ರೂ. 18,500.
ಫಾರ್ಮಾಸಿಸ್ಟ್ರೂ. 27,550.
ಮಸಾಜಿಸ್ಟ್‌ರೂ. 18500.

ವಯೋಮಿತಿ:

ತುಮಕೂರು ಜಿಲ್ಲಾ ಪಂಚಾಯತ್‌ ಅಧಿಸೂಚನೆ ಪ್ರಕಾರ ಅಜಿ೯ ಸಲ್ಲಿಸುವ ಅಭ್ಯಾಥಿ೯ಗಳ ವಯೋಮಿತಿ ದಿನಾಂಕ 01-01-2025ಕ್ಕೆ ಈ ಕೆಳಗಿನಂತೆ ಹೊಂದಿರಬೇಕು.

  • ಸಾಮಾನ್ಯ ವಗ೯ದ ಅಭ್ಯರ್ಥಿಗಳ ವಯೋಮಿತಿ ಕನಿಷ್ಟ 18 ವರ್ಷ ಹಾಗೂ ಗರಿಷ್ಟ -35 ವರ್ಷ ನಡುವೆ.
  • ಪ.ಜಾತಿ ಮತ್ತು ಪ.ಪಂಗಡ (SC/ST) ವಗ೯ದ ಅಭ್ಯರ್ಥಿಗಳ ವಯಸ್ಸು ಕನಿಷ್ಟ 18 ವರ್ಷ ಗರಿಷ್ಟ 40 ವರ್ಷ ಮೀರಿರಬಾರದು.
  • ಪ್ರ-1, 2ಎ, 2ಬಿ, 3ಎ, 3ಬಿ ವಗ೯ದ ಅಭ್ಯರ್ಥಿಗಳ ವಯಸ್ಸು ಕನಿಷ್ಠ-18 ವರ್ಷ ಗರಿಷ್ಟ 38 ವರ್ಷದ ನಡುವೆ ಇರಬೇಕು.

ಅರ್ಜಿ ಸಲ್ಲಿಸುವ ವಿಧಾನ:
ಅರ್ಜಿಯನ್ನು ಸಲ್ಲಿಸುವ ಅಭ್ಯಾಥಿ೯ಯು ದಿನಾಂಕ: 17-03-2025 ರ ಸಂಜೆ 05-00 ಗಂಟೆಯೊಳಗೆ. ಖುದ್ದಾಗಿ ಅಥವಾ ಅಂಚೆ ಮೂಲಕ ಈ ಕೆಳಗಿನ ವಿಳಾಸಕ್ಕೆ ಕಳುಹಿಸಬೇಕು.

ಅಜಿ೯ ಸಲ್ಲಿಸುವ ವಿಳಾಸ:
ಜಿಲ್ಲಾ ಪಂಚಾಯತ್ ತುಮಕೂರು, ಜಿಲ್ಲಾ ಆಯುಷ್ ಅಧಿಕಾರಿಗಳ ಕಚೇರಿ, ಜಿಲ್ಲಾ ಆಸ್ಪತ್ರೆ ಆವರಣ, ಬಿ.ಹೆಚ್ ರಸ್ತೆ, ತುಮಕೂರು, ಕರ್ನಾಟಕ.

ಆಯ್ಕೆ ವಿಧಾನ
ಈ ಅಧಿಸೂಚನೆ ಪ್ರಕಾರ ಅಭ್ಯರ್ಥಿಗಳನ್ನು ವಿದ್ಯಾರ್ಹತೆ ಆಧಾರದ ಮೇಲೆ ಸಂದರ್ಶನ ನಡೆಸಿ ಆಯ್ಕೆ ಮಾಡಲಾಗುತ್ತದೆ.

ಪ್ರಮುಖ ದಿನಾಂಕಗಳು :
ಅರ್ಜಿ ಸ್ವೀಕರಿಸಲು ಪ್ರಾರಂಭದ ದಿನಾಂಕ : 17-ಫೆಬ್ರುವರಿ-2025
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:  17-ಮಾರ್ಚ್-2025

Tumkur Zilla Panchayat Recruitment 2025 ಪ್ರಮುಖ ಲಿಂಕ್ ಗಳು:

ಅಧಿಕೃತ ಅಧಿಸೂಚನೆಇಲ್ಲಿ ಕ್ಲಿಕ್ ಮಾಡಿ
ಅಧಿಕೃತ ವೆಬ್‌ಸೈಟ್ ವಿಳಾಸtumkur.nic.in

ಈ ಸುದ್ದಿಯನ್ನೂ ಓದಿ: ಭಾರತೀ ರೈತರ ರಸಗೊಬ್ಬರ ಸಹಕಾರಿ ನಿಯಮಿತ ನೇಮಕಾತಿ

ಈ ಸುದ್ದಿಯನ್ನೂ ಓದಿ: BSNL ಹೋಳಿ ಹಬ್ಬಕ್ಕೆ ಧಮಾಕ ಆಫರ್ 2GB ಡೇಟಾ, ಉಚಿತ ಕಾಲ್, 14 ತಿಂಗಳ ವ್ಯಾಲಿಡಿಟಿ

Leave a Comment