ಕೃಷಿ ವಿಶ್ವವಿದ್ಯಾಲಯ ಧಾರವಾಡ ದಲ್ಲಿ (USA Dharwad) ಖಾಲಿ ಇರುವ ಅಸಿಸ್ಟಂಟ್ ಪ್ರೊಫೆಸರ್ ಹುದ್ದೆಗಳನ್ನು ಅರ್ಹ ಅಭ್ಯರ್ಥಿಗಳಿಂದ ಭರ್ತಿ ಮಾಡಲು ನೇಮಕಾತಿ ಅಧಿಸೂಚನೆಯನ್ನು ಬಿಡುಗಡೆ ಮಾಡಲಾಗಿದೆ.
ಕೃಷಿ ವಿಶ್ವವಿದ್ಯಾಲಯ ಧಾರವಾಡ (University of Agricultural Sciences Dharwad) ಈ ಹುದ್ದೆಗೆ ಅರ್ಜಿ ಸಲ್ಲಿಸಲು ಅರ್ಹ ಮತ್ತು ಆಸಕ್ತಿ ಇರುವ ಅಭ್ಯರ್ಥಿಗಳು ನೇಮಕಾತಿಗೆ ಸಂಬಂಧಿಸಿದಂತೆ ಅರ್ಹತೆಗಳು, ಒಟ್ಟು ಹುದ್ದೆಗಳ ವಿವರ, ಅರ್ಜಿ ಸಲ್ಲಿಸುವ ಪ್ರಕ್ರಿಯೆ, ಪ್ರಮುಖ ದಿನಾಂಕಗಳು, ಅರ್ಜಿ ಸಲ್ಲಿಸಲು ಡೈರೆಕ್ಟ್ ಲಿಂಕ್‌ಗಳು ಸೇರಿದಂತೆ ಸಂಪೂರ್ಣ ಮಾಹಿತಿಯನ್ನು ಕೆಳಗೆ ನೀಡಲಾಗಿದೆ.
UAS Dharwad Recruitment 2024
ಹುದ್ದೆಗಳ ಹೆಸರು: ಸಹಾಯಕ ಪ್ರಾಧ್ಯಾಪಕರು
ಒಟ್ಟು ಹುದ್ದೆಗಳ ಸಂಖ್ಯೆ: 57
ಉದ್ಯೋಗದ ಸ್ಥಳ: ಧಾರವಾಡ, ಸಿರಸಿ, ವಿಜಯಪುರ (ಕರ್ನಾಟಕ)
ಹುದ್ದೆಗಳ ವಿವರ:
ಅಗ್ರಿಕಲ್ಚರ್ ಅಂಡ್ ಅಪ್ಲೈಡ್ ಸೈನ್ಸ್ ವಿಭಾಗ: 18
ಕಂಮ್ಯುನಿಟಿ ಸೈನ್ಸ್ ವಿಭಾಗ: 09
ಅರಣ್ಯ ವಿಜ್ಞಾನ: 06
ಬೇಸಿಕ್ ಸೈನ್ಸ್ ಮತ್ತು ಮಾನವಿಕ ವಿಭಾಗ: 11
ಪಾರ್ಟ್ ಟೈಮ್ ನೇಮಕ ಮಾಡುವ ಹುದ್ದೆಗಳ ಸಂಖ್ಯೆ: 13
ಶೈಕ್ಷಣಿಕ ಅರ್ಹತೆ:
ಕೃಷಿ ವಿಶ್ವವಿದ್ಯಾಲಯ ಧಾರವಾಡ ನೇಮಕಾತಿ ಅಧಿಸೂಚನೆಯ ಪ್ರಕಾರ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಖಾಲಿ ಇರುವ ಹುದ್ದೆಗಳಿಗೆ ಅನುಗುಣವಾಗಿ ಸ್ನಾತಕೋತ್ತರ ಪದವಿ, ಪಿಎಚ್ ಡಿ, ಎನ್ ಇಟಿ ವಿದ್ಯಾರ್ಹತೆಯನ್ನು ಹೊಂದಿರಬೇಕು.
ವಯೋಮಿತಿ:
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ಗರಿಷ್ಠ ವಯೋಮಿತಿ 60 ವರ್ಷ ಮೀರಿರಬಾರದು.
UAS Dharwad Recruitment 2024 ವೇತನ ಶ್ರೇಣಿ:
ಈ ಹುದ್ದೆಗಳಿಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಪ್ರತಿ ತಿಂಗಳು 40,000 ರಿಂದ 45,000 ರೂ. ವೇತನವನ್ನು ನೀಡಲಾಗುತ್ತದೆ.
ಆಯ್ಕೆ ವಿಧಾನ:
ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳನ್ನು ಅವರು ಹೊಂದಿರುವ ವಿದ್ಯಾರ್ಹತೆ ಮತ್ತು ಸಂದರ್ಶನದ ಮೂಲಕ ಮೂಲಕ ನೇಮಕ ಆಯ್ಕೆ ಮಾಡಿಕೊಳ್ಳಲಾಗುತ್ತದೆ.
ಸಂದರ್ಶನದ ವಿಳಾಸ:
ಕುಲಸಚಿವರ ಸಂದರ್ಶನ ಕೊಠಡಿ
ಕೃಷಿ ವಿಶ್ವವಿದ್ಯಾಲಯ ಕೃಷಿನಗರ ಧಾರವಾಡ 580005.
ಸಂದರ್ಶನ ದಿನಾಂಕಗಳು:
ಈ ಮೇಲಿನ ಎಲ್ಲ ವಿಭಾಗದ ಹುದ್ದೆಗಳಿಗೆ ಅನುಸಾರ ನವೆಂಬರ್ 12 ರಿಂದ 26, 2024 ರವರೆಗೆ ನೇರ ಸಂದರ್ಶನ ಹಾಜರಾಗಬೇಕು.
ಪ್ರಮುಖ ದಿನಾಂಕಗಳು:
ಅಧಿಸೂಚನೆ ಬಿಡುಗಡೆಯಾದ ದಿನಾಂಕ: 28/10/2024
ಸಂದರ್ಶನದ ದಿನಾಂಕ: ನವೆಂಬರ್ 12 ರಿಂದ 26, 2024 ವರಗೆ
UAS Dharwad Recruitment 2024 ಪ್ರಮುಖ ಲಿಂಕ್‌ಗಳು:
ಅಧಿಸೂಚನೆ ಮತ್ತು ಅರ್ಜಿ ನಮೂನೆ ನೋಡಲು: ಇಲ್ಲಿ ಕ್ಲಿಕ್ ಮಾಡಿ
ವೆಬ್ ಸೈಟ್ ವಿಳಾಸ: uasd.edu
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನೇಮಕಾತಿ 2024
ಕರ್ನಾಟಕ ಲೋಕಾಯುಕ್ತ ಸಂಸ್ಥೆಯಲ್ಲಿ ಕ್ಲರ್ಕ್ ಹುದ್ದೆಗಳ ನೇಮಕಾತಿ 2024
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ನೇಮಕಾತಿ SSLC, PUC ಪಾಸಾದವರು ಅರ್ಜಿ ಸಲ್ಲಿಸಿ