UPI Transaction Limit: ದೇಶದಾದ್ಯಂತ ಲಕ್ಷಾಂತರ ತೆರಿಗೆದಾರರಿಗೆ ಸಹಾಯ ಮಾಡಲು ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (ಎನ್ಪಿಸಿಐ) ಇನ್ಮುಂದೆ, ಯುನಿಫೈಡ್ ಪೇಮೆಂಟ್ಸ್ ಇಂಟರ್‌ಫೇಸ್ (UPI) ಬಳಸಿ ತೆರಿಗೆ ಪಾವತಿಗೆ ವಹಿವಾಟಿನ ಮಿತಿಯನ್ನು ₹5 ಲಕ್ಷದವರೆಗೆ ಹೆಚ್ಚಿಸಿದೆ. ಇಂದಿನಿಂದ ಅಂದರೆ ಸೆಪ್ಟೆಂಬರ್ 16 ರಿಂದ ಪ್ರತಿ ವಹಿವಾಟಿಗೆ 5 ಲಕ್ಷ ರೂ.ಗಳವರೆಗೆ ತೆರಿಗೆ ಪಾವತಿಸಲು ಸಾಧ್ಯವಿದೆ.
ಇಂದಿನಿಂದ UPI ಪಾವತಿ ಮಿತಿಯನ್ನು ರೂ 5 ಲಕ್ಷ ಏರಿಕೆ ಮಾಡಲಾಗಿದೆ. ಕೆಲವು ನಿರ್ದಿಷ್ಟ ಉದ್ದೇಶಗಳಿಗೆ ಮಾತ್ರ ಸೀಮಿತವಾಗಿರುತ್ತದೆ. ತೆರಿಗೆ ಪಾವತಿ, ಆಸ್ಪತ್ರೆ ಮತ್ತು ಶೈಕ್ಷಣಿಕ ಸಂಸ್ಥೆಗಳು, ಐಪಿಒಗಳು, ರಿಸರ್ವ್ ಬ್ಯಾಂಕ್‌ನ ನೇರ ರಿಟೇಲ್ ಯೋಜನೆಗಳಿಗೆ ಈ ಮಿತಿ ಅನ್ವಯಿಸುತ್ತದೆ.
UPI Transaction Limit
ಎಲ್ಲಿ ಬಳಕೆ ಮಾಡಬಹುದು:
ತೆರಿಗೆ ಪಾವತಿಗಳು
ಆಸ್ಪತ್ರೆಗಳು ಮತ್ತು ಶಿಕ್ಷಣ ಸಂಸ್ಥೆಗಳು
IPOಗಳು ಮತ್ತು RBI ಚಿಲ್ಲರೆ ರಿಟೇಲ್ ಯೋಜನೆಗಳಿಗೆ ಈ ಮಿತಿ ಅನ್ವಯಿಸುತ್ತದೆ.
ಈಗಾಗಲೇ ಸಾಮಾನ್ಯ ವಹಿವಾಟುಗಳಿಗೆ 1 ಲಕ್ಷ ರೂ. ಮಿತಿಯನ್ನು ನೀಡಲಾಗಿದೆ. ಬಂಡವಾಳ ಮಾರುಕಟ್ಟೆ, ವಿಮೆ, ವಿದೇಶದಿಂದ ಬರುವ ಒಳಪಾವತಿಗೆ ರೂ. 2 ಲಕ್ಷ ಇದೆ. ಆದರೀಗ ಈ ಮಿತಿಯನ್ನು 5 ಲಕ್ಷ ಕ್ಕೆ ಏರಿಕೆ ಮಾಡಲಾಗಿದೆ. ಗ್ರಾಹಕರು ಈ ಮಿತಿಯನ್ನು ಬಳಕೆ ಮಾಡುವ ಮುನ್ನ ತಮ್ಮಗೆ ಸಂಬಂಧಿಸಿದ ಬ್ಯಾಂಕ್‌ಗಳಲ್ಲಿ, ಯುಪಿಐ ಆ್ಯಪ್‌ಗಳಲ್ಲಿ ಪರಿಶೀಲಿಸುವಂತೆ ಎನ್‌ಸಿಪಿಐ (ನ್ಯಾಷನಲ್ ಪೇಮೆಂಟ್ಸ್ ಕಾರ್ಪೋರೇಷನ್ ಆಫ್ ಇಂಡಿಯಾ) ಸೂಚನೆ ನೀಡಿದೆ.
ಇದನ್ನೂ ಓದಿ: ಮಾನಧನ್ ಯೋಜನೆಯಡಿ ರೈತರಿಗೆ ಪ್ರತಿ ತಿಂಗಳು 3000 ರೂ. ಇಗಲೇ ಅಪ್ಲೈ ಮಾಡಿ.
ವಿವಿಧ ಬ್ಯಾಂಕ್‌ಗಳ ಮಿತಿ:
Google Pay UPI ಪ್ರಕಾರ ಬ್ಯಾಂಕ್-ವಾರು ಮಿತಿಗಳನ್ನು ನೀಡುತ್ತದೆ. ಅಲಹಾಬಾದ್ ಬ್ಯಾಂಕ್‌ನ UPI ವಹಿವಾಟಿನ ಮಿತಿಯು 25,000 ರೂ. ನೀಡಿದೆ, ಹಾಗೂ HDFC ಬ್ಯಾಂಕ್ ಮತ್ತು ICICI ಬ್ಯಾಂಕ್ ಪೀರ್-ಟು-ಪೀರ್ ಪಾವತಿಗಳಿಗಾಗಿ 1 ಲಕ್ಷದವರೆಗಿನ UPI ವಹಿವಾಟುಗಳನ್ನು ಅನುಮತಿ ನೀಡುತ್ತವೆ.
ಇದನ್ನೂ ಓದಿ: ಗೂಗಲ್ ಪೇ ಮೂಲಕ 1 ಲಕ್ಷ ರೂ. ವರೆಗೆ ತ್ವರಿತ ಲೋನ್ ಪಡೆಯಿರಿ…! ಸಂಪೂರ್ಣ ಮಾಹಿತಿ ಇಲ್ಲಿದೆ