ನಮಸ್ಕಾರ ಸ್ನೇಹಿತರೇ ಈ ಲೇಖನದಲ್ಲಿ (Vidyadhan Karnataka Scholarship 2024) SSLC ಪಾಸಾದ ವಿದ್ಯಾರ್ಥಿಗಳು ತಮ್ಮ ಮುಂದಿನ ವಿದ್ಯಾಭ್ಯಾಸ ಮುಂದುವರಿಸಲು ಆರ್ಥಿಕ ಸಹಾಯ ನೀಡಲು ಸರೋಜಿನಿ ದಾಮೋದರನ್ ಫೌಂಡೇಶನ್ ವತಿಯಿಂದ ನೀಡಲಾಗುವ ವಿದ್ಯಾಧನ ವಿದ್ಯಾರ್ಥಿವೇತನದ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗುವುದು ಈ ಲೇಖನ ಸಂಪೂರ್ಣ ಓದಿ.
Vidyadhan Karnataka Scholarship 2024 ಮಾಹಿತಿ:
ವಿದ್ಯಾರ್ಥಿ ವೇತನಕ್ಕೆ ಯಾರು ಅರ್ಹರು:
ಈ ವಿದ್ಯಾರ್ಥಿ ವೇತನವು ಶೈಕ್ಷಣಿಕವಾಗಿ ಭರವಸೆ ಮತ್ತು ಆರ್ಥಿಕವಾಗಿ ಕಡಿಮೆ ಸವಲತ್ತು ಹೊಂದಿರುವ ವಿದ್ಯಾರ್ಥಿಗಳನ್ನು ಬೆಂಬಲಿಸುವ ಗುರಿ ಹೊಂದಿದೆ. ವಿದ್ಯಾರ್ಥಿಗಳು ರಾಜ್ಯದ ಯಾವುದೇ ಮಾನ್ಯತೆ ಪಡೆದ ಶಾಲೆಯಿಂದ 2023 ನೇ ಸಾಲಿನಲ್ಲಿ 10 ನೇ ತರಗತಿ ಉತ್ತೀರ್ಣರಾಗಿರಬೇಕು. ಹಾಗೂ ಪ್ರಸ್ತುತ ಪ್ರಥಮ ಪಿಯುಸಿ ಅಥವಾ ದ್ವೀತಿಯ ಪಿಯುಸಿ ಯಲ್ಲಿ ವ್ಯಾಸಂಗ ಮಾಡುತ್ತಿರಬೇಕು.
ಪ್ರಸ್ತುತ ಪ್ರಥಮ ಪಿಯುಸಿ ಅಥವಾ ದ್ವೀತಿಯ ಪಿಯುಸಿ ಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ಶಿಕ್ಷಣ ಮುಂದುವರಿಸಲು ಸರೋಜಿನಿ ದಾಮೋದರನ್ ಫೌಂಡೇಶನ್ ವತಿಯಿಂದ ವಿದ್ಯಾಧನ ವಿದ್ಯಾರ್ಥಿ ವೇತನ ನೀಡಲಾಗುತ್ತಿದೆ.
ವಿದ್ಯಾರ್ಥಿ ವೇತನದ ಮೊತ್ತ:
ವಿದ್ಯಾಧನ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಿ ಆಯ್ಕೆಯಾಗುವ ವಿದ್ಯಾರ್ಥಿಗಳು ಸರೋಜಿನಿ ದಾಮೋದರನ್ ಫೌಂಡೇಶನ್ ವತಿಯಿಂದ ವಾರ್ಷಿಕ 10, 000 ರೂ. ವಿದ್ಯಾರ್ಥಿ ವೇತನ ಪಡೆಯುತ್ತಾರೆ ಆಸಕ್ತ ಅರ್ಜಿ ಸಲ್ಲಿಸಿ.
Vidyadhan Scholarship 2024 ಅರ್ಹತೆಗಳು:
- ವಿದ್ಯಾರ್ಥಿಗಳು ಕರ್ನಾಟಕದಲ್ಲಿ ನೆಲೆಸಿರಬೇಕು.
- ಕರ್ನಾಟಕದ ಶಾಲೆಗಳಲ್ಲಿ 2023 ನೇ ಸಾಲಿನಲ್ಲಿ SSLC ಪರೀಕ್ಷೆಯಲ್ಲಿ ಪಾಸಾಗಿರಬೇಕು.
