ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಚಾಮರಾಜನಗರ ಜಿಲ್ಲೆಯ ವ್ಯಾಪ್ತಿಯಲ್ಲಿ ಬರುವ ವಿವಿಧ ಗ್ರಾಮ ಪಂಚಾಯತಿಯ ಅಂಗನವಾಡಿ ಕೇಂದ್ರಗಳಲ್ಲಿ ಖಾಲಿ ಇರುವ ಅಂಗನವಾಡಿ ಕಾರ್ಯಕರ್ತೆ ಮತ್ತು ಅಂಗನವಾಡಿ ಸಹಾಯಕಿಯರು (Anganwadi Worker & Helper) ಹುದ್ದೆಗಳನ್ನು ಅರ್ಹ ಮಹಿಳಾ ಅಭ್ಯರ್ಥಿಗಳಿಂದ ಭರ್ತಿ ಮಾಡಲು ಆನ್‌ಲೈನ್ ಮೂಲಕ ಅರ್ಜಿಯನ್ನು ಆಹ್ವಾನಿಸಲಾಗಿದೆ.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಚಾಮರಾಜನಗರ (WCD Chamarajanagar) ಈ ಹುದ್ದೆಗೆ ಅರ್ಜಿ ಸಲ್ಲಿಸಲು ಅರ್ಹ ಮತ್ತು ಆಸಕ್ತಿ ಇರುವ ಅಭ್ಯರ್ಥಿಗಳು ನೇಮಕಾತಿಗೆ ಸಂಬಂಧಿಸಿದಂತೆ ಅರ್ಹತೆಗಳು, ಒಟ್ಟು ಹುದ್ದೆಗಳ ವಿವರ, ಅರ್ಜಿ ಸಲ್ಲಿಸುವ ಪ್ರಕ್ರಿಯೆ, ಪ್ರಮುಖ ದಿನಾಂಕಗಳು, ಅರ್ಜಿ ಸಲ್ಲಿಸಲು ಡೈರೆಕ್ಟ್ ಲಿಂಕ್‌ಗಳು ಸೇರಿದಂತೆ ಸಂಪೂರ್ಣ ಮಾಹಿತಿಯನ್ನು ಕೆಳಗೆ ನೀಡಲಾಗಿದೆ.
WCD Chamarajanagar Anganwadi Recruitment 2024:
ಹುದ್ದೆಗಳ ಹೆಸರು: ಅಂಗನವಾಡಿ ಕಾರ್ಯಕರ್ತೆಯರು, ಅಂಗನವಾಡಿ ಸಹಾಯಕಿಯರು
ಒಟ್ಟು ಹುದ್ದೆಗಳ ಸಂಖ್ಯೆ: 207
ಉದ್ಯೋಗದ ಸ್ಥಳ: ಚಾಮರಾಜನಗರ (ಕರ್ನಾಟಕ)
ಖಾಲಿ ಇರುವ ಹುದ್ದೆ:
ಚಾಮರಾಜನಗರ:
ಕಾರ್ಯಕರ್ತೆ 11
ಸಹಾಯಕಿ: 19
ಸಂತೇಮರಹಳ್ಳಿ:
ಕಾರ್ಯಕರ್ತೆ: 09
ಸಹಾಯಕಿ: 15
ಗುಂಡ್ಲುಪೇಟೆ:
ಕಾರ್ಯಕರ್ತೆ: 18
ಸಹಾಯಕಿ: 38
ಕೊಳ್ಳೇಗಾಲ:
ಕಾರ್ಯಕರ್ತೆ: 14
ಸಹಾಯಕಿ: 24
ಹನೂರು :
ಕಾರ್ಯಕರ್ತೆ: 24
ಸಹಾಯಕಿ: 24
ಯಳಂದೂರು:
ಕಾರ್ಯಕರ್ತೆ: 04
ಸಹಾಯಕಿ: 07
ಶೈಕ್ಷಣಿಕ ಅರ್ಹತೆ :
ಅಂಗನವಾಡಿ ಕಾರ್ಯಕರ್ತೆ:
ಕರ್ನಾಟಕದ ಯಾವುದೇ ಶಿಕ್ಷಣ ಸಂಸ್ಥೆಯಿಂದ ಅಭ್ಯರ್ಥಿಗಳು ದ್ವೀತಿಯ ಪಿಯುಸಿ (PUC) ಪಾಸಾಗಿರಬೇಕು. ಹಾಗೂ 10 ನೇ ತರಗತಿಯಲ್ಲಿ ಕನ್ನಡ ಭಾಷೆಯನ್ನು ಪ್ರಥಮ ಅಥವಾ ದ್ವಿತೀಯ ಭಾಷೆಯನ್ನಾಗಿ ಕಡ್ಡಾಯ ಓದಿರಬೇಕು.
ಅಂಗನವಾಡಿ ಸಹಾಯಕಿ:
ಅಭ್ಯರ್ಥಿಗಳು ಯಾವುದೇ ಸಂಸ್ಥೆಯಿಂದ 10 ನೇ ತರಗತಿ (SSLC) ಅಥವಾ ತತ್ಸಮಾನ ವಿದ್ಯಾರ್ಹತೆಯನ್ನು ಹೊಂದಿರಬೇಕು.
WCD Chamarajanagar Anganwadi Recruitment 2024 ವಯೋಮಿತಿ:
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಚಾಮರಾಜನಗರ ನೇಮಕಾತಿ ಅಧಿಸೂಚನೆ ಪ್ರಕಾರ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ಕನಿಷ್ಠ ವಯಸ್ಸು 19 ವರ್ಷ ಪೂರೈಸಿರಬೇಕು ಹಾಗೂ ಗರಿಷ್ಠ 35 ವರ್ಷದೊಳಗೆ ಇರಬೇಕು.
ವಯೋಮಿತಿ ಸಡಿಲಿಕೆ:
ವಿಕಲಚೇತನರಿಗೆ: 10 ವರ್ಷ
ಅರ್ಜಿ ಶುಲ್ಕದ: ಎಲ್ಲಾ ಅಭ್ಯರ್ಥಿಗಳಿಗೆ ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ.
ಆಯ್ಕೆ ವಿಧಾನ:
ಅಭ್ಯರ್ಥಿಗಳು ಅವರು ವಿದ್ಯಾರ್ಹತೆಯಲ್ಲಿ ಪಡೆದಿರುವ ಅಂಕಗಳ ಅಂಕಗಳಿಗನುಸಾರ ಕ್ರೂಡೀಕೃತ ಮೆರಿಟ್ ಪಟ್ಟಿಯನ್ನು ಸಿದ್ಧಪಡಿಸಿ ಅರ್ಹ ಅಭ್ಯರ್ಥಿಗಳನ್ನು ದಾಖಲೆಗಳ ಪರಿಶೀಲನೆ ಮಾಡಿ ಆಯ್ಕೆ ಮಾಡಲಾಗುತ್ತದೆ.
ದಾಖಲೆಗಳು :
- ಜನ್ಮ ದಿನಾಂಕ ಇರುವ 10ನೇ ತರಗತಿ ಅಂಕಪಟ್ಟಿ.
- ಹುದ್ದೆಗೆ ಅನ್ವಯವಾಗುವ ವಿದ್ಯಾರ್ಹತೆಯ ಅಂಕಪಟ್ಟಿ.
- ತಹಶಿಲ್ದಾರರಿಂದ ಪಡೆದ 3 ವರ್ಷದ ವಾಸಸ್ಥಳ ದೃಢೀಕರಣ ಪತ್ರ.
- ಅಭ್ಯರ್ಥಿಗಳ ಜಾತಿ ಪ್ರಮಾಣ ಪತ್ರ.
- ಪತಿಯ ಮರಣ ಪ್ರಮಾಣ ಪತ್ರ ಹಾಗೂ ವಿಧವಾ ಪ್ರಮಾಣ ಪತ್ರ (ವಿಧವಾ ವೇತನದ ದೃಢಿಕರಣವನ್ನು ಪರಿಗಣಿಸುವಂತಿಲ್ಲ)
- ವಿಕಲಚೇತನ ಪ್ರಮಾಣಪತ್ರ (ಅಂಗವಿಕಲ ವೇತನದ ದೃಢೀಕರಣವನ್ನು ಪರಿಗಣಿಸುವಂತಿಲ್ಲ)
- ವಿಚ್ಛೇದನ ಪ್ರಮಾಣ ಪತ್ರ (ನ್ಯಾಯಾಲಯದಿಂದ ಪಡೆದಿರಬೇಕು)
ಪ್ರಮುಖ ದಿನಾಂಕಗಳು:
ಅರ್ಜಿ ಸ್ವೀಕರಿಸಲು ಪ್ರಾರಂಭದ ದಿನಾಂಕ: 01/11/2024
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : ನವೆಂಬರ್ 27/ 2024
WCD Chamarajanagar Anganwadi Recruitment 2024 ಪ್ರಮುಖ ಲಿಂಕ್‌ಗಳು:
ಅಧಿಸೂಚನೆ ನೋಡಲು: ಇಲ್ಲಿ ಕ್ಲಿಕ್ ಮಾಡಿ
ಆನ್‌ಲೈನ್ ಅರ್ಜಿ ಸಲ್ಲಿಸಲು: ಇಲ್ಲಿ ಕ್ಲಿಕ್ ಮಾಡಿ
ವೆಬ್‌ಸೈಟ್ ವಿಳಾಸ: karnemakaone.kar.nic.in