- ವಿದ್ಯಾರ್ಥಿ SSLC ಪರೀಕ್ಷೆಯಲ್ಲಿ 90% ಅಥವಾ 9 CGPA ಅಂಕ ಪಡೆದಿರಬೇಕು. (ಗಮನಿಸಿ: ವಿಕಲಾಂಗ ವಿದ್ಯಾರ್ಥಿಗಳ ಕಟ್-ಆಫ್ ಮಾರ್ಕ್ 75% ಅಥವಾ 7.5 CGPA ಆಗಿರಬೇಕು.)
- ಎಲ್ಲಾ ಮೂಲಗಳಿಂದ ವಿದ್ಯಾರ್ಥಿ ಕುಟುಂಬದ ವಾರ್ಷಿಕ ಆದಾಯ 2,00,000 ರೂ. ಕ್ಕಿಂತ ಕಡಿಮೆ ಇರಬೇಕು.
ಪ್ರಮುಖ ದಾಖಲೆಗಳು:
SSLC ಅಂಕಪಟ್ಟಿ ಸ್ಕ್ಯಾನ್ ಮಾಡಿದ ಪ್ರತಿ
ಸರ್ಕಾರದಿಂದ ನೀಡಲಾದ ಆದಾಯ ಪ್ರಮಾಣಪತ್ರದ ಸ್ಕ್ಯಾನ್ ಮಾಡಿದ ಪ್ರತಿ
ಇತ್ತೀಚಿನ ಪಾಸ್‌ಪೋರ್ಟ್ ಅಳತೆ ಪೋಟೋ
ಅಂಗವಿಕಲ ವಿದ್ಯಾರ್ಥಿಗಳು ತಮ್ಮ ಅಂಗವೈಕಲ್ಯ ಪ್ರಮಾಣ ಪತ್ರ.
ವಿದ್ಯಾರ್ಥಿಗಳ ಹೆಸರಿನ ಇ- ಮೇಲ್- ಐಡಿ
ಅರ್ಜಿ ಸಲ್ಲಿಸುವುದು ಹೇಗೆ?
ಅರ್ಹ ಮತ್ತು ಆಸಕ್ತ ವಿದ್ಯಾರ್ಥಿಗಳು ದಿನಾಂಕ 30 ಜೂನ್ 2024 ರೊಳಗೆ ವಿದ್ಯಾರ್ಥಿವೇ ತನ ಅರ್ಜಿಗಾಗಿ vidyadhan.org ವೆಬ್‌ಸೈಟ್ ಅಥವಾ SDF VIDYA ಮೊಬೈಲ್ ಅಪ್ಲಿಕೇಶನ್ ಲಭ್ಯವಿದೆ ಅರ್ಜಿ ಸಲ್ಲಿಸಬಹುದು.
ಹೆಚ್ಚಿನ ಮಾಹಿತಿಗಾಗಿ: vidyadhan.karnataka@sdfoundationindia.com ಗೆ ಮೇಲ್ ಅಥವಾ 9663517131 (ಸಹಾಯವಾಣಿ ಸಂಖ್ಯೆ ಗೆ ಸಂಪರ್ಕಿಸಬಹುದು.
Vidyadhan Scholarship 2024 Important Links
ಅರ್ಜಿ ಸಲ್ಲಿಸಲು | ಇಲ್ಲಿ ಕ್ಲಿಕ್ ಮಾಡಿ |
ವೆಬ್‌ಸೈಟ್ ವಿಳಾಸ | vidyadhan.org |
ಪದವಿ ವಿದ್ಯಾರ್ಥಿಗಳಿಗೆ 1 ಲಕ್ಷ ರೂ. ವಿದ್ಯಾರ್ಥಿವೇತನ
ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 30-06-2024
ಸ್ಕ್ರೀನಿಂಗ್ ಪರೀಕ್ಷೆ ದಿನಾಂಕ: 28-07-2024
ಸಂದರ್ಶನದ ದಿನಾಂಕ: 04 ಆಗಸ್ಟ್ ರಿಂದ 31ನೇ ಆಗಸ್ಟ್ 2024 ರವರೆಗೆ.